ತನ್ನ ಬಗ್ಗೆ ನಿರ್ಲಕ್ಷ ಮಾಡಿ, ಗಂಭೀರ ಸ್ಥಿತಿಗೆ ತಂದು ಕೊಂಡ ತೆಲುಗಿನ ಯುವ ನಟ: ಐಸಿಯು ನಲ್ಲಿ ಚಿಕಿತ್ಸೆ, ಸ್ಥಿತಿ ಗಂಭೀರ. ಏನಾಗಿತ್ತು ನೋಡಿ.
ಕೆಲವೊಮ್ಮೆ ನಾವು ಅಂದುಕೊಂಡ ಹಾಗೆ ಎಲ್ಲವು ಇರುವುದಿಲ್ಲ, ನಾವು ಅಂದುಕೊಳ್ಳುವುದು ಒಂದು, ಆಗುವುದು ಒಂದು ಎನ್ನುವ ಹಾಗೆ ಇರುತ್ತದೆ. ಆರೋಗ್ಯದ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಆ ರೀತಿ ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಪ್ರಾಣಕ್ಕೆ ತೊಂದರೆ ಆಗಬಹುದು. ಇದೀಗ ಖ್ಯಾತ ತೆಲುಗು ನಟನ ಸ್ಥಿತಿ ಹೀಗೆ ಆಗಿದೆ. ತೆಲುಗು ಶ್ರೀವಿಷ್ಣು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟಕ್ಕೂ ಶ್ರೀವಿಷ್ಣು ಅವರಿಗೆ ಏನಾಗಿದೆ? ತಿಳಿಸುತ್ತೇವೆ ನೋಡಿ..
ತೆಲುಗು ಚಿತ್ರರಂಗದ ಯುವನಟ ಶ್ರೀವಿಷ್ಣು, ಕೆಲವು ತೆಲುಗು ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ನಟನ ಆರೋಗ್ಯ ಗಂಭೀರ ಸ್ಥಿತಿಯಲಿದ್ದು, ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀವಿಷ್ಣು ಅವರಿಗೆ ಕೆಲವು ದಿನಗಳಿಂದ ಜ್ವರ ಬಂದಿದ್ದು, ಅವರು ಸಾಮಾನ್ಯ ಜ್ವರ ಇರಬಹುದು ಎಂದುಕೊಂಡು, ಸಾಮಾನ್ಯವಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ ಎಷ್ಟೇ ಚಿಕಿತ್ಸೆ ಪಡೆದುಕೊಂಡಿದ್ದರು ಸಹ, ಶ್ರೀವಿಷ್ಣು ಅವರಿಗೆ ಜ್ವರ ಕಡಿಮೆ ಆಗಿಲ್ಲ. ಕೊನೆಗೆ ಆಸ್ಪತ್ರೆಗೆ ತೋರಿಸಿದಾಗ, ಅಸಲಿ ವಿಷಯ ತಿಳಿದುಬಂದಿದ್ದು, ಶ್ರೀವಿಷ್ಣು ಅವರಿಗೆ ಡೆಂಗ್ಯೂ ಜ್ವರ ಬಂದಿದೆ.

ಜ್ವರದ ತೀವ್ರತೆ ಹೆಚ್ಚಾಗಿದ್ದು, ಶ್ರೀವಿಷ್ಣು ಅವರ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿದೆ. ಅವರನ್ನು ಸಹಜ ಸ್ಥಿತಿಗೆ ತರಲು ವೈದ್ಯರು ಬಹಳ ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ವಿಚಾರದ ಬಗ್ಗೆ ಶ್ರೀವಿಷ್ಣು ಅವರ ಕುಟುಂಬದವರು ಮಾಹಿತಿ ನೀಡಿದ್ದಾರೆ. ಇದ್ದಕ್ಕಿದ್ದ ಹಾಗೆ ಇವರಿಗೆ ಈ ರೀತಿ ಆಗಿದ್ದು, ತೆಲುಗು ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದೆ. ಆರೋಗ್ಯದಲ್ಲಿ ಸ್ವಲ್ಪ ಏರು ಪೇರು ಉಂಟಾದರು ಸಹ, ನಿರ್ಲಕ್ಷ್ಯ ಮಾಡಬಾರದು, ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎನ್ನುವುದನ್ನು ಕಲಿಯಬೇಕು. ಶ್ರೀವಿಷ್ಣು ಅವರು ಬೇಗ ಹುಷಾರಾಗಿ ಬರಲಿ ಎನ್ನುತ್ತಿದೆ ಟಾಲಿವುಡ್.