ಟಾಪ್ ರಾಷ್ಟ್ರ ಪ್ರಶಸ್ತಿ ವಿಜೇತ ನಾಟಿಗೆ ಬಾರಿ ಮುಜುಗರ. ನಟಿಗೆ ಬೀದಿಯಲ್ಲಿಯೇ ಹಿಗ್ಗಾಮುಗ್ಗಾ ಅಟ್ಟಾಡಿಸಿ ಹೊಡೆದ ಮತ್ತೊಬ್ಬ ನಟನ ಪತ್ನಿ. ಯಾಕೆ ಗೊತ್ತೇ??
ಈಗೆಲ್ಲಾ ಸೆಲೆಬ್ರಿಟಿಗಳಿಗಾಗಲಿ ಅಥವಾ ಸಾಮಾನ್ಯ ಜನರಿಗಾಗಲಿ ಯಾರಿಗೂ ಸಹ ಸುರಕ್ಷತೆ ಇಲ್ಲ. ಅಂತಹ ಸಮಾಜದಲ್ಲಿ ಮಾವು ಬಾಳುತ್ತಿದ್ದೇವೆ. ಇದೀಗ ರಾಷ್ಟ್ರಪ್ರಶಸ್ತಿ ವಿಜೇತ ನಟಿಯ ಮೇಲೆ ಹಲ್ಲೆ ನಡೆದಿದೆ. ಒಡಿಯಾ ಸಿನಿಮಾಗಳ ಖ್ಯಾತ ನಟಿ, ಹಾಗೂ ಹಿಂದಿ ಕಿರುತೆರೆಯಲ್ಲೂ ಕಾಣಿಸಿಕೊಂಡಿರುವ ನಟಿ ಪ್ರಕೃತಿ ಮಿಶ್ರಾ ಅವರ ಮೇಲೆ ಹಲ್ಲೆ ನಡೆದಿದೆ. ಒಡಿಯಾದ ಖ್ಯಾತ ನಟ, ಬಾಬುಶಾನ್ ಮೊಹಾಂತ್ ಅವರ ಪತ್ನಿ ತೃಪ್ತಿ ನಟಿ ಪ್ರಕೃತಿ ಮಿಶ್ರಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ನಟಿಯ ಮೇಲೆ ಮೂಡಿರುವ ಅನುಮಾನದಿಂದ ಈ ರೀತಿ ಮಾಡಿದ್ದಾರೆ.
ತನ್ನ ಗಂಡನ ಜೊತೆಗೆ ಪ್ರಕೃತಿ ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನುವ ಅನುಮಾನದಿಂದ, ತೃಪ್ತಿ ಅವರು ಪ್ರಕೃತಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಕೃತಿ ಮತ್ತು ಬಾಬುಶಾನ್ ಇಬ್ಬರು ಕಾರ್ ನಲ್ಲಿ ಹೋಗುತ್ತಿದ್ದಾಗ, ಅವರ ಕಾರ್ ಅನ್ನು ಅಡ್ಡಗಟ್ಟಿ ನಿಲ್ಲಿಸಿದ ತೃಪ್ತಿ, ಕಾರ್ ಒಳಗೆ ಹೋಗಿ, ಪ್ರಕೃತಿ ಅವರ ಕೂದಲನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಈ ಘಟನೆ ನಡೆದಾಗ ಪ್ರಕೃತಿ ಅವರು ಸ್ಥಳೀಯ ಜನರಿಗೆ ಸಹಾಯ ಕೇಳಿದ್ದು, ಜನರು ಸಹಾಯ ಮಾಡದೆ, ಘಟನೆಯ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು. ಈ ಸಮಯದಲ್ಲಿ ಪ್ರಕೃತಿ ಅಸಾಹಕವಾಗಿದ್ದರು. ಒಂದು ಸಿನಿಮಾ ಕೆಲಸದಿಂದ ಬಾಬುಶಾನ್ ಅವರೊಡನೆ ಹೆಚ್ಚು ಓಡಾಡುವ ಹಾಗೆ ಆಗಿತ್ತಂತೆ.
ಆದರೆ ತೃಪ್ತಿ ಅವರು ಅದನ್ನು ತಪ್ಪು ತಿಳಿದುಕೊಂಡು, ಪ್ರಕೃತಿ ಅವರ ಮೇಲೆ ಈ ರೀತಿ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಪ್ರಕೃತಿ ಅವರು ಪ್ರತಿಕ್ರಿಯೆ ನೀಡಿದ್ದು, ತಾನು ಯಾರ ಗಂಡನನ್ನು ಕದ್ದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಸಿನಿಮಾ ಕಾರಣದಿಂದ ಮೊಹಾಂತ್ ಅವರ ಜೊತೆ ಹೆಚ್ಚು ಓಡಾಡಬೇಕಿತ್ತು, ಆದರೆ ಈಗ ಸಿನಿಮಾ ಇಂದ ಹೊರಬಂದಿದ್ದೇನೆ ಎಂದು ತಿಳಿಸಿರುವ ಪ್ರಕೃತಿ ಅವರು, ತಾನು ಯಾರ ವಿರುದ್ಧವೂ ಆರೋಪ ಮಾಡಲು ಇಷ್ಟಪಡುವುದಿಲ್ಲ, ಕಾನೂನಿನ ಪ್ರಕಾರ ಹೋಗುತ್ತೇನೆ..ಎಂದು ಹೇಳಿದ್ದಾರೆ. ಜೊತೆಗೆ, ರೀಲ್ ನಲ್ಲಿ ಹೀರೋಯಿನ್ ಆಗಿದ್ದು, ರಿಯಲ್ ಲೈಫ್ ನಲ್ಲಿ ಹೀರೋ ಆಗಿರುವುದಾಗಿ ಹೇಳಿದ್ದಾರೆ ಪ್ರಕೃತಿ. ಈ ನಟಿ ಹಲೋ ಅರ್ಸಿ ಎನ್ನುವ ಸಿನಿಮಾಗೆ ,65ನೇ ರಾಷ್ಟ್ರಪ್ರಶಸ್ತಿಯಲ್ಲಿ ಸ್ಪೆಷಲ್ ಜ್ಯುರಿ ಅವಾರ್ಡ್ ಪಡೆದಿದ್ದಾರೆ.
Comments are closed.