Neer Dose Karnataka
Take a fresh look at your lifestyle.

ಸಾಲು ಸಾಲು ಸೋಲಿನ ನಂತರ ಮೈ ಮರೆತು ಲೈವ್ ಕಾರ್ಯಕ್ರಮದಲ್ಲಿಯೇ ಮಸ್ತ್ ಆಗಿ ಕುಣಿದ ಪೂಜಾ ಹೆಗ್ಡೆ. ಹೇಗಿತ್ತು ಗೊತ್ತಾ ಡಾನ್ಸ್ ನೋಡಿ

56

ನಟಿ ಪೂಜಾ ಹೆಗ್ಡೆ ಲಕ್ ಮಾಮೂಲಿಯಾಗಿಲ್ಲ. ಹಿಂದಿನ ಮೂರು ಸಿನಿಮಾಗಳು ಫ್ಲಾಪ್ ಆಗಿದ್ದರು ಸಹ, ಈ ನಟಿಗೆ ಬಿಗ್ ಸಿನಿಮಾ ಆಫರ್ ಗಳು ಬರುತ್ತಲೇ ಇದೆ. ಆಚಾರ್ಯ, ಬೀಸ್ಟ್, ರಾಧೆ ಶ್ಯಾಮ್ ಮೂರು ಸಿನಿಮಾಗಳು ಡಿಸಾಸ್ಟರ್ ಆಗಿ, ಈ ನಟಿಗೆ ಫ್ಲಾಪ್ ಸಿನಿಮಾ ಆದರೂ ಸಹ, ಈ ನಟಿಯ ಮೇಲಿರುವ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಹೀರೋಗಳು ತಮ್ಮ ಸಿನಿಮಾದಲ್ಲಿ ನಟಿಸಲು ಪೂಜಾ ಹೆಗ್ಡೆ ಅವರಿಗೆ ಅವಕಾಶ ನೀಡುತ್ತಿದ್ದಾರೆ. ರಾಧೆ ಶ್ಯಾಮ್ ಬಿಡುಗಡೆ ಆಗುವ ಮೊದಲು, ಪೂಜಾ ಹೆಗ್ಡೆ ಅವರನ್ನು ಲಕ್ಕಿ ಹೀರೋಯಿನ್ ಎಂದು ಕರೆಯಲಾಗಿತ್ತು, ಹಾಗಾಗಿ ಎಲ್ಲಾ ಹೀರೋಗಳು ತಮ್ಮ ಸಿನಿಮಾಗೆ ಪೂಜಾ ಹೀರೋಯಿನ್ ಆಗಬೇಕು ಎಂದು ಆಫರ್ ನೀಡುತ್ತಿದ್ದರು.

ಆದರೆ, ರಾಧ್ಯೆ ಶ್ಯಾಮ್, ಬೀಸ್ಟ್ ಮತ್ತು ಆಚಾರ್ಯ ಸಿನಿಮಾ ಫ್ಲಾಪ್ ಆದರು ಸಹ ಇವರಿಗೆ ಸಿಗುತ್ತಿರುವ ಅವಕಾಶಗಳು ಮತ್ತು ಪೂಜಾ ಹೆಗ್ಡೆ ಹವಾ ಮಾತ್ರ ಕಡಿಮೆ ಆಗಿಲ್ಲ. ನಾಯಕಿಯಾಗಿ ಮಾತ್ರವಲ್ಲದೆ, ಸ್ಪೆಷಲ್ ಸಾಂಗ್ ಗಳಲ್ಲಿ ಸಹ ಪೂಜಾ ಹೆಗ್ಡೆ ಅವರು ಕಾಣಿಸಿಕೊಂಡು, ಸಕತ್ ಸಂಭಾವನೆಯನ್ನು ಸಹ ಪಡೆಯುತ್ತಿದ್ದಾರೆ. ಇದೀಗ ಪೂಜಾ ಹೆಗ್ಡೆ ಅವರು ಸಿನಿಮಾ ಸ್ಪೆಷಲ್ ಮಾತ್ರವಲ್ಲದೆ, ಒಂದು ಲೈವ್ ಶೋನಲ್ಲಿ ಸ್ಟೇಜ್ ಮೇಲೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಸಾಮಾನ್ಯವಾಗಿ ನಾಯಕಿಯರು ಸಿನಿಮಾಗಳಲ್ಲಿ ಅದ್ಭುತವಾಗಿ ಡ್ಯಾನ್ಸ್ ಮಾಡಿದರು ಸಹ, ವೇದಿಕೆ ಮೇಲೆ ಪರ್ಫೆಕ್ಟ್ ಆಗಿ ಡ್ಯಾನ್ಸ್ ಮಾಡುವುದು ಕಷ್ಟ, ಇಡೀ ಹಾಡಿನ ಎಲ್ಲಾ ಸ್ಟೆಪ್ಸ್ ಗಳನ್ನು ನೆನಪಲ್ಲಿ ಇಟ್ಟುಕೊಂಡು ಡ್ಯಾನ್ಸ್ ಮಾಡಬೇಕಾಗುತ್ತದೆ.

ಇದೆಲ್ಲಾ ಏನೇ ಸಮಸ್ಯೆ ಇದ್ದರು ಸಹ ಪೂಜಾ ಹೆಗ್ಡೆ ಅವರು ತಲೆಕೆಡಿಸಿಕೊಳ್ಳದೆ, ವೇದಿಕೆಯ ಮೇಲೆ ಅರೇಬಿಕ್ ಕುತ್ತು ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದರು. ಪೂಜಾ ಹೆಗ್ಡೆ ಡ್ಯಾನ್ಸ್ ಮಾಡಿದ್ದು, ಬಿಹೈನ್ಡ್ ವುಡ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ, ಸುಮಾರು 25 ಸಾವಿರ ಜನರ ಎದುರು ಪೂಜಾ ಹೆಗ್ಡೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೂಜಾ ಅವರಲ್ಲಿ ಇಂತಹ ಅದ್ಭುತವಾದ ಪ್ರತಿಭೆ ಇದೆಯೇ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ. ಲಕ್ಷಾಂತರ ವೀಕ್ಷಣೆ ಪಡೆದು, ಎಲ್ಲರ ಗಮನ ಸೆಳೆದಿದೆ ಪೂಜಾ ಹೆಗ್ಡೆ ಡ್ಯಾನ್ಸ್ ವಿಡಿಯೋ. ನೀವು ಸಹ ತಪ್ಪದೆ ಈ ವಿಡಿಯೋ ನೋಡಿ..

Leave A Reply

Your email address will not be published.