ಭಾರತಕ್ಕೆ ಹಾರ್ಧಿಕ್ ಮ್ಯಾಚ್ ಫಿನಿಶರ್ ಅಂದು ಕೊಂಡಿರ?? ಅಲ್ಲವೇ ಅಲ್ಲ, ಧೋನಿ ಸ್ಥಾನ ತುಂಬುವ ಏಕೈಕ ಪ್ಲೇಯರ್ ಯಾರು ಅಂತೇ ಗೊತ್ತೇ?
ಇಂಗ್ಲೆಂಡ್ ನೆಲದಲ್ಲಿ ಭಾರತ ಕ್ರಿಕೆಟ್ ಪವಾಡಗಳನ್ನು ಸೃಷ್ಟಿಸಿದೆ. ಭಾರತ ತಂಡದ ಆಟದ ವೈಖರಿ ಇಂಗ್ಲೆಂಡ್ ಅನ್ನು ಸೋಲುವಂತೆ ಮಾಡಿತು. ಇಂಗ್ಲೆಂಡ್ ನೆಲದಲ್ಲಿ ಆಡಿದ ಏಕೈಕ ಟೆಸ್ಟ್ ಅನ್ನು ಟೈ ಮಾಡಿಕೊಂಡ ಭಾರತ ಟಿ20 ಸರಣಿ ಹಾಗೂ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ. ಭಾನುವಾರ ರಾತ್ರಿ ಮ್ಯಾಂಚೆಸ್ಟರ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರಿಷಭ್ ಪಂತ್ ಔಟಾಗದೆ 113 ಎಸೆತಗಳಲ್ಲಿ 125 ಸಿಡಿಸಿದ್ದಾರೆ. ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ 260 ರನ್ ಗಳ ಗುರಿಯನ್ನು ಇನ್ನೂ 47 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು. ಇದರೊಂದಿಗೆ ಭಾರತ ಮೂರು ಏಕದಿನ ಸರಣಿಯನ್ನೂ 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಓಲ್ಡ್ ಟ್ರಾಫರ್ಡ್ ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಭಾರತ ನಡುವಿನ ನಿರ್ಣಾಯಕ ಪಂದ್ಯವಾಗಿದ್ದ ಮೂರನೇ ಏಕದಿನ ಪಂದ್ಯವು ರಸಭರಿತವಾದ ಪಂದ್ಯವಾಗಿತ್ತು. ಭಾರತ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 45.5 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲ್ ಔಟ್ ಆಯಿತು. 260 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಭಾರತ 42.1 ಓವರ್‌ಗಳಲ್ಲಿ ಸರಣಿ ಗೆದ್ದಿತು. ರಿಷಬ್ ಪಂತ್, ಔಟ್ ಆಗದೆ 113 ಎಸೆತಗಳಲ್ಲಿ 125 ರನ್, 16 ಬೌಂಡರಿ, 2 ಸಿಕ್ಸರ್ ಭಾರಿಸಿದರು. ಕೊನೆಯವರೆಗೂ ಕ್ರೀಸ್ ನಲ್ಲಿ ನಿಂತು ವಿಜಯೋತ್ಸವ ಮುಗಿಸಿದರು. ಹಾರ್ದಿಕ್ ಪಾಂಡ್ಯ, 55 ಎಸೆತಗಳಲ್ಲಿ 71 ರನ್ ಹಾಗೂ 10 ಬೌಂಡರಿ ಸಿಡಿಸೋದರು. ಇವರಿಬ್ಬರ 133 ರನ್ ಗಳ ಜೊತೆಯಾಟ ಭಾರತ ಗೆಲುವಿಗೆ ನೆರವಾಯಿತು. ಇಂಗ್ಲೆಂಡ್ ಬೌಲರ್ ಗಳ ಪೈಕಿ ರೀಸ್ ಟೋಪ್ಲಿ 3, ಬಿಡನ್ ಕಾರ್ಸ್ 1, ಓವರ್ ಟನ್ 1 ವಿಕೆಟ್ ಪಡೆದರು.
ಎರಡನೇ ಏಕದಿನ ಪಂದ್ಯದಲ್ಲಿ ಸಿಡಿದೆದ್ದ ರೀಸ್ ಟೋಪ್ಲಿ ಮೂರನೇ ಏಕದಿನ ಪಂದ್ಯದಲ್ಲಿ ಮತ್ತೊಮ್ಮೆ ತಮ್ಮ ಅಮೋಘ ಪ್ರದರ್ಶನ ತೋರಿದರು. ತಮ್ಮ ಮೊದಲ ಸ್ಪೆಲ್ ನಲ್ಲಿ ಶಿಖರ್ ಧವನ್, ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದರು. 0 ಓವರ್‌ಗಳು ಮುಗಿಯುವ ಮೊದಲೇ ಈ ಮೂವರು ಪೆವಿಲಿಯನ್ ತಲುಪಿದರು. ಇದರಿಂದಾಗಿ ಭಾರತ 38 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಸೂರ್ಯಕುಮಾರ್ ಯಾದವ್, 28 ಎಸೆತಗಳಲ್ಲಿ 16 ರನ್ ಗಳಿಸಿ ಹೆಚ್ಚು ಹೊತ್ತು ಇರಲು ಆಗಲಿಲ್ಲ. ಇದರೊಂದಿಗೆ ಭಾರತ 72 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಗೆಲುವು ಕಷ್ಟ ಎಂದು ಭಾವಿಸಿತ್ತು.
ಆ ವೇಳೆ ಹಾರ್ದಿಕ್ ಪಾಂಡ್ಯ ಜೊತೆಗೂಡಿ ರಿಷಬ್ ಪಂತ್ ಪವಾಡವನ್ನೇ ಸೃಷ್ಟಿಸಿದ್ದರು. ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ಪಂತ್ ಅವರನ್ನು ಜೂನಿಯರ್ ಧೋನಿ ಎಂದು ಕರೆಯಲಾಗುತ್ತಿದೆ. ಈ ಹಿಂದೆ ಪಂತ್ ಇಂತಹ ಹಲವು ಅದ್ಭುತ ಇನ್ನಿಂಗ್ಸ್ ಗಳನ್ನು ಆಡಿದ್ದರು ಎಂಬುದು ಗೊತ್ತಿರುವ ವಿಚಾರ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 45.5 ಓವರ್ ಗಳಲ್ಲಿ 259 ರನ್ ಗಳಿಗೆ ಆಲ್ ಔಟ್ ಆಯಿತು. ಆ ತಂಡದಲ್ಲಿ ನಾಯಕ ಜೋಸ್ ಬಟ್ಲರ್ ಅರ್ಧಶತಕ ಗಳಿಸಿದರು. ಭಾರತದ ಬೌಲರ್ ಗಳಲ್ಲಿ ಹಾರ್ದಿಕ್ ಪಾಂಡ್ಯ 4 ವಿಕೆಟ್ ಪಡೆದರೆ, ಚಾಹಲ್ ಮೂರು ವಿಕೆಟ್ ಪಡೆದರು. ಜಾನಿ ಬೈರ್‌ಸ್ಟೋವ್ ಮತ್ತು ಜೋ ರೂಟ್ ಸೊನ್ನೆಗೆ ಔಟ್ ಆದರು.
Comments are closed.