Neer Dose Karnataka
Take a fresh look at your lifestyle.

ಒಂದಲ್ಲ ಎರಡಲ್ಲ 12 ವರ್ಷಗಳ ನಂತರ ನಾಪತ್ತೆಯಾಗಿದ್ದ ಪತ್ನಿ ಗಂಡನ ಬಳಿಗೆ ವಾಪಸ್ಸು ಬಂದ ಮಹಿಳೆ. ಬರುವಷ್ಟರಲ್ಲಿ ಪರಿಸ್ಥಿತಿ ಏನಾಗಿತ್ತು ಗೊತ್ತೇ?

66

ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಅತ್ಯಂತ ಭಾವನಾತ್ಮಕ ಪ್ರಕರಣವೊಂದು ಬೆಳಕಿಗೆ ಬಂದಿದೆ. 12 ವರ್ಷಗಳ ಹಿಂದೆ ಒಬ್ಬ ವ್ಯಕ್ತಿಯ ಪತ್ನಿ ನಾಪತ್ತೆಯಾಗಿದ್ದರು. ಆದರೆ ಅವಳು ಹಿಂತಿರುಗಿದಾಗ ಅವಳ ಸಂತೋಷ ಹೇಳತೀರದು. ಅದೇ ಸಮಯದಲ್ಲಿ, ಮಹಿಳೆಯ 4 ಮಕ್ಕಳು ಸಹ 12 ವರ್ಷಗಳ ನಂತರ ಅವರ ಕಾಣೆಯಾದ ತಾಯಿಯೊಂದಿಗೆ ಸಿಕ್ಕಿದ್ದಾರೆ. ಈ ಮಹಿಳೆಯ ಗಂಡನ ಹೆಸರು ನತ್ತು ಸಿಂಗ್. ಬಿಹಾರದ ಏಕೈಕ ಮಾನಸಿಕ ಆಸ್ಪತ್ರೆಯಾದ ಕೊಯಿಲ್ವಾರ್‌ನಲ್ಲಿ ಕಾಣೆಯಾದ ಆತನ ಹೆಂಡತಿ ಸಿಕ್ಕಿದ್ದಾರೆ. ನತ್ತು ಸಿಂಗ್ ಅವರ ಪತ್ನಿ ಸರಿತಾ ಆಗಾಗ ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದರು. ಮಾನಸಿಕ ಅಸ್ವಸ್ಥೆಯಾಗಿದ್ದ ಕಾರಣ ಅಕ್ಕಪಕ್ಕದರಿಗೆ ತೊಂದರೆ ಕೊಡುತ್ತಿದ್ದರು. ಆಕೆಯ ಈ ರೋಗ ಮುಂದುವರೆದಾಗ ನೆರೆಹೊರೆಯ ಜನರು ಆಕ್ಷೇಪಣೆ ಮಾಡಲು ಶುರು ಮಾಡಿದ್ದತು. ಅವರನ್ನು ಬಹಿಷ್ಕರಿಸಿದರು. ಇದರಿಂದಾಗಿ ವಿಚಲಿತನಾದ ನತ್ತು ತನ್ನ ಪತ್ನಿಯೊಂದಿಗೆ ಬಿಜ್ನೋರ್ ಜಿಲ್ಲೆಯ ಶೆರ್ಕೋಟ್ ಪೊಲೀಸ್ ಠಾಣೆಯ ಪಾಲಿಕಿ ಗ್ರಾಮದಲ್ಲಿ ನೆಲೆಸಲು ಪ್ರಾರಂಭಿಸಿದನು.

ಆದರೆ ಒಂದು ದಿನ ಇದ್ದಕ್ಕಿದ್ದಂತೆ ಆತನ ಪತ್ನಿ ಸರಿತಾ ನಾಪತ್ತೆಯಾದಳು. ಸಂಬಂಧಿಕರು ಆಕೆಗಾಗಿ ಸಾಕಷ್ಟು ಹುಡುಕಾಟ ನಡೆಸಿದರಿ. ಈ ಕುರಿತು ಪೊಲೀಸರಿಗು ದೂರು ನೀಡಲಾಗಿತ್ತು. ಆದರೆ ಸರಿತಾ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಈ ಘಟನೆ ನಡೆದು 12 ವರ್ಷಗಳು ಕಳೆದಿವೆ. ಈ ವರ್ಷ ಜೂನ್ 29 ರಂದು ಅಫಜಲಗಢದ ಎಸ್‌ಎಚ್‌ಒ ಅವರಿಂದ ಸರಿತಾ ಬಗ್ಗೆ ಗ್ರಾಮದ ಮುಖ್ಯಸ್ಥರಿಗೆ ಕರೆ ಬಂದಿತ್ತು. ನಂತರ ಸರಿತಾ ಕುಟುಂಬದ ಸದಸ್ಯರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಅವರ ಹೆಂಡತಿ ಸಂತೋಷವಾಗಿ ಇರುವುದನ್ನು ನೋಡಿದ ಜನರು ಸಹ ಸಂತೋಷಪಟ್ಟಿದ್ದಾರೆ. ಬಳಿಕ ಸರಿತಾಳನ್ನು ಕರೆದುಕೊಂಡು ಬರಲು ನತ್ತು ಮತ್ತು ಆತನ ಮಗ ಕಮಲ್ ಬಿಹಾರಕ್ಕೆ ತೆರಳಿದ್ದರು. ಸರಿತಾ ಅವರ ಸಹೋದರಿ ಊರ್ಮಿಳಾ ದೇವಿ ಮತ್ತು ಅವರ ಪತಿ ಅನೂಪ್ ಕುಮಾರ್ ಕೂಡ ಜಾರ್ಖಂಡ್ ಇಂದ ಬಂದಿದ್ದರು.

12 ವರ್ಷಗಳ ನಂತರ ಪತಿ ಮತ್ತು ಮಗನನ್ನು ಕಂಡ ಸರಿತಾ ಅಳಲು ತೋಡಿಕೊಂಡರು. ಸರಿತಾ ನಾಪತ್ತೆಯಾದ ನಂತರ ಹೇಗೋ ಪಾಟ್ನಾದ ಶಾಂತಿ ಕುಟೀರ ಸಂಸ್ಥೆಯನ್ನು ತಲುಪಿದ ಬಗ್ಗೆ ಗಂಡನಿಗೆ ಹೇಳಿದ್ದಾರೆ. ಆ ಸಂಸ್ಥೆಯು ಅವರನ್ನು 2020 ರಲ್ಲಿ ಚಿಕಿತ್ಸೆಗಾಗಿ ಕೊಯಿಲ್ವಾರ್ ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಸರಿತಾಗೆ ಒಂದು ವರ್ಷ ಚಿಕಿತ್ಸೆ ನೀಡಲಾಗಿತ್ತು. ನಂತರ ಶಾಂತಿ ಕುಟೀರ ಸಂಸ್ಥಾನಕ್ಕೆ ಮರಳಿ ಬಂದರು. ಆದರೆ ಸಂಪೂರ್ಣ ಚೇತರಿಸಿಕೊಳ್ಳಲು ಅವರನ್ನು ಅಕ್ಟೋಬರ್ 2021 ರಲ್ಲಿ ಮತ್ತೆ ಆಸ್ಪತ್ರೆಗೆ ಕಳುಹಿಸಲಾಯಿತು. ಇಲ್ಲಿನ ವೈದ್ಯರ ಹೆಚ್ಚಿನ ಚಿಕಿತ್ಸೆ ಮತ್ತು ಮೇಲ್ವಿಚಾರಣೆಯ ನಂತರ ಸರಿತಾ ಸಂಪೂರ್ಣವಾಗಿ ಚೇತರಿಸಿಕೊಂಡರು.

ಆಸ್ಪತ್ರೆಯ ಹೆಚ್ಚುವರಿ ನಿರ್ದೇಶಕರಾದ ಡಾ.ಪೂರ್ಣಿಮಾ ರತ್ನ ಅವರು ಹೇಳಿರುವ ಪ್ರಕಾರ, ಸರಿತಾ ಅವರು ಗುಣಮುಖರಾದಾಗ, ಅವರು ಅಲ್ಲಿ ಇತರ ರೋಗಿಗಳಿಗೆ ಸೇವೆ ಸಲ್ಲಿಸಲು ಪ್ರಾರಂಭ ಮಾಡಿದ್ದಾರೆ. ಸರಿತಾ ನಾಪತ್ತೆಯಾದಾಗ ಆಕೆ ತನ್ನ ರಾಜ್ಯ ಮತ್ತು ಜಿಲ್ಲೆಯ ಹೆಸರನ್ನು ಮಾತ್ರ ಹೇಳುತ್ತಿದ್ದರು ಆದರೆಸಂಪೂರ್ಣವಾಗಿ ಚೇತರಿಸಿಕೊಂಡಾಗ, ಜೂನ್ 4, 2022 ರಂದು ತನ್ನ ಕೌನ್ಸೆಲಿಂಗ್‌ನಲ್ಲಿ ತಾನು ಬಿಜ್ನೋರ್‌ ನ ಅಫ್ಜಲ್‌ಗಢ ತಹಸಿಲ್‌ ನ ತುರುತ್‌ಪುರ ಗ್ರಾಮದ ನಿವಾಸಿ ಎಂದು ಹೇಳಿದ್ದಾರೆ. ಇದಾದ ನಂತರ, ಆರೋಗ್ಯ ಕಾರ್ಯಕರ್ತ ದಿಲೀಪ್ ವಾಟ್ಸಾಪ್ ಮೂಲಕ ಬಿಜ್ನೋರ್ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿ ಮತ್ತು ಅಫ್ಜಲ್‌ಗಢದ ಎಸ್‌.ಎಚ್‌.ಒ ಅವರ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡರು. ಬಳಿಕ ಸರಿತಾ ಸುಲಭವಾಗಿ ತನ್ನ ಕುಟುಂಬವನ್ನು ಭೇಟಿಯಾಗಿದ್ದಾರೆ. ಕುಟುಂಬದ ಸದಸ್ಯರು 12 ವರ್ಷಗಳ ನಂತರ ಇವರನ್ನು ಭೇಟಿಯಾಗಿ ಬಹಳ ಸಂತೋಷಪಟ್ಟಿದ್ದಾರೆ.

Leave A Reply

Your email address will not be published.