ಬಹಳ ಕಡಿಮೆ ಸಮಯದಲ್ಲಿಯೇ ಯಶಸ್ಸು ಗಳಿಸಿ ದೇಶದ ಮನ ಗೆದ್ದಿರುವ ರಶ್ಮಿಕಾ ರವರ ಬಳಿ ಇರುವ ಐಷಾರಾಮಿ ವಸ್ತುಗಳು ಯಾವ್ಯಾವು ಗೊತ್ತೇ? ಬೆಲೆ ಕೇಳಿದರೆ ತಲೆ ತಿರುಗುತ್ತದೆ.
ನಟಿ ರಶ್ಮಿಕಾ ಮಂದಣ್ಣ ನಮ್ಮ ಟಾಲಿವುಡ್‌ನಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಸಿನಿಮಾಗಳು ಮತ್ತು ವೆಬ್ ಸೀರೀಸ್ ಮಾಡುತ್ತಿದ್ದಾರೆ. ಮೊದಲು ಕನ್ನಡದಲ್ಲಿ ವೃತ್ತಿ ಜೀವನ ಆರಂಭಿಸಿದ ರಶ್ಮಿಕಾ ನಂತರ ಟಾಲಿವುಡ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ಸದ್ಯಕ್ಕೆ ಬಾಲಿವುಡ್ ನಲ್ಲಿ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಈ ಜರ್ನಿಯಲ್ಲಿ ಎಷ್ಟು ಆಸ್ತಿ ಗಳಿಸಿದ್ದಾರೆ? ರಶ್ಮಿಕಾ ಅವಈ ಬಳಿ ಏನೆಲ್ಲಾ ಐಷಾರಾಮಿ ವಸ್ತುಗಳು ಇವೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದೆ. ಇಂದು ಅವುಗಳ ಬಗ್ಗೆ ನಿಮಗೆ ತಿಳಿಸುತ್ತೇವೆ.
ತೆಲುಗಿನಲ್ಲಿ ಗೀತ ಗೋವಿಂದಂ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ರಶ್ಮಿಕಾ, ಸರಿಲೇರು ನೀಕೆವ್ವರು ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆಗಿ ಮೆರೆದರು. ಈ ನಟಿ 50 ಲಕ್ಷ ರೂಪಾಯಿಗಯಮರ್ಸಿಡಿಸ್ ಬೆಂಜ್ ಸಿ ಕ್ಲಾಸ್ ಕಾರನ್ನು ಖರೀದಿಸಿದ್ದಾರೆ. ಇದಲ್ಲದೆ, ಅವರ ಗ್ಯಾರೇಜ್‌ನಲ್ಲಿ ಆಡಿ ಕ್ಯೂ3 ಕಾರನ್ನು ಸಹ ಹೊಂದಿದ್ದಾರೆ ಹಾಗೂ ಪ್ರಸ್ತುತ ಅವರ ಬಳಿ ಟೊಯೊಟಾ ಇನ್ನೋವಾ ಹ್ಯುಂಡೈ ಕ್ರೆಟಾ ಕಾರುಗಳಿವೆ. ಇದಲ್ಲದೆ, ರಶ್ಮಿಕಾ ಹ್ಯಾಂಡ್‌ಬ್ಯಾಗ್‌ಗಳನ್ನು ತುಂಬಾ ಇಷ್ಟಪಡುತ್ತಾರೆ, ಅದಕ್ಕಾಗಿಯೇ ಅವರು ಎಲ್ಲಾ ರೀತಿಯ ಬ್ರಾಂಡ್‌ಗಳ ಹ್ಯಾಂಡ್‌ಬ್ಯಾಗ್‌ಗಳನ್ನು ಖರೀದಿ ಮಾಡುತ್ತಾರೆ.
ಮೂರು ಲಕ್ಷ ರೂಪಾಯಿಯ ಒಂದು ಹ್ಯಾಂಡ್ ಬ್ಯಾಗ್ ಅನ್ನು ಸಹ ರಶ್ಮಿಕಾ ಖರೀದಿ ಮಾಡಿದ್ದಾರೆ. ಇದಲ್ಲದೆ ರಶ್ಮಿಕಾ ಬೆಂಗಳೂರಿನಲ್ಲಿ 8 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನೂ ಹೊಂದಿದ್ದಾರೆ. ಇತ್ತೀಚೆಗಷ್ಟೇ ಮುಂಬೈನ ಐಷಾರಾಮಿ ಏರಿಯಾದಲ್ಲಿ ರಶ್ಮಿಕಾ ದುಬಾರಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಸದ್ಯ ಮುಂಬೈಗೆ ಸಾಕಷ್ಟು ಪ್ರವಾಸ ಮಾಡುತ್ತಿರುವ ರಶ್ಮಿಕಾ ಹೈದರಾಬಾದ್‌ನಲ್ಲಿ ಎರಡು ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ. ಪ್ರತಿ ಸಿನಿಮಾಗೆ ಮೂರ್ನಾಲ್ಕು ಕೋಟಿ ರೂಪಾಯಿ ಪಡೆಯುವ ರಶ್ಮಿಕಾ ಶೂಗಳನ್ನು ಸಹ ತುಂಬಾ ಇಷ್ಟ ಪಡ್ತಾರೆ. ಆಗಾಗ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಹೈ ಹೀಲ್ಸ್, ಶೂ ಖರೀದಿ ಮಾಡುತ್ತಾರಂತೆ.
Comments are closed.