ಈಗಲೂ ಕೂಡ ನೋಟದಲ್ಲಿಯೇ ಮನಗೆಲ್ಲುವ ಚೆಲುವೆ, ಕಾಲೇಜು ಹುಡುಗಿಯಂತೆ ಕಾಣುವ ಸುಮನ್ ರಂಗನಾಥನ್ ರವರ ವಯಸ್ಸು ಎಷ್ಟು ಗೊತ್ತೇ??
ಸಿಬಿಐ ಶಂಕರ್ ಸಿನಿಮಾದ ಗೀತಾಂಜಲಿ ಹಾಡನ್ನು ಕನ್ನಡಿಗರು ಮರೆಯಲು ಸಾಧ್ಯವಿಲ್ಲ. ಈ ಹಾಡಿನಲ್ಲಿ ಮುಖ್ಯ ಆಕರ್ಷಣೆ ಕರಾಟೆ ಕಿಂಗ್ ಶಂಕರ್ ನಾಗ್ ಅವರಾದರೆ ಮತ್ತೊಂದು ಆಕರ್ಷಣೆ ಮುದ್ದು ನಟಿ ಸುಮನ್ ರಂಗನಾಥ್ ಅವರು. ಕನ್ನಡತಿಯಾದ ನಟಿ ಸುಮನ್ ರಂಗನಾಥನ್ ಅವರು ಸಿನಿಮಾಗಳಿಗಿಂತ ಹೆಚ್ಚಾಗಿ ರಿಲೇಶನ್ಷಿಪ್ ಗಳ ವಿಚಾರಕ್ಕೆ ಸುದ್ದಿಯಾಗಿದ್ದವರು. ನಟಿ ಸುಮನ್ ರಂಗನಾಥನ್ ಅವರು ಹುಟ್ಟಿದ್ದು ಕರ್ನಾಟಕದ ತುಮಕೂರಿನಲ್ಲಿ. ಸುಮನ್ ಅವರು 1989ರಲ್ಲಿ ಸಿಬಿಐ ಶಂಕರ್ ಸಿನಿಮಾ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದರು.
ಮೊದಲ ಸಿನಿಮಾದಲ್ಲಿಯೇ ಶಂಕರ್ ನಾಗ್ ಅವರ ಜೊತೆ ನಟಿಸುವ ಅವಕಾಶ ಸುಮನ್ ರಂಗನಾಥನ್ ಅವರಿಗೆ ಸಿಕ್ಕಿತು. ಸಿಬಿಐ ಶಂಕರ್ ಸಿನಿಮಾ ಯಶಸ್ಸಿನಿಂದ ಸುಮನ್ ರಂಗನಾಥನ್ ಅವರಿಗೆ ಇನ್ನು ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸುಮನ್ ಅವರಿಗೆ ಸಿಕ್ಕಿತು. ನಂತರ ತಮಿಳು, ಹಿಂದಿ ಮತ್ತು ಬೆಂಗಾಲಿ ಸಿನಿಮಾಗಳಲ್ಲು ಸುಮನ್ ಅವರು ನಟಿಸಿ ಖ್ಯಾತಿ ಪಡೆದುಕೊಂಡರು. ಸ್ಯಾಂಡಲ್ ವುಡ್ ನ ಎಲ್ಲಾ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡರು ಸುಮನ್. ಸುಮನ್ ಅವರು ಸಿನಿಮಾಗಳಲ್ಲಿ ನಟಿಸಿ ಬೇಡಿಕೆಯ ನಟಿ ಎನಿಸಿಕೊಂಡರು.
ಅದರ ಜೊತೆಗೆ ರಿಲೇಶನ್ಷಿಪ್ ವಿಷಯದಲ್ಲಿ ಸಹ ಸುಮನ್ ಅವರು ಬಹಳ ಸುದ್ದಿಯಾಗಿದ್ದರು. 2005 ರಲ್ಲಿ ಬಾಲಿವುಡ್ ನಿರ್ಮಾಪಕ ಬಂಟಿ ಅವರ ಜೊತೆ ಮದುವೆಯಾದರು ಸುಮನ್. ಮದುವೆಯಾದ 8 ತಿಂಗಳಿಗೆ ದಂಪತಿಗಳ ನಡುವೆ ವೈಮನಸ್ಸು ಮೂಡಿತ್ತು. 2006 ರಲ್ಲಿ ಏಕ್ತಾ ಕಪೂರ್ ಅವರ ಪಾರ್ಟಿಯಲ್ಲಿ ಎಲ್ಲರ ಮುಂದೆ ಜಗಳ ಆಡಿದ್ದರು ಸುಮನ್ ಮತ್ತು ಬಂಟಿ. ಈ ಘಟನೆ ನಂತರ ಗಂಡನ ಮನೆ ಬಿಟ್ಟು ಹೊರಬಂದರು. ಬಳಿಕ ಚಿತ್ರರಂಗಕ್ಕೆ ಮತ್ತೊಮ್ಮೆ ಕಂಬ್ಯಾಕ್ ಮಾಡಿದರು. ಸುಮನ್ ರಂಗನಾಥನ್ ಅವರು ಈಗಲೂ ಸಹ ನೋಡಲು ತುಂಬಾ ಸುಂದರವಾಗಿ ಹಾಗು ಯಂಗ್ ಆಗಿ ಕಾಣಿಸುತ್ತಾರೆ. ಯಾವುದೇ ಹೀರೋಯಿನ್ ಗೆ ಕಡಿಮೆ ಇಲ್ಲ ಎನ್ನುವ ಹಾಗಿದ್ದಾರೆ ಸುಮನ್. ಇವರ ನಿಜವಾದ ವಯಸ್ಸು 48 ವರ್ಷ. ಸುಮನ್ ಅವರಿಗೆ ನಿಜಲ್ಲೂ ಇಷ್ಟು ವಯಸ್ಸಾಗಿದೆ ಎಂದರೆ ನಂಬುವುದು ಕಷ್ಟವೇ.
Comments are closed.