ಬಾಲಿವುಡ್ ಅನ್ನು ಚಪ್ಪಲಿಯ ಬೆಲೆಯ ಮೂಲಕ ಶೇಕ್ ಮಾಡಿದ ವಿಜಯ್: ಹೆಚ್ಚು ಅಲ್ಲ ಸ್ವಾಮಿ, ಚಿಲ್ಲರೆ ಹಣದ ಚಪ್ಪಲಿ. ಎಷ್ಟು ಗೊತ್ತೇ?
ನಟ ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದ ಸ್ಟಾರ್ ಹೀರೋ ಆಗಿ ಹೆಸರು ಮಾಡಿದ್ದಾರೆ. ಇದೀಗ ಲೈಗರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ. ಲೈಗರ್ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ವಿಚಾರ ಎಲ್ಲಾ ಅಭಿಮಾನಿಗಳಿಗೂ ಗೊತ್ತೇ ಇದೆ. ಲೈಗರ್ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿ ಸೆನ್ಸೇಷನ್ ಸೃಷ್ಟಿಸಿದೆ.
ಈ ಸಿನಿಮಾ ಹಿಂದಿಯಲ್ಲಿ ಸಹ ತೆರೆಕಾಣುತ್ತಿದ್ದು, ಲೈಗರ್ ಸಿನಿಮಾವನ್ನು ಪೂರಿ ಜಗನ್ನಾಧ್ ನಿರ್ದೇಶನ ಮಾಡಿದ್ದರೆ, ನಾಯಕಿಯಾಗಿ ಅನನ್ಯ ಪಾಂಡೆ ನಟಿಸಿದ್ದಾರೆ. ಲೈಗರ್ ಸಿನಿಮಾದ ಹಿಂದಿ ಟ್ರೈಲರ್ ಲಾಂಚ್ ಅದ್ಧೂರಿಯಾಗಿ ನಡೆಯಿತು. ಹಿಂದಿ ಟ್ರೈಲರ್ ಲಾಂಚ್ ಗೆ ನಿರ್ಮಾಪಕರಾದ ಕರಣ್ ಜೋಹರ್ ಹಾಗು ರಣವೀರ್ ಸಿಂಗ್ ಸಹ ಬಂದಿದ್ದರು. ಇವರೆಲ್ಲರೂ ಐಷಾರಾಮಿ ಆಗಿ ಬಂದಿದ್ದರೆ, ಸಿನಿಮಾ ನಾಯಕ ವಿಜಯ್ ದೇವರಕೊಂಡ ಸರಳವಾಗಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ. ವಿಜಯ್ ದೇವರಕೊಂಡ ಅವರು ಟ್ರೈಲರ್ ಲಾಂಚ್ ಗೆ ಧರಿಸಿದ್ದ ಚಪ್ಪಲಿ ವಿಚಾರ ಈಗ ಎಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ.
ಈ ಚಪ್ಪಲಿ ಫೋಟೋ ಮತ್ತು ವಿಡಿಯೋ ಸಹ ಭಾರಿ ವೈರಲ್ ಆಗಿದೆ. 50 ಮಿಲಿಯನ್ ಗಿಂತ ಹೆಚ್ಚಿನ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ವಿಜಯ್ ದೇವರಕೊಂಡ ಅವರು ಧರಿಸಿದ್ದ ಚಪ್ಪಲಿಯ ಬೆಲೆ ಕೇವಲ ₹199 ರೂಪಾಯಿಗಳು. ಹೀರೋ ಸರಳತೆಗೆ ನೆಟ್ಟಿಗರು ಮತ್ತು ಅಭಿಮಾನಿಗಳ ಆಶ್ಚರ್ಯಗೊಂಡಿದ್ದಾರೆ. ಕರಣ್ ಜೋಹರ್ ಮತ್ತು ರಣವೀರ್ ಹಾಗೂ ಇನ್ನಿತರ ಗಣ್ಯರು, ಐಷಾರಾಮಿ ಸೂಟ್ ಬೂಟ್ ಧರಿಸಿ ಬಂದಿದ್ದರೆ, ವಿಜಯ್ ದೇವರಕೊಂಡ ಮಾತ್ರ, 199 ರೂಪಾಯಿ ಚಪ್ಪಲಿ ಧರಿಸಿ ಬಂದಿದ್ದರು. ಈ ಬಗ್ಗೆ ಈಗ ಜೋರಾಗಿಯೇ ಚರ್ಚೆ ನಡೆಯುತ್ತಿದೆ.
Comments are closed.