ಬಿಗ್ ಶಾಕಿಂಗ್: ಯಶಸ್ಸು ಪಡೆದ ನಟಿ ಶ್ರೀನಿಧಿ ಶೆಟ್ಟಿ ಗೆ ಬಿಗ್ ಶಾಕ್, ಅದೊಂದು ತಪ್ಪಿನಿಂದ ಅವಕಾಶವೇ ಸಿಗುತ್ತಿಲ್ಲ. ಏನಾಗಿದೆ ಗೊತ್ತೇ?
ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಶ್ರೀನಿಧಿ ಶೆಟ್ಟಿ ಪ್ರತಿದಿನ ತಮ್ಮ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಾರೆ. ಶ್ರೀನಿಧಿ ಶೆಟ್ಟಿ ಅವರು ಕೆಜಿಎಫ್ 1 ಮತ್ತು ‘ಕೆಜಿಎಫ್ 2’ ಸಿನಿಮಾ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಈ ಸಿನಿಮಾ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಹಣ ಗಳಿಸಿದೆ. ಅಭಿಮಾನಿಗಳು ಕೂಡ ಕೆಜಿಎಫ್ 2 ನೋಡಿ ಮೆಚ್ಚಿಕೊಂಡಿದ್ದಾರೆ.
ಕೆಜಿಎಫ್ ಚಾಪ್ಟರ್1 ಮತ್ತು ಕೆಜಿಎಫ್ ಚಾಪ್ಟರ್2 ಸಿನಿಮಾ ಶ್ರೀನಿಧಿ ಶೆಟ್ಟಿ ಅವರಿಗೆ ದೊಡ್ಡ ಹೈಪ್ ತಂದುಕೊಟ್ಟಿದ್ದೇನೋ ನಿಜ. ಆದರೆ ಚಿತ್ರರಂಗದ ಪ್ರಕಾರ, ಆ ಹೈಪ್ ಮತ್ತು ಜನಪ್ರಿಯತೆ ಇರುವಾಗಲೇ, ನಾಯಕಿಯರು ತಮಗೆ ಬರುವ ಅವಕಾಶಗಳಲ್ಲಿ ಒಳ್ಳೆಯ ಅವಕಾಶಗಳನ್ನು ಒಪ್ಪಿಕೊಂಡು, ಸದಭಿರುಚಿ ಸಿನಿಮಾಗಳಲ್ಲಿ ನಟಿಸಿ, ಒಳ್ಳೆಯ ಕಥೆಗಳನ್ನು ಆಯ್ಕೆಮಾಡಿಕೊಳ್ಳಬೇಕು. ಯಾಕೆಂದರೆ ಚಿತ್ರರಂಗದಲ್ಲಿ ನಾಯಕಿಯರ ಲೈಫ್ ಸ್ಪ್ಯಾನ್ ಕಡಿಮೆ ಎಂದರೆ ತಪ್ಪಾಗುವುದಿಲ್ಲ. ಆದರೆ ಶ್ರೀನಿಧಿ ಶೆಟ್ಟಿ ಅವರು ಈ ವಿಚಾರದಲ್ಲಿ ಎಡವುತ್ತಿರುವ ಹಾಗೆ ತೋರುತ್ತಿದೆ. ಕೆಜಿಎಫ್2 ಬಳಿಕ ಶ್ರೀನಿಧಿ ಶೆಟ್ಟಿ ಅವರ ಕೈಯಲ್ಲಿ ಅಂಥ ಎಕ್ಸೈಟಿಂಗ್ ಆಗುವ ಸಿನಿಮಾಗಳು ಯಾವುದು ಸಹ ಇಲ್ಲ.
ಕೆಜಿಎಫ್2 ಬಳಿಕ ಶ್ರೀನಿಧಿ ಶೆಟ್ಟಿ ಅವರು ಕೋಬ್ರಾ ಸಿನಿಮಾ ಮೂಲಕ ತೆರೆಮೇಲೆ ಬರುತ್ತಿದ್ದಾರೆ. ಆ ಸಿನಿಮಾ ಬಿಟ್ಟು ಇನ್ಯಾವುದು ಸಹ ಹೇಳಿಕೊಳ್ಳುವ ಹಾಗಿಲ್ಲ. ಶ್ರೀನಿಧಿ ಶೆಟ್ಟಿ ಅವರಿಗೆ ದಕ್ಷಿಣ ಭಾರತ ಚಿತ್ರರಂಗದ ನಿರ್ಮಾಪಕರು ಒಳ್ಳೆಯ ಅವಕಾಶಗಳ ಜೊತೆ ಶ್ರೀನಿಧಿ ಶೆಟ್ಟಿ ಅವರನ್ನು ಅಪ್ರೋಚ್ ಮಾಡಿದ್ದಂತೂ ನಿಜ, ಆದರೆ ದುಬಾರಿ ಸಂಭಾವನೆ ಕೇಳುವ ಮೂಲಕ ಶ್ರೀನಿಧಿ ಶೆಟ್ಟಿ ಅವರು ಬರುತ್ತಿರುವ ಅವಕಾಶಗಳನ್ನು ಕಳೆದುಕೊಂಡರು. ಶ್ರೀನಿಧಿ ಶೆಟ್ಟಿ ಅವರು ಅಷ್ಟು ದುಬಾರಿ ಸಂಭಾವನೆ ಕೇಳಿದರಿಂದ, ನಿರ್ಮಾಪಕರು ಅವರ ಬಳಿ ಹೋಗಲು ಹಿಂಜರಿಯುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಇದರಿಂದಾಗಿ ಬರುತ್ತಿರುವ ಅವಕಾಶಗಳನ್ನು ಸಹ ಶ್ರೀನಿಧಿ ಶೆಟ್ಟಿ ಅವರು ಕಳೆದುಕೊಳ್ಳುತ್ತಿದ್ದಾರೆ. ಮುಂದೆ ಇದೇ ರೀತಿ ಆದರೆ, ಶ್ರಿನಿಧಿ ಶೆಟ್ಟಿ ಅವರು ನಿಜಕ್ಕೂ ಇನ್ನು ಹೆಚ್ಚಿನ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ ಎನ್ನುತ್ತವೆ ಮೂಲಗಳು.
Comments are closed.