ಮನೆಯಲ್ಲಿ ಇದೊಂದು ರೀತಿಯ ನಾಣ್ಯ ಇಟ್ಟರೆ ಸಾಕು, ನಿಮ್ಮ ಜೀವನವೇ ಬದಲಾಗಿ ನಿಮಗೆ ಹಣದ ಸಮಸ್ಯೆ ಇರುವುದಿಲ್ಲ. ಯಾವ ರೀತಿಯದ್ದು ಗೊತ್ತೇ?
ಜೀವನದಲ್ಲಿ ಎಲ್ಲರೂ ಸಹ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಣ ಎನ್ನುವುದು ಎಲ್ಲರ ಜೀವನದಲ್ಲೂ ಬಹಳ ಮುಖ್ಯವಾದ ವಿಚಾರ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು, ಹಲವರು ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರದ ಮೊರೆ ಹೋಗುತ್ತಾರೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಒಂದು ನಾಣ್ಯದಿಂದ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಆ ನಾಣ್ಯದ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..
ಆರ್ಥಿಕ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಸಹಾಯ ಮಾಡುವುದು ಬೆಳ್ಳಿ ನಾಣ್ಯ. ಇದು ಕೇವಲ ಬೆಳ್ಳಿ ನಾಣ್ಯ ಆಗಿರುವುದಿಲ್ಲ, ಬದಲಾಗಿ ಗಣೇಶ, ಲಕ್ಷ್ಮೀದೇವಿ ಮತ್ತು ಶುಕ್ರ ಗ್ರಹ ಇರುವ ಬೆಳ್ಳಿ ನಾಣ್ಯ ಆಗಿರಲಿದೆ. ಈ ಮೂರು ದೇವರುಗಳ ಆಶೀರ್ವಾದ ಪಡೆದವರು ಆರ್ಥಿಕ ಸಮಸ್ಯೆಯಿಂದ ಮುಕ್ತಿ ಪಡೆಯುತ್ತಾರೆ. ಒಂದು ಕಡೆ ಗಣೇಶನ ಚಿತ್ರ, ಮತ್ತೊಂದು ಕಡೆ ಲಕ್ಷ್ಮೀದೇವಿ ಚಿತ್ರ ಇರುವ ನಾಣ್ಯ ಸಿಗುತ್ತದೆ ಇದನ್ನು ಮನೆಯಲ್ಲಿ ಇಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ ಪರಿಹಾರವಾಗುತ್ತದೆ. ಇದನ್ನು ಸ್ಥಾಪಿಸಲು ಒಂದು ವಿಧಾನ ಇದೆ. ಶುಕ್ರವಾರದ ದಿನ ಈ ನಾಣ್ಯವನ್ನು ಮನೆಗೆ ತರಬೇಕು, ಹರಿಯುವ ನೀರಿನಲ್ಲಿ ನಾಣ್ಯವನ್ನು ತೊಳೆಯಬೇಕು, ಬಳಿಕ ಇದನ್ನು ಲಕ್ಷ್ಮೀದೇವಿ ಮತ್ತು ಗಣೇಶನ ವಿಗ್ರಹ ಇರುವ ದೇವರ ಕೋಣೆಯಲ್ಲಿ ಇಡಬೇಕು. ಈ ನಾಣ್ಯಕ್ಕೆ ಭಯ ಮತ್ತು ಭಕ್ತಿಯಿಂದ ಪೂಜೆ ಮಾಡಬೇಕು. ಗಣೇಶನಿಗೆ ಇಷ್ಟ ಆಗುವಂಥ ತಿನಿಸುಗಳನ್ನು ನೈವೇದ್ಯವಾಗಿ ಇಡಬೇಕು.
ನಂತರ ನಿಮ್ಮ ಆಶಯವನ್ನು ಸಂಕಲ್ಪದ ಹಾಗೆ ಹೇಳಿಕೊಳ್ಳಬೇಕು. ಬಳಿಕ ಸಂಜೆಯ ಆರತಿಯ ನಂತರ ಈ ಬೆಳ್ಳಿ ನಾಣ್ಯವನ್ನು ತೆಗೆದುಹಾಕಲಾಗುತ್ತದೆ. ಇದರ ಜಾಗದಲ್ಲಿ 1 ರೂಪಾಯಿ ಅಥವಾ 5 ರೂಪಾಯಿಯ ಏಳು ನಾಣ್ಯಗಳನ್ನು ಇಡಲಾಗುತ್ತದೆ. ಬೆಳ್ಳಿ ನಾಣ್ಯವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಈ ದಿಕ್ಕಿನಲ್ಲಿ ಮನೆಯ ತಿಜೋರಿಯನ್ನು ಸಹ ಇಡಲಾಗುತ್ತದೆ. ಇನ್ನು ದೇವರಿಗೆ ಇಟ್ಟಿದ್ದ 1 ಮತ್ತು 5 ರೂಪಾಯಿ ನಾಣ್ಯಗಳನ್ನು ರಾತ್ರಿ ಹೊತ್ತಿನ ನಂತರ, ಮಡಿಕೆಯೊಂದಿಗೆ ಹೂಳಲಾಗುತ್ತದೆ.ಈ ಕ್ರಮ ಅನುಸರಿಸಿ ನಿಮ್ಮ ಆರ್ಥಿಕ ಸಮಸ್ಯೆ ಕಡಿಮೆಯಾದ ಬಳಿಕ, ನೀವು ಅನ್ನದಾನ ಮಾಡಬೇಕು, ಬಡಮಕ್ಕಳಿಗೆ ವಿದ್ಯೆಗೆ ಸಹಾಯ ಮಾಡಬೇಕು. ಹಣ ಬಂತೆಂದು, ಅಧರ್ಮದ ಹಾದಿಗೆ ಹೋದರೆ, ಅಷ್ಟೇ ವೇಗದಲ್ಲಿ ಅದು ಕಣ್ಮರೆಯಾಗುವುದು ಖಂಡಿತ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಜೊತೆಗೆ ಮನೆಯ ಸದಸ್ಯರು ಸಹ, ಆಂತರಿಕವಾಗಿ ಶುದ್ಧಿ ಹೊಂದಿರಬೇಕು, ಅತಿಥಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಇದರಿಂದ ಲಕ್ಷ್ಮೀದೇವಿ ನಿಮ್ಮೊಡನೆ ಇರುವ ಹಾಗೆ ನೋಡಿಕೊಳ್ಳಬಹುದು.
Comments are closed.