ತಮಿಳಿನ ಖ್ಯಾತ ನಟ, ತಲಪತಿ ವಿಜಯ್ ರವರ ಪಾಲಿಗೆ ವಿಲ್ಲನ್ ಆದ ಸಮಂತಾ. ತಮಿಳಿನಲ್ಲಿ ಏನಾಗುತ್ತಿದೆ ಗೊತ್ತೇ??
ನಟಿ ಸಮಂತಾ ತಮ್ಮ ಸಿನಿಮಾಗಳು ಮತ್ತು ವಿವಾದಗಳಿಂದಲೇ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಕಮೆಂಟ್ ಗಳು ಮತ್ತು ಕಟುವಾದ ಪ್ರತ್ಯುತ್ತರಗಳೊಂದಿಗೆ ಆಗಾಗ ಸುದ್ದಿಯಾಗುತ್ತಾರೆ. ಇದೀಗ ಸಮಂತಾ ಅವರು ಮತ್ತೊಮ್ಮೆ ಹಾಟ್ ಟಾಪಿಕ್ ಆಗಿದ್ದಾರೆ. ಕಾಲಿವುಡ್ ಸ್ಟಾರ್ ಹೀರೋ ನಟಿ ವಿಜಯ್ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ದಳಪತಿ ಅಭಿಮಾನಿಗಳು ಈ ಪ್ರಾಜೆಕ್ಟ್‌ಗಾಗಿ ಉತ್ಸುಕರಾಗಿದ್ದಾರೆ ಏಕೆಂದರೆ, ‘ಮಾಸ್ಟರ್’ ಕಾಂಬೊ ಮತ್ತೊಮ್ಮೆ ತೆರೆಮೇಲೆ ಬರಲಿದೆ. ಮುಂಬರುವ ಈ ಚಿತ್ರದ ಹೈಪ್ ಹೆಚ್ಚಿಸಲು ಕೇಳಿಬರುತ್ತಿರುವ ಮತ್ತೊಂದು ಮಾತು ಏನೆಂದರೆ ಇದರಲ್ಲಿ ಸಮಂತಾ ನೆಗೆಟಿವ್ ರೋಲ್ ಮಾಡಲಿದ್ದಾರಂತೆ.
ಈ ಗಾಸಿಪ್ ಇಷ್ಟು ಗಟ್ಟಿಯಾಗಿ ಸದ್ದು ಮಾಡಲು ಕಾರಣ ಏನೆಂದರೆ, ಸ್ಯಾಮ್ ಈ ಹಿಂದೆಯೂ ನೆಗೆಟಿವ್ ಪಾತ್ರಗಳಲ್ಲಿ ನಟಿಸಿ ತನ್ನ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ನಟ ವಿಕ್ರಮ್ ಅಭಿನಯದ ’10 ಎಂಡ್ರಾತುಕುಲ್ಲಾ’ ಚಿತ್ರದಲ್ಲಿ ಸಮಂತಾ ದ್ವಿಪಾತ್ರದಲ್ಲಿ ನಟಿಸಿದ್ದರು. ಒಂದು ನಾಯಕಿ ಪಾತ್ರವಾದರೆ ಇನ್ನೊಂದು ನೆಗೆಟಿವ್ ಪಾತ್ರ. ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡದಿದ್ದರೂ ಸ್ಯಾಮ್ ಗೆ ನಿರಾಸೆಯಾಗಲಿಲ್ಲ. ಇಡೀ ಸೌತ್ ಸಿನಿ ಇಂಡಸ್ಟ್ರಿಯಲ್ಜ್ ನ ಸ್ಟಾರ್ ಹೀರೋಯಿನ್ ಆಗಿ ಯಶಸ್ಸನ್ನು ಮುಂದುವರೆಸುತ್ತಿರುವ ಸಮಯದಲ್ಲಿ, ಅವರು ಬಹು ನಿರೀಕ್ಷಿತ ‘ಫ್ಯಾಮಿಲಿ ಮ್ಯಾನ್2’ ಸರಣಿಯಲ್ಲಿ ನೆಗಟಿವ್ ಪಾತ್ರವನ್ನು ನಿರ್ವಹಿಸಿದರು, ಆ ಪಾತ್ರಕ್ಕೆ ಅದ್ಭುತವಾದ ರೆಸ್ಪಾನ್ಸ್ ಸಹ ಸಿಕ್ಕಿತ್ತು.
ಕಂಟೆಂಟ್ ಮತ್ತು ಕ್ಯಾರೆಕ್ಟರ್ ಪರ್ಫೆಕ್ಟ್ ಆಗಿದ್ದರೆ ಕೆರಿಯರ್ ವಿಷಯದಲ್ಲಿ ಎಂತಹ ರಿಸ್ಕ್ ತೆಗೆದುಕೊಳ್ಳಲು ಸಿದ್ಧ ಎಂದು ಸಾಬೀತು ಮಾಡಿದ್ದಾರೆ ಸಮಂತಾ. ಇನ್ನು ವಿಕ್ರಮ್ ಸಿನಿಮಾದ ಮೂಲಕ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿರುವ ಲೋಕೇಶ್ ಕನಕರಾಜ್ ಸದ್ಯ ಫುಲ್ ಸ್ವಿಂಗ್ ನಲ್ಲಿದ್ದಾರೆ. ಇದೀಗ ಅವರು ವಿಜಯ್ ಅವರಿಗೆ ಸಿನಿಮಾ ಮಾಡಲಿದ್ದು, ಅದರಲ್ಲಿ ತಮಗೆ ಬರೆದಿರುವ ನೆಗೆಟಿವ್ ಪಾತ್ರ ಮಾಡಲು ಆಸಕ್ತಿ ತೋರಿದ್ದಾರಂತೆ ಸಮಂತಾ. ಇಲ್ಲಿ ಇನ್ನೊಂದು ಕುತೂಹಲಕಾರಿ ಅಂಶವೇನೆಂದರೆ, ವಿಜಯ್ ಮತ್ತು ಸಮಂತಾ ಈಗಾಗಲೇ ಜೋಡಿಗಳಾಗಿ ಮೂರು ಸಿನಿಮಾದಲ್ಲಿ ನಟಿಸಿದ್ದಾರೆ.
ಕತ್ತಿ, ತೆರಿ, ಮತ್ತು ಮೆರ್ಸಲ್ ಚಿತ್ರಗಳಲ್ಲಿ ಸಮಂತಾ ಅವರು ವಿಜಯ್ ಅವರೊಡನೆ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ವಿಜಯ್ ಜೊತೆ ನೆಗೆಟಿವ್ ರೋಲ್ ನಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಸ್ಪಷ್ಟನೆ ಬರಬೇಕಿದೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಜೋಡಿಯಾಗಿ ನಾಯಕಿಯಾಗಿ ನಟಿಸಿ ಡ್ಯುಯೆಟ್ ಹಾಡುವುದರ ಜೊತೆಗೆ ವಿಶೇಷ ಹಾಡುಗಳ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ ಸಮಂತಾ. ಪಾತ್ರನಿರ್ವಹಣೆ ಉತ್ತಮವಾಗಿದ್ದರೆ, ಪಾತ್ರದ ಅವಧಿಯನ್ನು ಹೆಚ್ಚು ಪರಿಗಣಿಸಲಾಗುವುದಿಲ್ಲ. ಅದೇ ರೀತಿ ನೆಗೆಟಿವ್ ಪಾತ್ರವಾದರು ಹಿಂದೆ ಸರಿಯುವುದಿಲ್ಲ. ಹಾಗಾಗಿ ಎಲ್ಲವೂ ಸರಿಯಾಗಿ ನಡೆದರೆ ಲೋಕೇಶ್ ನಿರ್ದೇಶನದಲ್ಲಿ ವಿಜಯ್ ಗೆ ವಿಲನ್ ಆಗಿ ಸಮಂತಾ ತೆರೆ ಮೇಲೆ ಮಿಂಚಲಿದ್ದಾರೆ ಎನ್ನಲಾಗುತ್ತಿದೆ.
Comments are closed.