Neer Dose Karnataka
Take a fresh look at your lifestyle.

ತಾನು ವಿಶ್ವಕಪ್ ಗೆ ಆಯ್ಕೆಯಾಗುವುದರ ಕುರಿತು ಮೊದಲ ಬಾರಿ ಮಾತನಾಡಿದ ದಿನೇಶ್, ಸಲಾಂ ಮಾಡುವಂತೆ ಹೇಳಿದ್ದೇನು ಗೊತ್ತೇ?

ಭಾರತದ ಅಪ್ರತಿಮ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು ಎಂದು ಹೆಸರು ಪಡೆದಿರುವವರು ದಿನೇಶ್ ಕಾರ್ತಿಕ್. ಮೂರು ವರ್ಷಗಳಿಂದ ದಿನೇಶ್ ಕಾರ್ತಿಕ್ ಅವರು ಭಾರತ ತಂಡದ ಪರವಾಗಿ ಆಡಿರಲಿಲ್ಲ, ಭಾರತ ಕ್ರಿಕೆಟ್ ತಂಡಕ್ಕೆ ಮರಳಿ ಬರಬೇಕು ಎಂದು ದಿನೇಶ್ ಕಾರ್ತಿಕ್ ಅವರು ಬಹಳ ಪ್ರಯತ್ನ ಪಟ್ಟಿದ್ದರು, ನ್ಯಾಷನಲ್ ಟೀಮ್ ನಲ್ಲಿ ಆಡಬೇಕು ಎನ್ನುವುದು ದಿನೇಶ್ ಕಾರ್ತಿಕ್ ಅವರ ಬಹುದಿನಗಳ ಕನಸಾಗಿತ್ತು. ಈ ವರ್ಷ ಭಾರತ ಮತ್ತು ಸೌತ್ ಆಫ್ರಿಕಾ ತಂಡದ ನಡುವಿನ ಸರಣಿ ಪಂದ್ಯಗಳಿಗೆ ದಿನೇಶ್ ಕಾರ್ತಿಕ್ ಅವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಈ ವರ್ಷ ಅಕ್ಟೊಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ಎಲ್ಲಾ ತಂಡಗಳು ತಯಾರಿ ನಡೆಸಿದೆ. ಭಾರತ ತಂಡವು ವಿಶ್ವಕಪ್ ಗೆಲ್ಲಬೇಕು ಎಂದು ಸತತ ಪರಿಶ್ರಮ ಪಡುತ್ತಿದೆ. 2007ರಲ್ಲಿ ಭಾರತ ವಿಶ್ವಕಪ್ ಪಂದ್ಯಗಳನ್ನು ಆಡಿದಾಗ, ದಿನೇಶ್ ಕಾರ್ತಿಕ್ ಅವರು ತಂಡದಲ್ಲಿದ್ದರು, ಎಂ.ಎಸ್.ಧೋನಿ ಅವರ ನಾಯಕತ್ವದಲ್ಲಿ ದಿನೇಶ್ ಕಾರ್ತಿಕ್ ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಬಳಿಕ ಈ ವರ್ಷ ದಿನೇಶ್ ಅವರು ಟಿ20 ವಿಶ್ವಕಪ್ ಪ್ಲೇಯಿಂಗ್ 11ಗೆ ಆಯ್ಕೆಯಾಗುತ್ತಾರಾ ಎನ್ನುವ ಪ್ರಶ್ನೆ ಈಗ ಕೇಳಿಬರುತ್ತಿದ್ದು, ಸ್ವತಃ ದಿನೇಶ್ ಕಾರ್ತಿಕ್ ಅವರು ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ದಿನೇಶ್ ಕಾರ್ತಿಕ್ ಅವರು ಈ ವರ್ಷ ಫಿನಿಷರ್ ಆಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ದಿನೇಶ್ ಕಾರ್ತಿಕ್ ಅವರ ಪ್ರದರ್ಶನ ಉತ್ತಮವಾಗಿರುವುದರಿಂದ ಅವರು ಪ್ಲೇಯಿಂಗ್ 11ಗೆ ಆಯ್ಕೆಯಾಗುತ್ತಾರ ಅಥವಾ ಬೇರೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಾರ ಎನ್ನುವ ಪ್ರಶ್ನೆ ಎದುರಾಗಿದೆ. ಅದಕ್ಕೆ ಸ್ವತಃ ದಿನೇಶ್ ಕಾರ್ತಿಕ್ ಅವರು ಉತ್ತರ ನೀಡಿದ್ದಾರೆ, “ನಾನು ಉತ್ತಮವಾದ ಪ್ರದರ್ಶನ ನೀಡುವ ಕಡೆಗೆ ಗಮನ ಹರಿಸುತ್ತಿದ್ದೇನೆ. ವಿಶ್ವಕಪ್ ಟೀಮ್ ಗೆ ಆಯ್ಕೆ ಆಗುತ್ತೇನೋ, ಇಲ್ಲವೋ ಎನ್ನುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ವಿಶ್ವಕಪ್ ಪಂದ್ಯಗಳಲ್ಲಿ ಎದುರಿಸುವ ಸವಾಲುಗಳನ್ನು ಎದುರಿಸಲು ನಾವು ಒಂದು ತಂಡವಾಗಿ ತಯಾರಿ ನಡೆಸುತ್ತಿದ್ದೇವೆ. ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ಅವರ ಜೊತೆಗೆ ದೊಡ್ಡ ಆಟಕ್ಕೆ ಸಿದ್ಧರಾಗುತ್ತಿದ್ದೇವೆ..” ಎಂದು ಹೇಳಿದ್ದಾರೆ ದಿನೇಶ್ ಕಾರ್ತಿಕ್.

Comments are closed.