ಮದುವೆಯಾದ ಕೆಲವೇ ದಿನಗಳಲ್ಲಿ ನಯನತಾರ ಜೀವನದಲ್ಲಿ ಬಿರುಗಾಳಿ. ನಯನತಾರ ರವರಿಗೆ ಅದೃಷ್ಟ ಕೈ ಕೊಡ್ತಾ? ಪಾಪ ಏನಾಗಿದೆ ಗೊತ್ತೇ? ನೀವೇ ನೋಡಿ.
ದಕ್ಷಿಣ ಭಾರತದ ಸ್ಟಾರ್ ಹೀರೋಯಿನ್ ನಯನತಾರಾ ಇತ್ತೀಚೆಗಷ್ಟೇ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಡನೆ ಮದುವೆಯಾದ ವಿಷಯ ಗೊತ್ತೇ ಇದೆ. ಜೂನ್ 9 ರಂದು ಮಹಾಬಲಿಪುರಂನ ರೆಸಾರ್ಟ್‌ನಲ್ಲಿ ನಯನ್ ವಿಘ್ನೇಶ್ ಜೋಡಿ ಅದ್ಧೂರಿಯಾಗಿ ವಿವಾಹವಾದರು. ಕೆಲವೇ ಕೆಲವು ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ ಶಾರುಖ್ ಖಾನ್, ರಜನಿಕಾಂತ್ ಮತ್ತು ಇತರ ಕೆಲವು ಸೆಲೆಬ್ರಿಟಿಗಳು ಇದ್ದರು.ಈ ನಡುವೆ ನಯನತಾರಾ ಮತ್ತು ವಿಘ್ನೇಶ್ ಮದುವೆ ಬಗ್ಗೆ ಒಂದಷ್ಟು ಸುದ್ದಿ ವೈರಲ್ ಆಗಿದೆ.
ನಯನತಾರಾ ಈಗಾಗಲೇ ಪ್ರಭುದೇವ ಮತ್ತು ಸಿಂಬು ಅವರನ್ನು ಪ್ರೀತಿಸಿ ಮದುವೆವರೆಗೂ ಹೋಗಿದ್ದರು. ಆದರೆ ಅವರ ಜೊತೆಗಿನ ಪ್ರೀತಿ ಮದುವೆಗೆ ತಲುಪಿರಲಿಲ್ಲ. ವಿಘ್ನೇಶ್ ಜತೆಗಿನ ಮದುವೆ ಸಹ ಅನುಮಾನ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ನಯನತಾರಾ ವಿಘ್ನೇಶ್ ಜೊತೆ ಮದುವೆ ಮಾಡಿಕೊಂಡಿದ್ದು ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಮದುವೆಯ ನಂತರವೂ ನಯನತಾರಾ ಅವರನ್ನು ವಿವಾದಗಳ ಸರಮಾಲೆಯೇ ಸುತ್ತುವರಿದಿದೆ. ಮದುವೆಯ ನಂತರ ದಂಪತಿಗಳು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದರು. ದರ್ಶನದ ವೇಳೆ ನಯನತಾರಾ ಚಪ್ಪಲಿ ಧರಿಸಿ ದೇವಸ್ಥಾನದ ಬಳಿ ಬರುತ್ತಿರುವುದು ಚರ್ಚೆಗೆ ಗ್ರಾಸವಾಗಿತ್ತು. ಇದರಿಂದ ಅಧಿಕಾರಿಗಳ ಜತೆಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ಹಾಗಾಗಿ ಗೊತ್ತಿದ್ದೂ ಈ ತಪ್ಪು ಮಾಡಿಲ್ಲ ಎಂದು ಕ್ಷಮೆಯಾಚಿಸಿ ಬಹಿರಂಗ ಪತ್ರ ಬಿಡುಗಡೆ ಮಾಡಿದ್ದರು. ಈ ನಡುವೆ ನಯನತಾರಾ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದುವೆಗೂ ಮುನ್ನ ನೆಟ್‌ಫ್ಲಿಕ್ಸ್ ನಯನತಾರಾ ವಿಘ್ನೇಶ್ ಶಿವನ್ ಅವರ ಮದುವೆಯ ವಿಡಿಯೋಗೆ 25 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿತ್ತು.
ಒಪ್ಪಂದದ ಸಮಯದಲ್ಲಿ ಮದುವೆಯ ಒಂದೇ ಒಂದು ಫೋಟೋ ಕೂಡ ಲೀಕ್ ಆಗದಂತೆ ನೆಟ್‌ಫ್ಲಿಕ್ಸ್ ಒಪ್ಪಂದ ಮಾಡಿಕೊಂಡಿತ್ತಂತೆ. ಆದರೆ ಇತ್ತೀಚೆಗಷ್ಟೇ ನಯನ ವಿಘ್ನೇಶ್ ಮದುವೆಯ ಹೆಚ್.ಡಿ ಫೋಟೋಗಳು ಹೊರಬಂದಿದೆ. ಇದರಿಂದಾಗಿ ನೆಟ್‌ಫ್ಲಿಕ್ಸ್ ಕಂಪನಿಯು ಒಪ್ಪಂದವನ್ನು ರದ್ದುಗೊಳಿಸಿದೆ ಎನ್ನಲಾಗಿದೆ. ಈಗಾಗಲೇ ನಯನ ವಿಘ್ನೇಶ್ ಗೆ ನೋಟಿಸ್ ಜಾರಿ ಮಾಡಲಾಗಿದೆ. ತಾವು ಪಾವತಿಸಿರುವ 25 ಕೋಟಿಯನ್ನು ವಾಪಸ್ ನೀಡಬೇಕು ಎಂದು ನೆಟ್‌ಫ್ಲಿಕ್ಸ್ ನೋಟಿಸ್‌ನಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.
Comments are closed.