Neer Dose Karnataka
Take a fresh look at your lifestyle.

ರಾಮಾಚಾರಿಯಲ್ಲಿ ಖಡಕ್ ಅಪ್ಪನ ಪಾತ್ರ ನಿರ್ವಹಣೆ ಮಾಡುತ್ತಿರುವ ಅಶ್ವಥ್ ರವರು ಒಂದು ಎಪಿಸೋಡಿಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

58

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರವಾಹಿ ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಧಾರವಾಹಿ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತದೆ. ಕಥೆಯಲ್ಲಿ, ನಾಯಕಿ ಚಾರು, ರಾಮಾಚಾರಿಯಿಂದ ಹೇಗಾದರೂ ಮಾಡಿ, ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ ಪಡೆದುಕೊಳ್ಳಲೇಬೇಕು ಎಂದು ತಾನು ರಾಮಾಚಾರಿಯನ್ನು ಪ್ರೀತಿಸುತ್ತಿರುವುದಾಗಿ ನಾಟಕ ಮಾಡಿ, ತನ್ನ ಕೆಲಸ ಮಾಡಿಕೊಳ್ಳಬೇಕು ಎಂದುಕೊಂಡಿದ್ದಳು. ಆದರೆ ರಾಮಾಚಾರಿ ಸ್ಟೋರಿಯಲ್ಲಿ ಬಿಗ್ ಟ್ವಿಸ್ಟ್ ಕೊಟ್ಟಿದ್ದಾಗಿದೆ.

ಚಾರು ತನ್ನನ್ನು ಪ್ರೀತಿಸುತ್ತಿರುವುದರಿಂದ, ತಾನು ಚಾರುವನ್ನು ಮದುವೆ ಆಗುವ ರೀತಿ ಎರಡು ಕುಟುಂಬದವರನ್ನು ದೇವಸ್ಥಾನಕ್ಕೆ ಬರುವ ಹಾಗೆ ಮಾಡಿ, ಚಾರು ನಿಜವಾದ ಬಣ್ಣ ಏನು ಎಂದು ಎಲ್ಲರ ಎದುರು ಬಯಲು ಮಾಡುತ್ತಾನೆ ರಾಮಾಚಾರಿ. ಇದರಿಂದ ಚಾರುಗೆ ದೊಡ್ಡ ಅವಮಾನ ಆಗಿದೆ. ಇನ್ನು ರಾಮಾಚಾರಿ ಮನೆಯಲ್ಲಿ, ಮಾವನ ಮಗಳನ್ನು ಮದುವೆ ಆಗುವಂತೆ ಒತ್ತಾಯ ಮಾಡುತ್ತಿದ್ದಾರೆ. ರಾಮಾಚಾರಿ ತಂದೆ ಶಾಸ್ತ್ರಿಗಳಿಗೆ ಅನಾರೋಗ್ಯ ಉಂಟಾಗಿದೆ. ತಂದೆಗೋಸ್ಕರ ರಾಮಾಚಾರಿ, ಮದುವೆಗೆ ಒಪ್ಪಿಕೊಳ್ಳುವ ಹಾಗೆ ಕಾಣುತ್ತಿದೆ. ಈ ಧಾರವಾಹಿಯಲ್ಲಿ ಎಲ್ಲರ ಅಭಿನಯವು ಚೆನ್ನಾಗಿದೆ.

ರಾಮಾಚಾರಿ ತಂದೆಯ ಪಾತ್ರದಲ್ಲಿ ನಟಿಸುತ್ತಿರುವ ಶಂಕರ್ ಅಶ್ವತ್ಥ್ ಅವರ ಅಭಿನಯದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಶಂಕರ್ ಅಶ್ವತ್ಥ್ ಅವರು ರಾಮಾಚಾರಿ ಧಾರವಾಹಿ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದು, ಇವರ ಅಭಿನಯವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಶಂಕರ್ ಅಶ್ವತ್ಥ್ ಅವರು ರಾಮಾಚಾರಿ ಧಾರವಾಹಿಗೆ ಪಡೆದುಕೊಳ್ಳುವ ಸಂಭಾವನೆ ಎಷ್ಟು ಎನ್ನುವ ವಿಚಾರ ಈಗ ಚರ್ಚೆ ಆಗುತ್ತಿದ್ದು, ಸಿಕ್ಕಿರುವ ಮಾಹಿತಿಯ ಪ್ರಕಾರ ಶಂಕರ್ ಅಶ್ವತ್ಥ್ ಅವರು ಒಂದು ದಿನಕ್ಕೆ 35 ಸಾವಿರ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ.

Leave A Reply

Your email address will not be published.