ಕೊನೆಗೂ ಪ್ರಿಂಟ್ ಆಯಿತು ರವಿ ಮಾಮ ರವರ ಪುತ್ರದ ಮದುವೆ ಕಾರ್ಡ್. ಹೇಗಿದೆ ಗೊತ್ತೇ?? ಏನೆಲ್ಲಾ ವಿಶೇಷತೆ ಗೊತ್ತೇ??
ಕನ್ನಡ ಚಿತ್ರರಂಗದ ಶೋಮ್ಯಾನ್ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಈಗ ಮದುವೆ ಸಂಭ್ರಮ ಶುರುವಾಗಿದೆ. ಕೆಲವು ದಿನಗಳಿಂದ ರವಿಚಂದ್ರನ್ ಅವರ ಮಗ ಮನೋರಂಜನ್ ಅವರ ಮದುವೆಯ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿದ್ದವು. ರವಿಚಂದ್ರನ್ ಹಾಗೂ ಸುಮತಿ ದಂಪತಿಗೆ ಮೂವರು ಮಕ್ಕಳು, 2019ರಲ್ಲಿ ಮಗಳ ಮದುವೆಯನ್ನು ಅದ್ಧೂರಿಯಾಗಿ ಪ್ಯಾಲೇಸ್ ಗ್ರೌಂಡ್ಸ್ ನಲ್ಲಿ ಮಾಡಿದ ಕ್ರೇಜಿಸ್ಟಾರ್, ಇದೀಗ ಮಗನ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದೀಗ ಮನೋರಂಜನ್ ಅವರ ಮದುವೆ ಆಮಂತ್ರಣ ಪತ್ರಿಕೆ ಲೀಕ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
ಮನೋರಂಜನ್ ರವಿಚಂದ್ರನ್ ಅವರ ಮದುವೆ ಆಮಂತ್ರಣ ಪತ್ರಿಕೆ ಬಗ್ಗೆ ಅಥವಾ ಮದುವೆ ಬಗ್ಗೆ ಕ್ರೇಜಿಸ್ಟಾರ್ ಅವರ ಕುಟುಂಬದ ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ ಆದರೆ ಮದುವೆ ಆಮಂತ್ರಣ ಪತ್ರಿಕೆಯ ಫೋಟೋ ವೈರಲ್ ಆಗಿದ್ದು, ಬಹಳ ವಿಶೇಷತೆಯಿಂದ ಕೂಡಿದೆ. ಒಂದು ಸಿಂಹಾಸನದ ಮೇಲೆ ರವಿಚಂದ್ರನ್ ಅವರು ಕುಳಿತಿದ್ದು, ಅದರ ಮೇಲೆ ಹೃದಯದ ಆಕಾರ ಮಾಡಿ, ಹುಡುಗ ಹುಡುಗಿಯ ಹೆಸರು ಮತ್ತು ಮದುವೆ ಬಗ್ಗೆ ಮಾಹಿತಿ ನೀಡಲಾಗಿದೆ. ಇದರಲ್ಲಿ ಬಹಳ ವಿಶೇಷವಾಗಿ, ರವಿಚಂದ್ರನ್ ಅವರನ್ನು ಕೆತ್ತಲಾಗಿದೆ. ಈ ಫೋಟೋ ಇಂದ ಸಿಕ್ಕಿರುವ ಮಾಹಿತಿಯ ಪ್ರಕಾರ, ಆಗಸ್ಟ್ 20 ಮತ್ತು 21ರಂದು ಮನೋರಂಜನ್ ಅವರ ಮದುವೆ ನಿಗದಿಯಾಗಿದೆ.
ಇನ್ನು ಇವರು ಮದುವೆ ಆಗುತ್ತಿರುವ ಹುಡುಗಿಯ ಹೆಸರು ಸಂಗೀತಾ ದೀಪಕ್ ಎನ್ನಲಾಗಿದ್ದು, ಇವರು ಕೂಡ ಬೆಂಗಳೂರಿನವರೆ ಆಗಿದ್ದಾರೆ, ಸಂಗೀತ ಅವರು, ವಿಲ್ಸನ್ ಗಾರ್ಡನ್ ನಲ್ಲಿ ವಾಸ ಮಾಡುತ್ತಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಜೋಡಿಯ ಮದುವೆ, ಬೆಂಗಳೂರು ಪ್ಯಾಲೆಸ್ ಗ್ರೌಂಡ್ಸ್ ನಲ್ಲಿ, ವೈಟ್ ಪೆಟೆಲ್ಸ್ ನಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಮದುವೆಯ ಆಮಂತ್ರಣ ಪತ್ರಿಕೆ ಇಂದ ತಿಳಿದ್ಯ್ ಬಂದಿದೆ. ಮನೋರಂಜನ್ ಅವರು ಸ್ಯಾಂಡಲ್ ವುಡ್ ನಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿ ವಿಶೇಷ ಏನು ಅಂದ್ರೆ, ಮನೋರಂಜನ್ ಅವರು ಲವ್ ಮ್ಯಾರೇಜ್ ಆಗುತ್ತಿಲ್ಲ, ಅಪ್ಪ ಅಮ್ಮ ನೋಡಿದ ಹುಡುಗಿಯನ್ನೇ ಮದುವೆ ಆಗುತ್ತಿದ್ದಾರೆ.
Comments are closed.