ನೈಟ್ ಶಿಫ್ಟ್ ಮಾಡುತ್ತಿದ್ದ ಗಂಡ, ಹೆಂಡತಿ ಮೇಲೆ ಅನುಮಾನ ಬಂದು ಗೊತ್ತಿಲ್ಲದಂತೆ ಸಿಸಿಟಿವಿ ಹಾಕಿಸಿದ, ಆದರೆ ಹೆಂಡತಿ ಪರಿಸ್ಥಿತಿ ನೋಡಿ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ??
ಗಂಡ ಹೆಂಡತಿ ಸಂಬಂಧ ಎನ್ನುವುದು ಬಹಳ ಪವಿತ್ರವಾದ ಸಂಬಂಧ. ಈ ಸಂಬಂಧ ನಿಲ್ಲುವುದೇ ನಂಬಿಕೆ ಮತ್ತು ವಿಶ್ವಾಸದ ಮೇಲೆ. ಗಂಡ ಹೆಂಡತಿಯರ ನಡುವೆ ಪ್ರೀತಿ ಮತ್ತು ವಿಶ್ವಾಸ ಇಲ್ಲದೆ ಹೋದರೆ, ಆ ಸಂಬಂಧ ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ. ಮುರಿದು ಬೀಳುತ್ತವೆ. ಹಾಗಾಗಿ ಆಯ್ಕೆ ಮಾಡುವ ಮೊದಲು ಜವಾಬ್ದಾರಿಯಿಂದ ಇರಬೇಕು, ಹಾಗೆಯೇ ನಂಬಿಕೆಗೆ ಅರ್ಹರಾಗಿರುವವರ ಜೊತೆಗೆ ಮದುವೆಯಾಗಬೇಕು. ಆಗ ಮಾತ್ರ ಜೀವನ ಚೆನ್ನಾಗಿರುತ್ತದೆ.
ಹೀಗೆ ನಂಬಿಕೆ ವಿಚಾರದಲ್ಲಿ ತನ್ನ ಹೆಂಡತಿಯ ಮೇಲೆ ಅನುಮಾನ ಪಟ್ಟ ಒಬ್ಬ ಗಂಡ, ನಿಜವಾದ ವಿಚಾರ ಏನು ಎಂದು ತಿಳಿದು ಭಾವುಕನಾಗಿದ್ದ. ಮನೆಗೆ ಬಂದಾಗಲೆಲ್ಲಾ ಹೆಂಡತಿ ಸುಸ್ತಾಗಿರುವಂತೆ ಕಾಣುತ್ತಿದ್ದಳು, ಅದನ್ನು ನೋಡಿ ಗಂಡನಿಗೆ ಅನುಮಾನ ಮೂಡಿ, ಸಿಸಿಟಿವಿ ಹಾಕಿಸಿ, ಹೆಂಡತಿ ನಿಜಕ್ಕೂ ಏನು ಮಾಡುತ್ತಿದ್ದಾಳೆ ಎನ್ನುವುದನ್ನು ತಿಳಿದುಕೊಂಡ ನಂತರ, ಗಂಡನಿಗೆ ಶಾಕ್ ಆಗಿದೆ ಆತ ಭಾವುಕನಾಗಿದ್ದಾನೆ.
ಈ ಘಟನೆ ನಿಜವಾಗಿಯು ನಡೆದಿದ್ದು, ಇದು ನಡೆದಿರುವುದು ಅಮೆರಿಕಾದ ಲಾಸ್ ವೇಗಾಸ್ ನಲ್ಲಿ. ಈ ಘಟನೆ ಬಗ್ಗೆ ತಿಳಿದರೆ ನೀವು ಕೂಡ ಭಾವುಕರಾಗುವುದು ಖಂಡಿತ. ಆ ಹೆಂಡತಿಯ ಹೆಸರು ಮೆನಿಲಿಯಾ, ಈಕೆ ಲಾಸ್ ವೇಗಾಸ್ ನಲ್ಲಿಯೇ ವಾಸವಿದ್ದಾರೆ. ಈಕೆಯ ಗಂಡ ಪ್ರವಾಸಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಮೆನಿಲಿಯಾ ಮನೆಯಲ್ಲೇ ಇರುತ್ತಾರೆ. ಗಂಡ ಪ್ರತಿದಿನ ಮನೆಗೆ ಬಂದಾಗ ಹೆಂಡತಿ ಸುಸ್ತಾಗಿರುವುದು ನೋಡಿ ಅವನಿಗೆ ಅನುಮಾನ ಮೂಡುತ್ತದೆ. ಹಾಗಾಗಿ ಮನೆಯಲ್ಲಿ ಸಿಸಿಟಿವಿ ಹಾಕಿಸಬೇಕು ಎಂದುಕೊಳ್ಳುತ್ತಾನೆ.
ಹೆಂಡತಿಗೆ ಗೊತ್ತಾಗದ ಹಾಗೆ ಹರಸಾಹಸ ಮಾಡಿ, ಸಿಸಿಟಿವಿ ಹಾಕಿಸುತ್ತಾನೆ. ಆಫೀಸ್ ನಲ್ಲಿ ಕೂತು ಹೆಂಡತಿ ಏನು ಮಾಡುತ್ತಾಳೆ, ಸುಸ್ತಾಗುವುದು ಯಾಕೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದುಕೊಳ್ಳುತ್ತಾನೆ. ಆತನಿಗೆ ತನ್ನ ಹೆಂಡತಿ ಬೇರೆ ಯಾರೊಂದಿಗಾದರು ಸಂಬಂಧ ಇಟ್ಟುಕೊಂಡಿರಬಹುದು ಎನ್ನುವ ಅನುಮಾನ ಕೂಡ ಇರುತ್ತದೆ. ಹಾಗಾಗಿ ಸಿಸಿಟಿವಿ ಹಾಕಿಸುತ್ತಾನೆ. ಆದರೆ ನಿಜಕ್ಕೂ ಆತನ ಹೆಂಡತಿ ಮಾಡುತ್ತಿರುವುದೇನು ಎಂದು ತಿಳಿದು ಭಾವುಕನಾಗುತ್ತಾನೆ.
ಮೆನಿಲಿಯಾ ಅವರಿಗೆ ಮೂವರು ಮಕ್ಕಳಿರುತ್ತಾರೆ. ಮಕ್ಕಳನ್ನು ನೋಡಿಕೊಳ್ಳುವುದು, ಅವರಿಗೆ ಊಟ ಸಿದ್ಧಪಡಿಸುವುದು, ಇನ್ನಿತರ ಕೆಲಸಗಳನ್ನು ನೋಡಿಕೊಳ್ಳುವುದು ಎಲ್ಲಾ ಜವಾಬ್ದಾರಿ ಮೆನಿಲಿಯಾ ಅವರದ್ದೇ ಆಗಿರುತ್ತದೆ. ಗಂಡ ಕೆಲಸಕ್ಕೆ ಹೋಗುವುದರಿಂದ ಅವರೇ ನೋಡಿಕೊಳ್ಳಬೇಕು. ಹಾಗಾಗಿ ರಾತ್ರಿ ಇಡೀ ಆ ಕೆಲಸಗಳನ್ನು ಮಾಡುತ್ತಿರುತ್ತಾರೆ ಮೆನಿಲಿಯಾ. ಮಕ್ಕಳನ್ನು ಮಲಗಿಸಿ, ಮಕ್ಕಳಿಗೆ ಊಟ ತಿಂಡಿ ಸಿದ್ಧತೆ ಮಾಡುವುದು ಹಾಗೂ ಇನ್ನಿತರ ಕೆಲಸಗಳನ್ನು ಇಡೀ ರಾತ್ರಿ ಮಾಡುತ್ತಾರೆ..
ಹಗಲಿನ ಸಮಯದಲ್ಲಿ ಸಹ ಅವರಿಗೆ ಸರಿಯಾಗಿ ರೆಸ್ಟ್ ಮಾಡಲು ಸಮಯ ಸಿಗುವುದಿಲ್ಲ. ಆ ಕಾರಣದಿಂದ ಮೆನಿಲಿಯಾ ಅವರು ಸುಸ್ತಾಗಿರುವ ಹಾಗೆ ಕಾಣುತ್ತಿದ್ದರು. ನಿಜಕ್ಕೂ ತನ್ನ ಹೆಂಡತಿಗೆ ಇದ್ದ ಸಮಸ್ಯೆ ಇದು ಎಂದು ಅರಿತ ಗಂಡ, ಭಾವುಕನಾಗಿ ಕಣ್ಣೀರು ಹಾಕುತ್ತಾನೆ. ಇನ್ನೆಂದಿಗೂ ಹೆಂಡತಿ ಮೇಲೆ ಅನುಮಾನ ಪಡಬಾರದು ಎಂದು ನಿರ್ಧಾರ ಕೂಡ ಮಾಡುತ್ತಾನೆ. ಈ ಘಟನೆ ನಿಜಕ್ಕೂ ಎಲ್ಲರಿಗೂ ಒಂದು ಪಾಠದ ಹಾಗಿದೆ ಎಂದರೆ ತಪ್ಪಾಗುವುದಿಲ್ಲ.
Comments are closed.