ಬಿಡುಗಡೆಯಾಯಿತು 2022 ರ ಕನ್ನಡದ ಜನಪ್ರಿಯ ನಟಿಯರ ಲಿಸ್ಟ್: ರಶ್ಮಿಕಾ, ರಚಿತಾಗೆ ಎಷ್ಟನೇ ಸ್ಥಾನ ಗೊತ್ತೇ??
ಚಿತ್ರರಂಗದಲ್ಲಿ ಯಾವಾಗಲೂ ಸ್ಪರ್ಧೆ ಇದ್ದೇ ಇರುತ್ತದೆ. ಯಾವ ಕಲಾವಿದರು ಮೊದಲ ಸ್ಥಾನದಲ್ಲಿ ಇದ್ದಾರೆ, ಯಾರು ಯಾವ ಸ್ಥಾನದಲ್ಲಿದ್ದಾರೆ ಎನ್ನುವ ಕುತೂಹಲ ಸಿನಿಪ್ರಿಯರಿಗೆ ಇರುತ್ತದೆ. ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರತಿ ತಿಂಗಳು, ಯಾವ ನಟಿ ಯಾವ ಸ್ಥಾನದಲ್ಲಿದ್ದಾರೆ ಎನ್ನುವ ಸಮೀಕ್ಷೆ ನಡೆಸಲಾಗುತ್ತದೆ. ಓರ್ಮ್ಯಾಕ್ಸ್ ಸಂಸ್ಥೆ ಈ ಸಮೀಕ್ಷೆ ನಡೆಸುತ್ತದೆ. ತಮಿಳು ಮತ್ತು ತೆಲುಗು ಲಿಸ್ಟ್ ಈಗಾಗಲೇ ಹೊರಬಂದಿದ್ದು, ಜೂನ್ ತಿಂಗಳ ಕನ್ನಡ ಲಿಸ್ಟ್ ಸಹ ಹೊರಬಿದ್ದಿದೆ. ಕನ್ನಡದಲ್ಲಿ ಯಾವ ನಟಿ ಯಾವ ಸ್ಥಾನದಲ್ಲಿದ್ದಾರೆ ? ಟಾಪ್ 5 ನಟಿಯರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ಮೊದಲ ಸ್ಥಾನದಲ್ಲಿ ಇರುವುದು ನಟಿ ರಶ್ಮಿಕಾ ಮಂದಣ್ಣ. ಕನ್ನಡದಲ್ಲಿ ಸಿನಿಮಾ ಮಾಡದೆ ಇದ್ದರು ಸಹ, ರಶ್ಮಿಕಾ ಅವರ ಜನಪ್ರಿಯತೆ ಸ್ವಲ್ಪವೂ ಕಡಿಮೆ ಆಗಿಲ್ಲ. ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ತಮಿಳು ಸಮೀಕ್ಷೆಯಲ್ಲಿ ಸಹ ರಶ್ಮಿಕಾ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ ಅತ್ಯಂತ ಜನಪ್ರಿಯತೆ ಪಡೆದುಕೊಂಡಿರುವ ಮೊದಲ ನಟಿ ಆಗಿದ್ದಾರೆ ರಶ್ಮಿಕಾ ಮಂದಣ್ಣ. ಎರಡನೇ ಸ್ಥಾನದಲ್ಲಿ ಇರುವವರು ನಟಿ ರಚಿತಾ ರಾಮ್, ಇವರು ಕನ್ನಡದ ಅತ್ಯಂತ ಬ್ಯುಸಿ ನಟಿ ಎಂದರೆ ತಪ್ಪಾಗುವುದಿಲ್ಲ, ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ರಚಿತಾ. ಕಳೆದ ವರ್ಷ ನವೆಂಬರ್ ತಿಂಗಳ ಸಮೀಕ್ಷೆಯಲ್ಲಿ ರಚಿತಾ ರಾಮ್ ಮೊದಲ ಸ್ಥಾನದಲ್ಲಿದ್ದರು, ಈಗ ಎರಡನೇ ಸ್ಥಾನಕ್ಕೆ ಬಂದಿದ್ದಾರೆ. ಮೂರನೇ ಸ್ಥಾನದಲ್ಲಿ ಇರುವವರು ನಟಿ ರಾಧಿಕಾ ಪಂಡಿತ್.

ರಾಧಿಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು, ಆದಿ ಲಕ್ಷ್ಮಿ ಪುರಾಣ ಸಿನಿಮಾದಲ್ಲಿ, ಈ ಸಿನಿಮಾ ಬಳಿಕ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ, ಆದರೆ ರಾಧಿಕಾ ಪಂಡಿತ್ ಅವರಿಗೆ ಇರುವ ಬೇಡಿಕೆ ಅಂತೂ ಕಡಿಮೆ ಆಗಿಲ್ಲ. ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ ರಾಧಿಕಾ. ನಾಲ್ಕನೇ ಸ್ಥಾನದಲ್ಲಿ ಇರುವುದು ನಟಿ ರಮ್ಯಾ, ಇವರು ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು 5 ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದೆ. ಆದರೆ ಈಗಲೂ ಅಭಿಮಾನಿಗಳ ಮೆಚ್ಚಿನ ನಟಿ, ಸ್ಯಾಂಡಲ್ ವುಡ್ ಕ್ವೀನ್ ಎನ್ನಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಮಾಡಲಿದ್ದಾರೆ ರಮ್ಯಾ. ಇನ್ನು 5ನೇ ಸ್ಥಾನದಲ್ಲಿ ಇರುವುದು ನಟಿ ಆಶಿಕಾ ರಂಗನಾಥ್, ಕರ್ನಾಟಕದ ಕ್ರಶ್ ಎಂದೇ ಇವರನ್ನು ಕರೆಯಲಾಗುತ್ತಿತ್ತು, ಸಾಕಷ್ಟು ಸಿನಿಮಾಗಳ ಮೂಲಕ ಆಶಿಕಾ ಅವರು ಐದನೇ ಸ್ಥಾನಕ್ಕೆ ಬಂದಿದ್ದಾರೆ.