ಖ್ಯಾತ ಉದ್ಯಮಿ ಮಗಳಾದ ಲಕ್ಷ್ಮಿ ಪ್ರಣತಿಯನ್ನು ಮದುವೆಯಾಗಲು ಜೂನಿಯರ್ NTR ತೆಗೆದುಕೊಂಡ ವರದಕ್ಷಿಣೆ ಎಷ್ಟು ಗೊತ್ತಾ??
ತೆಲುಗು ಚಿತ್ರರಂಗದಲ್ಲಿ ಬಹುಮುಖ್ಯ ನಟನಾಗಿ ಗುರುತಿಸಿಕೊಂಡಿರುವವರು ಎನ್.ಟಿ.ಆರ್ ಅವರು. ನಂದಮೂರಿ ತಾರಕ ರಾಮಾ ರಾವ್ ಅವರ ಬಗ್ಗೆ ಗೊತ್ತಿಲ್ಲದೇ ಇರುವವರು ಇರಲು ಸಾಧ್ಯವಿಲ್ಲ. ಇವರು 50, 60 ಮತ್ತು 70ರ ದಶಕದಲ್ಲಿ ನಟಿಸದ ಪಾತ್ರವಿಲ್ಲ. ಒಂದು ಜಾನರ್ ಗೆ ಫಿಕ್ಸ್ ಆಗದೆ, ಎಲ್ಲಾ ಜಾನರ್ ಗಳ ಸಿನಿಮಾಗಳಲ್ಲೂ ನಟಿಸಿ, ಅತ್ಯಂತ ಶ್ರೇಷ್ಠ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಸಿನಿಮಾ ಮಾತ್ರವಲ್ಲದೆ, ಜನಸೇವೆ ಮಾಡುವ ಸಲುವಾಗಿ ರಾಜಕೀಯಕ್ಕೂ ಎಂಟ್ರಿ ಕೊಟ್ಟು, ರಾಜ್ಯದ ಸಿಎಂ ಆಗಿ ಆಯ್ಕೆಯಾಗಿದ್ದವರು. ಇವರ ವಾರಸುದಾರರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಹರಿಕೃಷ್ಣ, ಹರಿಕೃಷ್ಣ ಅವರು ನಟನಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಲಿಲ್ಲ. ಎನ್.ಟಿ.ಆರ್ ಅವರ ಮತ್ತೂಬ್ಬ ವಾರಸುದಾರನಾಗಿ ಎಂಟ್ರಿ ಕೊಟ್ಟವರು ಬಾಲಯ್ಯ.
ಇವರು ತೆಲುಗು ಚಿತ್ರರಂಗದ ಟಾಪ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ, ಸೂಪರ್ ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ಇತ್ತೀಚಿಗೆ ಇವರು ಅಭಿನಯಿಸಿದ ಅಖಂಡ ಸಿನಿಮಾ ಬ್ಲಾಕ್ ಬಸ್ಟರ್ ಆಯಿತು. ಇನ್ನು ಹರಿಕೃಷ್ಣ ಅವರ ವಾರಸುದಾರನಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ನಟ ಜ್ಯೂನಿಯರ್ ಎನ್.ಟಿ.ಆರ್. ಸ್ಟೂಡೆಂಟ್ ನಂಬರ್1 ಸಿನಿಮಾ ಮೂಲಕ ನಟನೆ ಶುರು ಮಾಡಿದ ಜ್ಯೂನಿಯರ್ ಎನ್.ಟಿ.ಆರ್ ಅವರು ಸಿಂಹಾದ್ರಿ ಸಿನಿಮಾ ಮೂಲಕ ಮಾಸ್ ಹೀರೋ ಆಗಿ ಗುರುತಿಸಿಕೊಂಡರು. ಬಳಿಕ ಕೆಲವು ಸಿನಿಮಾಗಳು ಫ್ಲಾಪ್ ಆದವು, ನಂತರ ರಾಜಮೌಳಿ ಅವರು ನಿರ್ದೇಶನ ಮಾಡಿದ ಯಮದೊಂಗ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದರು. ಬಳಿಕ ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ.
ನಾನ್ನಕು ಪ್ರೇಮತೋ, ಜನತಾ ಗ್ಯಾರೇಜ್, ಇತ್ತೀಚಿನ ಆರ್.ಆರ್.ಆರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ ಜ್ಯೂನಿಯರ್ ಎನ್.ಟಿ.ಆರ್. ಜ್ಯೂನಿಯರ್ ಎನ್.ಟಿ.ಆರ್ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ, ಖ್ಯಾತ ಉದ್ಯಮಿ ಶ್ರೀನಿವಾಸ್ ರಾವ್ ಅವರ ಮಗಳು ಲಕ್ಷ್ಮಿ ಪ್ರಣತಿ ಅವರೊಡನೆ ಮದುವೆಯಾದರು, ಈ ಮದುವೆ ಸಮಯದಲ್ಲಿ ಶ್ರೀನಿವಾಸ್ ರಾವ್ ಅವರು ಸುಮಾರು 500 ಕೋಟಿ ರೂಪಾಯಿ ವರೆಗೂ ಆಸ್ತಿ ಹಣವನ್ನು ನೀಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಪ್ರಸ್ತುತ ಲಕ್ಷ್ಮಿ ಪ್ರಣತಿ ಅವರು ಹಾಗೂ ಜ್ಯೂನಿಯರ್ ಎನ್.ಟಿ.ಆರ್ ಅವರು ಸುಂದರವಾದ ಸಂಸಾರ ನಡೆಸುತ್ತಿದ್ದು, ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಮೊದಲ ಮಗನ ಹೆಸರು ಅಭಯ್ ರಾಮ್, ಎರಡನೇ ಮಗನ ಹೆಸರು ಭಾರ್ಗವ್ ರಾಮ್.
Comments are closed.