Neer Dose Karnataka
Take a fresh look at your lifestyle.

ಸಾಯಿ ಪಲ್ಲವಿಗೆ ಮತ್ತೊಂದು ಶಾಕ್: ಆಸ್ತಿಯ ಮೇಲೆ ಮೂಡಿತು ಅನುಮಾನ: ಕಡಿಮೆ ಸಮಯದಲ್ಲಿ ಎಷ್ಟು ಸಂಪಾದನೆ ಮಾಡಿದ್ದಾರೆ ಗೊತ್ತೇ?ಇವೆಲ್ಲ ಹೇಗೆ ಸಾಧ್ಯ?

720

ನಟಿ ಸಾಯಿಪಲ್ಲವಿ ಇಂದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಲೇಡಿ ಪವರ್ ಸ್ಟಾರ್ ಎಂದೇ ಖ್ಯಾತಿ ಗಳಿಸಿದ್ದಾರೆ. ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಸಂತೋಷ ನೀಡಿದ್ದಾರೆ. ಸಾಯಿಪಲ್ಲವಿ ಅವರ ಹಿನ್ನೆಲೆಯ ಬಗ್ಗೆ ಹೇಳುವುದಾದರೆ, ಅವರ ಹುಟ್ಟಿದ್ದು ಬೆಳೆದದ್ದು ತಮಿಳುನಾಡಿನ ಕೊಯಂಬತ್ತೂರಿನಲ್ಲಿ. ಆದರೆ ಇವರು ಮೂಲ ಸ್ಥಳ ಊಟಿ ಬಳಿ ಇರುವ ಕೋಟಗಿರಿ. ಅಲ್ಲಿನ ಬಡಗ ಸಮುದಾಯಕ್ಕೆ ಸೇರಿದವರು ಈ ನಟಿ. ಇವರ ತಾಯಿ ಪುಟ್ಟಪರ್ತಿ ಸಾಯಿಬಾಬಾ ಅವರ ಭಕ್ತೆ ಆಗಿರುವ ಕಾರಣ, ಮಗಳ ಹೆಸರಿನ ಜೊತೆಗೆ ಸಾಯಿ ಎಂದು ಸೇರಿಸಿದರು. ಈಕೆಯ ತಂದೆ ಸೆಂತಾಮರೈ ಕಣ್ಣನ್ ಅವರು ಕಸ್ಟಮ್ಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಶಾಲಾ ದಿನಗಳಿಂದಲೂ ಸಾಯಿಪಲ್ಲವಿ ಅವರಿಗೆ ಡ್ಯಾನ್ಸ್ ಅಂದ್ರೆ ಬಹಳ ಇಷ್ಟ. ಶಾಲಾ ಕಾಲೇಜಿನಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡಿದ್ದರು. ಇವರ ಡ್ಯಾನ್ಸ್ ನೋಡಿದ ನಿರ್ದೇಶಕರು ಧಾಮ್ ಧೂಮ್ ಎನ್ನುವ ಸಿನಿಮಾದಲ್ಲಿ, ನಟಿ ಕಂಗನಾ ರಣಾವತ್ ಅವರೊಡನೆ ನಟಿಸುವ ಅವಕಾಶ ನೀಡಿದರು. ಸಾಯಿಪಲ್ಲವಿ ಅವರು ಚಿತ್ರರಂಗ ಪ್ರವೇಶ ಮಾಡಿದ್ದು ಈ ರೀತಿ. ಬಳಿಕ ಓದಿನಲ್ಲಿ ಮುಂದುವರೆದಿದ್ದ ಸಾಯಿಪಲ್ಲವಿ ಅವರು, 2015ರಲ್ಲಿ ಪ್ರೇಮಮ್ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಬಳಿಕ 2017ರಲ್ಲಿ ಫಿದಾ ಸಿನಿಮಾ ಮೂಲಕ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಫಿದಾ ಬಳಿಕ ಸಾಯಿಪಲ್ಲವಿ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ, ಎಲ್ಲಾ ಒಳ್ಳೆಯ ಪಾತ್ರಗಳನ್ನೇ ಆರಿಸಿಕೊಂಡರು.

ಸರಳ ಸ್ವಭಾವದ ಇವರು, ಆಡಂಬರ ಇಲ್ಲದ ಕಾರಣ ಎಲ್ಲರಿಗೂ ಇಷ್ಟವಾಗುತ್ತಾರೆ. ಸಾಯಿಪಲ್ಲವಿ ಅವರು ನಾಯಕಿಯಾಗಿ 7 ವರ್ಷಗಳಾಗಿದೆ. ಇದೀಗ ಇವರ ಆಸ್ತಿ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಸಾಯಿಪಲ್ಲವಿ ಅವರು ಒಂದು ಸಿನಿಮಾಗೆ ಒಂದರಿಂದ ಎರಡು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇವರ ಬಳಿ ಆದಿ ಕ್ಯೂ3, ನೆಕ್ಸಾ, ಮಿಕ್ಸ್ ಬಿ ಶಾಲ್ ಲ್ಯಾನ್ಸರ್, ಇವೊ ಎಕ್ಸ್ ಮತ್ತು ಸುಜುಕಿ ಕಾರ್ ಗಳಿದ್ದು, ಇವರ ಒಟ್ಟು ಆಸ್ತಿ 29 ಕೋಟಿ ಎನ್ನಲಾಗಿದೆ. ಬೇರೆ ಕಲಾವಿದರ ಹಾಗೆ ಇವರು, ಐಷಾರಾಮಿ ಬಟ್ಟೆ, ಹೈ ಹೀಲ್ಸ್ ಇಂಥವುಗಳನ್ನು ಧರಿಸುವುದಿಲ್ಲ. ಸಾಯಿಪಲ್ಲವಿ ಅವರು ತಮ್ಮ ಪಾತ್ರದ ಆಯ್ಕೆಗಳಿಂದಲೇ ಅಭಿಮಾನಿ ವಲಯದಲ್ಲಿ ಹೆಚ್ಚಿನ ಪ್ರೀತಿ ಗಳಿಸಿದ್ದಾರೆ. ಆದರೆ ಇವರ ಆಸ್ತಿ ವಿಚಾರದ ಬಗ್ಗೆ ತಿಳಿದು, ಅಭಿಮಾನಿಗಳೇ ಶಾಕ್ ಆಗಿದ್ದಾರೆ. ಇಷ್ಟು ಹಣ ಹೇಗೆ ಬಂತು, ಹೇಗೆ ಇಷ್ಟು ಕೋಟಿ ಗಳಿಸಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ ನೆಟ್ಟಿಗರು.

Leave A Reply

Your email address will not be published.