ತನ್ನ ಮೂರನೇ ಹೆಂಡತಿ ಕಾಟ ತಪ್ಪಿಸಿಕೊಳ್ಳಲು ಮಹಾ ಪ್ಲಾನ್ ಮಾಡಿದರೆ ನರೇಶ್?? ಹೋಟೆಲ್ ನಲ್ಲಿ ಪವಿತ್ರ ರವರ ಜೊತೆ ಇರುವ ವಿಚಾರದಲ್ಲಿ ಮತ್ತೊಂದು ಟ್ವಿಸ್ಟ್. ಏನು ಗೊತ್ತೇ?
ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವರ ವಿಚಾರ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಮಾಧ್ಯಮದ ಎದುರು ಬಂದು ಈ ವಿಚಾರ ಮಾತನಾಡಿದ ಬಳಿಕ, ಇನ್ನು ದೊಡ್ಡದಾಯಿತು. ನರೇಶ್ ಅವರು ವ್ಯಕ್ತಿತ್ವ ಸರಿಯಿಲ್ಲ, ಅವರು ಹೆಣ್ಣುಬಾಕ, ಪವಿತ್ರಾ ಲೋಕೇಶ್ ಅವರೊಡನೆ ವಿಲಿನ್ ರಿಲೇಶನ್ಷಿಪ್ ನಲ್ಲಿದ್ದಾರೆ ಎಂದೆಲ್ಲಾ ಹೇಳಿಕೆಗಳನ್ನು ನೀಡಿದ್ದರು. ಜೊತೆಗೆ ಮೈಸೂರಿನ ಹೋಟೆಲ್ ಒಂದರಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರು ಜೊತೆಯಾಗಿದ್ದ ವಿಚಾರ ತಿಳಿದು,ರಮ್ಯಾ ರಘುಪತಿ ಅವರು ಅಲ್ಲಿಗೆ ಬಂದು, ಜಗಳವಾಡಿ ಅದೊಂದು ಹೈಡ್ರಾಮಾ ಕ್ರಿಯೇಟ್ ಆಗಿತ್ತು. ಈ ವಿಚಾರದ ಬಗ್ಗೆ ಈಗ ಬೇರೆಯದೇ ಸುದ್ದಿ ಕೇಳಿ ಬರುತ್ತಿದೆ.
ಮೈಸೂರಿನಲ್ಲಿ ಹೈಡ್ರಾಮ ಕ್ರಿಯೇಟ್ ಆಗಲು ಕಾರಣ, ನಟ ನರೇಶ್ ಅವರ ಪ್ಲಾನ್ ಎನ್ನಲಾಗುತ್ತಿದೆ. ನರೇಶ್ ಅವರೇ ಪ್ಲಾನ್ ಮಾಡಿ, ರಮ್ಯಾ ರಘುಪತಿ ಅವರಿಗೆ ಮೈಸೂರಿನಲ್ಲಿ ಪವಿತ್ರಾ ಅವರೊಡನೆ ಇರುವ ವಿಚಾರ ತಿಳಿಸಿದ್ದರು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ರಮ್ಯಾ ರಘುಪತಿ ಅವರಿಗೆ ವಿಚಾರ ತಿಳಿದರೆ, ಅವರು ಬಂದು ರಂಪಾಟ ಮಾಡುತ್ತಾರೆ. ಅದೇ ರೀತಿ ಆಗಬೇಕು ಎಂದು ನರೇಶ್ ಅವರು ಈ ಪ್ಲಾನ್ ಮಾಡಿದ್ದರಂತೆ. ರಮ್ಯಾ ಅವರಿಂದ ನರೇಶ್ ಅವರು ಕಾನೂನಿನ ಮೂಲಕ ಇನ್ನು ವಿಚ್ಛೇದನ ಪಡೆದಿಲ್ಲ. ಇತ್ತ ರಮ್ಯಾ ಅವರು ವಿಚ್ಛೇದನ ಕೊಡುವುದಿಲ್ಲ ಎಂದು ಹೇಳಿಕೆಗಳನ್ನು ನೀಡಿದ್ದರು.
ಹಾಗಾಗಿ ನರೇಶ್ ಅವರೇ ಪ್ಲಾನ್ ಮಾಡಿ ರಮ್ಯಾ ಅವರು ಮೈಸೂರಿಗೆ ಬಂದು ರಂಪ ಮಾಡುವ ಹಾಗೆ ಮಾಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಈ ರೀತಿ ರಂಪವಾದರೆ ವಿಚ್ಛೇದನವನ್ನು ಬೇಗ ಪಡೆಯಬಹುದು ಎಂದು ಈ ರೀತಿ ಮಾಡಿದ್ದಾರಂತೆ ನಟ ನರೇಶ್. ಈಗ ಕಾನೂನಿನ ನಿಯಮಗಳು ಬದಲಾಗಿದ್ದು, ಒಬ್ಬರ ಜೊತೆಗೆ ಮತ್ತೊಬ್ಬರು ಸ್ವಇಚ್ಛೆಯಿಂದ ಇರಬಹುದು, ಅದು ಕಾನೂನಿನ ಪ್ರಕಾರ ತಪ್ಪಲ್ಲ, ಆ ವಿಷಯ ನರೇಶ್ ಅವರಿಗೆ ಗೊತ್ತಿರುವ ಕಾರಣ, ಪವಿತ್ರಾ ಲೋಕೇಶ್ ಅವರೊಡನೆ ಹೋಟೆಲ್ ರೂಮ್ ನಲ್ಲಿದ್ದರು, ಈ ರೀತಿ ಪ್ಲಾನ್ ಮಾಡಿ ರಮ್ಯಾ ಅವರು ಬರುವ ಹಾಗೆ ಮಾಡಿದರು ಎನ್ನುವ ಸುದ್ದಿ ಈಗ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
Comments are closed.