ಅಪ್ಪು ಜೀವನದಲ್ಲಿ ತಪ್ಪಿದ ಮಾತು ಯಾವುದು ಗೊತ್ತೇ?? ಕೊಟ್ಟ ಮಾತನ್ನು ತಪ್ಪಿರುವ ಅಪ್ಪು ಎಂದರೆ ನಿಜಕ್ಕೂ ಬೇಸರ. ಏನು ಗೊತ್ತೇ??
ಕರ್ನಾಟಕದ ರಾಜ ರತ್ನ ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಈ ಪ್ರಪಂಚ ಬಿಟ್ಟು ಹೋಗಿ, 9 ತಿಂಗಳು ಕಳೆಯುತ್ತಿದೆ. ಆದರೆ ಈ ದಿನಕ್ಕೂ ಅಭಿಮಾನಿಗಳು ಅಪ್ಪು ಅವರಿಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಪ್ಪು ಅವರ ನೆನಪಲ್ಲೆ ಎಲ್ಲರು ಇದ್ದಾರೆ. ಅಪ್ಪು ಅವರು ಇಲ್ಲ ಎನ್ನುವ ಸುದ್ದಿ ಅಂದು ಕೇಳಿಬಂದಿದ್ದು, ಇಡೀ ಕರ್ನಾಟಕಕ್ಕೆ ಬರಸಿಡಿಲು ಬಡಿದ ಹಾಗೆ ಇತ್ತು. ರಾಜನಿಲ್ಲದೆ ಇಂದು ರಾಜ್ಯ ಬಿಕೊ ಎನ್ನುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಅಪ್ಪು ಅವರು ಅಷ್ಟು ಬೇಗ ಇಹಲೋಕ ತ್ಯಜಿಸುತ್ತಾರೆ ಎಂದು ಯಾರು ಸಹ ಊಹಿಸಿರಲಿಲ್ಲ.
ಆಫ್ ಅವರು ಇಲ್ಲವಾದ ಮೇಲೆ ಅವರಿಗೆ ಸಂಬಂಧಿಸಿದ ಅನೇಕ ವಿಚಾರಗಳು ವೈರಲ್ ಆಗುತ್ತಿದೆ. ಅಪ್ಪು ಅವರ ಹಳೆಯ ಫೋಟೋಗಳು, ವಿಡಿಯೋಗಳು, ಅಪ್ಪು ಅವರು ಆಡಿದ ಮಾತುಗಳು ಹೀಗೆ ಅನೇಕ ವಿಚಾರಗಳನ್ನು ಅಭಿಮಾನಿಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅಪ್ಪು ಅವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ, ಅಪ್ಪು ಸಿನಿಮಾದ ಲಾಂಚಿಂಗ್ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಗಸ್ಟ್ 22, 2001ರಂದು ಈ ಪೋಸ್ಟರ್ ನ್ಯೂಸ್ ಪೇಪರ್ ಗಳ ಮೂಲಕ ಬಿಡುಗಡೆ ಆಗಿತ್ತು.
ಆಗಿನ ಕಾಲದಲ್ಲಿ ಸೋಷಿಯಲ್ ಮೀಡಿಯಾ ಇರಲಿಲ್ಲ, ಟಿವಿಗಳು ಸಹ ಕಡಿಮೆಯೇ ಎಂದರೆ ತಪ್ಪಾಗುವುದಿಲ್ಲ. ಆಗೆಲ್ಲಾ ಜನರಿಗೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತಿದ್ದದ್ದು, ನ್ಯೂಸ್ ಪೇಪರ್ ಗಳ ಮೂಲಕವೇ. ಅಣ್ಣಾವ್ರ ಕೊನೆಯ ಮಗ, ಬಾಲ್ಯದಲ್ಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದ ಅಪ್ಪು ಅವರನ್ನು ಲಾಂಚ್ ಮಾಡಬೇಕೆಂದಾಗ, ತಯಾರಿಗಳು ಜೋರಾಗಿಯೇ ನಡೆದಿದ್ದವು, ಅಪ್ಪು ಅವರಿಗಾಗಿ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಧ್ ಅವರು ಅದ್ಭುತವಾದ ಕಥೆ ತಯಾರಿಸಿದ್ದರು, ಅಣ್ಣಾವ್ರು ಮತ್ತು ಪಾರ್ವತಮ್ಮನವರಿಗೂ ಕಥೆ ಮೆಚ್ಚುಗೆ ಆಯಿತು. ಅಪ್ಪು ಅವರನ್ನು ಮನೆಯಲ್ಲಿ ಎಲ್ಲರೂ ಅಪ್ಪು ಎಂದೇ ಪ್ರೀತಿಯಿಂದ ಕರೆಯುತ್ತಿದ್ದ ಕಾರಣ, ಅದೇ ಹೆಸರನ್ನು ಸಿನಿಮಾ ಶೀರ್ಷಿಕೆಯಾಗಿ ಇಟ್ಟರು.
2001ರ ಗೌರಿ ಗಣೇಶ ಹಬ್ಬದ ಪ್ರಯುಕ್ತ, ಅಪ್ಪು ಸಿನಿಮಾದ ಲಾಂಚಿಂಗ್ ಪೋಸ್ಟರ್ ಬಿಡುಗಡೆ ಆಯಿತು, ಆ ಪೋಸ್ಟರ್ ನಲ್ಲಿ, “ಅವನು ಭಾರೀ ಮೊಂಡ.. ಬಲು ಕೋಪಿಷ್ಟ.. ಪಕ್ಕಾ ಪೋಕರಿ, ಇತ್ಯಾದಿ, ಇತ್ಯಾದಿ..ಆದರೂ ತುಂಬಾ ಒಳ್ಳೆಯವನು.. ನಿಮ್ಮ ಜೊತೆಯಲ್ಲೇ ಇರುವವನು..ಅವರು ಯಾರು ಗೊತ್ತಾ?? ಅಪ್ಪು..” ಎಂದು ಬರೆದಿದೆ. ಇದೀಗ ಈ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ನಿಮ್ಮ ಜೊತೆಯಲ್ಲೇ ಇರುವವನು ಎನ್ನುವ ಸಾಲು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ.
ಅಪ್ಪು ಅವರು ಜೊತೆಯಲ್ಲಿರದೆ, ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ, ಅಪ್ಪು ಮಾತಿಗೆ ತಪ್ಪಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು. 21 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಪೋಸ್ಟರ್ ನೋಡಿ, ದೊಡ್ಮನೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಇನ್ನು ಅಪ್ಪು ಸಿನಿಮಾ ಬಿಡುಗಡೆ ಆದಮೇಲೆ ಕ್ರೇಜ್ ಹೇಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಡ್ಯಾಶಿಂಗ್ ಕಾಲೇಜ್ ಹುಡುಗನಾಗಿ, ಪಕ್ಕಾ ಲೋಕಲ್ ಹುಡುಗನಾಗಿ ಅಪ್ಪು ನಟಿಸಿದ್ದು, ಜೊತೆಗೆ ನಾಯಕಿಯಾಗಿ ರಕ್ಷಿತಾ ಅವರ ಅಭಿನಯ ಅದ್ಭುತವಾಗಿತ್ತು. ಅಪ್ಪು ಸಿನಿಮಾ ಬರೋಬ್ಬರಿ 200 ದಿನಗಳ ಕಾಲ ಥಿಯೇಟರ್ ನಲ್ಲಿ ಪ್ರದರ್ಶನ ಕಂಡಿತ್ತು.
ಅಪ್ಪು ಸಿನಿಮಾ ಮಾಡಿದ ಮೋಡಿ, ಅಪ್ಪು ಸಿನಿಮಾದ ಡೈಲಾಗ್ ಗಳು ಎಲ್ಲವನ್ನು ಯಾರು ಸಹ ಇಂದಿಗೂ ಮರೆತಿಲ್ಲ. ಈ ವರ್ಷಕ್ಕೆ ಅಪ್ಪು ಸಿನಿಮಾ ಬಿಡುಗಡೆಯಾಗಿ 20 ವರ್ಷ ತುಂಬುತ್ತದೆ. ಈ ಸಮಯದಲ್ಲಿ ಅಪ್ಪು ಅವರೇ ನಮ್ಮ ಜೊತೆ ಇಲ್ಲ ಎನ್ನುವುದು ನೋವಿನ ವಿಚಾರ. ಅಪ್ಪು ಅವರು ಇದ್ದಿದ್ದರೆ, ಸಂಭ್ರಮ ಬೇರೆಯದೇ ರೀತಿ ಇರುತ್ತಿತ್ತು, ಆದರೆ ಇಂದು ಅಪ್ಪು ಅವರಿಲ್ಲದೆ ಅಭಿಮಾನಿಗಳು ನಿಜಕ್ಕೂ ನೋವಿನಲ್ಲಿ ಕಣ್ಣೀರು ಹಾಕುತ್ತಾರೆ. ಬೆಟ್ಟದ ಹೂವು ಎಲ್ಲೇ ಇದ್ದರೂ ಚೆನ್ನಾಗಿರಲಿ ಎನ್ನುತ್ತಿದ್ದಾರೆ ಅಭಿಮಾನಿಗಳು
Comments are closed.