Neer Dose Karnataka
Take a fresh look at your lifestyle.

ವಯಸ್ಸು ಆದರೂ ಕಡಿಮೆಯಾಗಿಲ್ಲ ರಮ್ಯಾ ಕೃಷ್ಣ ಹವಾ, ಈಗಲೂ ಒಂದು ಸಿನೆಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ? ರಶ್ಮಿಕಾಂಗಿನ ಚೂರು ಕಡಿಮೆ ಅಷ್ಟೇ.

ಸೌತ್ ಸಿನಿದುನಿಯಾದ ಫೇವರೆಟ್ ನಟಿಯರಲ್ಲಿ ಒಬ್ಬರು ರಮ್ಯಾ ಕೃಷ್ಣನ್. ಇಂದು ರಮ್ಯಾ ಕೃಷ್ಣನ್ ಅವರ ಹುಟ್ಟುಹಬ್ಬ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಹ ನಟಿಸಿ ಯಾವ ಹೀರೋಗೂ ಕಮ್ಮಿ ಇಲ್ಲ ಎನ್ನುವಂತೆ ಜನಪ್ರಿಯತೆ ಗಳಿಸಿಕೊಂಡವರು ರಮ್ಯಾ ಕೃಷ್ಣನ್. ಇಂದಿಗೂ ಇವರ ದೊಡ್ಡ ಮಟ್ಟದ ಬೇಡಿಕೆ ಇದೆ. ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾಗಳಿಗೂ ಒಂದು ಕಾಲದಲ್ಲಿ ರಮ್ಯಾ ಕೃಷ್ಣನ್ ಅವರೇ ನಾಯಕಿಯಗಬೇಕು ಎನ್ನುತ್ತಿದ್ದರು. ನಾಯಕರ ಸಮವಾಗಿ ನಿಂತು ಡೈಲಾಗ್ ಹೊಡೆಯುವಲ್ಲಿ ಯಶಸ್ವಿಯಾಗುತ್ತಿದ್ದವರು ರಮ್ಯಾ. ಪಡಯಪ್ಪ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ್ ಸರಿಸಮವಾಗಿ ನಟಿಸಿರುವ ನೀಲಾಂಬರಿ ಪಾತ್ರವನ್ನು ಇಂದಿಗೂ ಸಿನಿಪ್ರಿಯರು ಮರೆತಿಲ್ಲ.

ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರವನ್ನ ಭಾರತ ಚಿತ್ರರಂಗ ಮರೆಯಲು ಸಾಧ್ಯವಿಲ್ಲ. ರಮ್ಯಾ ಕೃಷ್ಣನ್ 90ರ ದಶಕದಿಂದ ಇಲ್ಲಿಯವರೆಗೂ ಅದೇ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅಷ್ಟೇ ದೊಡ್ಡ ಅಭಿಮಾನಿ ಬಳಗ ಇವರಿಗೆ ಇದೆ. ರಮ್ಯಾ ಕೃಷ್ಣನ್ ಅವರಿಗೆ 51 ವರ್ಷ ಆಗಿದ್ದರು, ಈಗಿನ ಹೀರೋಯಿನ್ ಗಳನ್ನೇ ನಾಚಿಸುವಷ್ಟು ಸುಂದರವಾಗಿ ಕಾಣಿಸುತ್ತಾರೆ ರಮ್ಯಾ ಕೃಷ್ಣನ್. ಈಗಲೂ ಇವರಿಗೆ ಚಿತ್ರರಂಗದಲ್ಲಿ ಅಷ್ಟೇ ಬೇಡಿಕೆ. ಅನೇಕ ಸಿನಿಮಾಗಳಲ್ಲಿ ಮತ್ತು ಸೀರಿಯಲ್ ಗಳಲ್ಲಿ ನಟಿಸುತ್ತಾರೆ ರಮ್ಯಾ. ಇನ್ನು ರಮ್ಯಾ ಅವರು ಸಂಭಾವನೆ ವಿಚಾರದಲ್ಲಿ ಕೂಡ ಟಾಪ್ ನಲ್ಲಿದ್ದಾರೆ.

ರಮ್ಯಾ ಕೃಷ್ಣನ್ ಅವರು ಒಂದು ಸಿನಿಮಾದಲ್ಲಿ ನಟಿಸಲು ಒಂದು ದಿನಕ್ಕೆ 10 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಒಂದು ಸಿನಿಮಾಗೆ 10ದಿನ ಕೆಲಸ ಇದ್ದರೆ, ಅಲ್ಲೇ ಒಂದು ಕೋಟಿ ರೂಪಾಯಿ ಆಗುತ್ತದೆ. ರಶ್ಮಿಕಾ ಮಂದಣ್ಣ ಒಂದು ಸಿನಿಮಾ ಎರಡೂವರೆ ಇಂದ ಮೂರು ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ಅವರು ಕೆಲಸ ಮಾಡುವ ದಿನಗಳು ಹೆಚ್ಚಾಗಿರುತ್ತದೆ. ಆದರೆ ರಮ್ಯಾ ಕೃಷ್ಣನ್ ಅವರು ದಿನಕ್ಕೆ 10 ಲಕ್ಷ ಸಂಭಾವನೆ ಪಡೆಯುತ್ತಾರೆ. ರಮ್ಯಾ ಅವರ ರೇಂಜ್ ಏನು ಎಂದು ಇದರಿಂದಲೇ ಗೊತ್ತಾಗುತ್ತದೆ. ರಮ್ಯಾ ಅವರು ಎಷ್ಟು ಬ್ಯುಸಿ ಅಂದ್ರೆ, ಒಂದು ಸಿನಿಮಾಗಾಗಿ 3 ಅಥವಾ 4 ದಿನಗಳನ್ನು ಹೊರತುಪಡಿಸಿ ಅದಕ್ಕಿಂತ ಹೆಚ್ಚು ಡೇಟ್ಸ್ ಕೊಡಲು ಅವರಲ್ಲಿ ಸಮಯ ಕೂಡ ಇಲ್ಲ ಎನ್ನಲಾಗಿದೆ. ಪ್ರಸ್ತುತ ಅವರ ಪತ್ ನಿರ್ದೇಶನ ಮಾಡುತ್ತಿರುವ ರಂಗ ಮಾರ್ತಾಂಡ ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ಅವರು ನಟಿಸುತ್ತಿದ್ದಾರೆ. ಜೊತೆಗೆ ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾದಲ್ಲಿ ನಟಿಸಿದ್ದಾರೆ.

Comments are closed.