Neer Dose Karnataka
Take a fresh look at your lifestyle.

ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ ಎಂದು ಹೊರಹಾಕಿ ಎನ್ನುವ ಕ್ರಿಕೆಟ್ ಪಂಡಿತರೇ, ತೆರೆ ಹಿಂದೆ ಏನಾಗಿದೆ ಗೊತ್ತೇ?? ಕೊಹ್ಲಿ ಅಸಲಿ ಕಥೆ ಏನು ಗೊತ್ತೇ??

ಕ್ರಿಕೆಟ್ ಲೋಕದಲ್ಲಿ ಈಗ ಎಲ್ಲರೂ ವಿರಾಟ್ ಕೋಹ್ಲಿ ಅವರ ಫಾರ್ಮ್ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ವಿರಾಟ್ ಕೋಹ್ಲಿ ಅವರು ಈಗ ಖಂಡಿತವಾಗಿ ಫಾರ್ಮ್ ನಲ್ಲಿಲ್ಲ, ಅವರು ಕಳೆದ ಹಲವು ಪಂದ್ಯಗಳಿಂದ ಕಳಪೆ ಪ್ರದರ್ಶನ ನೀಡುತ್ತಲೇ ಇದ್ದಾರೆ. ಟಿ20 ಪಂದ್ಯಗಳಿಗೆ ಕೋಹ್ಲಿ ಸೂಕ್ತರಲ್ಲ, ವಿಶ್ವಕಪ್ ಪಂದ್ಯಗಳಿಗೆ ಕೋಹ್ಲಿ ಅವರನ್ನು ಆಯ್ಕೆ ಮಾಡದೆ ಇರುವುದೇ ಒಳ್ಳೆಯದು ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ. ಆದರೆ ಕೋಹ್ಲಿ ಅವರ ಅಂಕಿ ಅಂಶ ಮತ್ತು ಇತರೆ ವಿಚಾರಗಳು ಬೇರೆಯದೇ ರೀತಿಯಲ್ಲಿವೆ. ನಿಜಕ್ಕೂ ಕೋಹ್ಲಿ ಫಾರ್ಮ್ ಕಳೆದುಕೊಂಡಿದ್ದಾರಾ?

ಕೋಹ್ಲಿ ಅವರು ಆಡಿರುವ ಕಳೆದ 8 ಮ್ಯಾಚ್ ಗಳಲ್ಲಿ ಮೂರು ಅರ್ಧ ಶತಕ ಗಳಿಸಿದ್ದಾರೆ, 8 ಮ್ಯಾಚ್ ಗಳಲ್ಲಿ ಕೋಹ್ಲಿ ಅವರು ಕೋಹ್ಲಿ ಅವರು ಗಳಿಸಿದ್ದು, 229 ರನ್ ಗಳು. ಕೋಹ್ಲಿ ಅವರ ಈ ಅಂಕಿ ಅಂಶ ನೋಡಿದರೆ, ಅವರು ಫಾರ್ಮ್ ನಲ್ಲಿಯೇ ಇದ್ದಾರೆ ಎಂದು ಗೊತ್ತಾಗುತ್ತದೆ. ಕಳೆದ 10 ಪಂದ್ಯಗಳಲ್ಲಿ ನಾಲ್ಕು ಅರ್ಧ ಶತಕ ಗಳಿಸಿದ್ದಾರೆ. ಇನ್ನು ಕೋಹ್ಲಿ ಅವರಿಗಿಂತ ಕಡಿಮೆ ಪ್ರದರ್ಶನ ನೀಡಿರುವುದು ತಂಡದ ನಾಯಕ ರೋಹಿತ್ ಶರ್ಮಾ, 8 ಪಂದ್ಯಗಳಲ್ಲಿ ಅವರು ಕೇವಲ 2 ಅರ್ಧ ಶತಕ ಗಳಿಸಿದ್ದಾರೆ, 129 ರನ್ ಗಳನ್ನು ಗಳಿಸಿದ್ದಾರೆ. ಇನ್ನುಳಿದ ಹಾಗೆ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ ಅವರು ಸಹ ಹೇಳಿಕೊಳ್ಳುವಂಥ ಪ್ರದರ್ಶನವೇನು ನೀಡಿಲ್ಲ. ಆದರೆ ಅವರ್ಯಾರ ಬಗ್ಗೆಯೂ ಚರ್ಚೆ ಆಗುತ್ತಿಲ್ಲ.

ವಿರಾಟ್ ಕೋಹ್ಲಿ ಅವರ ಬಗ್ಗೆ ಮಾತ್ರ ಚರ್ಚೆಗಳು ಶುರುವಾಗಿವೆ. ಹಾಗಾಗಿ ಮಾಜಿ ಆಟಗಾರರಾದ ಸುನೀಲ್ ಗವಾಸ್ಕರ್, “ಒಂದು ವಿಷಯ ನನಗೆ ಅರ್ಥವಾಗುತ್ತಿಲ್ಲ, ತಂಡದ ನಾಯಕ ರೋಹಿತ್ ಶರ್ಮಾ ರನ್ ಗಳಿಸದೆ ಇದ್ದಾಗ, ಯಾರು ಏನು ಮಾತನಾಡುವುದಿಲ್ಲ, ಆದರೆ ವಿರಾಟ್ ಕೋಹ್ಲಿ ವಿಚಾರದಲ್ಲಿ ಮಾತ್ರ ಯಾಕೆ ಹೀಗೆ ಮಾತನಾಡುತ್ತಾರೆ..?” ಎಂದು ಟೀಕೆ ಮಾಡುವವರಿಗೆ ಪ್ರಶ್ನೆ ಮಾಡಿದ್ದಾರೆ ಸುನೀಲ್ ಗವಾಸ್ಕರ್. ಕಪಿಲ್ ದೇವ್ ಅವರು, ವೀರೇಂದ್ರ ಸೆಹ್ವಾಗ್ ಅವರು ಸಹ ಇದೇ ವಿಚಾರದ ಬಗ್ಗೆ ಮಾತನಾಡಿ, ಎರಡು ಪಂದ್ಯಗಳಲ್ಲಿ ಮಾತ್ರ ವಿರಾಟ್ ಕೋಹ್ಲಿ ಅವರ ಪ್ರದರ್ಶನ ಚೆನ್ನಾಗಿರಲಿಲ್ಲ, ಇನ್ನುಳಿದ ಹಾಗೆ ಎಲ್ಲಾ ಪಂದ್ಯಗಳಲ್ಲೂ ಒಳ್ಳೆಯ ಪ್ರದರ್ಶನವನ್ನೇ ನೀಡಿದ್ದಾರೆ ಎಂದು ಹೇಳಿದ್ದಾರೆ. ಸರಿಯಾಗಿ ನೋಡುವುದಾದರೆ, ವಿರಾಟ್ ಕೋಹ್ಲಿ ಅವರಿಗಿಂತ ಮೊದಲು ಬೇರೆಯ ಆಟಗಾರರೆ, ತಂಡದಿಂದ ಹೊರಹೋಗುವ ಹಾಗೆ ಆಗಿದೆ

Comments are closed.