ಮದುವೆಯಾಗುತ್ತೇನೆ ಎಂದು ಪ್ರೀತಿಸಿ ಕೈ ಕೊಟ್ಟ ಯುವಕನಿಗೆ ಬುದ್ದಿ ಕಲಿಸಲು ಅದೇ ಹುಡುಗನ ತಂದೆ ಜೊತೆ ಹುಡುಗಿ ಏನು ಮಾಡಿದ್ದಾಳೆ ಗೊತ್ತೆ?
ಈ ಪ್ರಪಂಚದಲ್ಲಿ ವಿಚಿತ್ರವಾದ ಘಟನೆಗಳು ನಡೆಯುವುದನ್ನು ನಾವು ಕೇಳಿರುತ್ತೇವೆ. ಅದರಲ್ಲೂ ಪ್ರೀತಿಗೋಸ್ಕರ ನಾವು ಊಹೆ ಮಾಡಲು ಕೂಡ ಸಾಧ್ಯವಾಗದಂತಹ ಘಟನೆಗಳು ನಡೆದು ಹೋಗುತ್ತದೆ. ಅವುಗಳ ಬಗ್ಗೆ ಕೇಳಿದಾಗ ಅಥವಾ ನೋಡಿದಾಗ, ಹೀಗೂ ನಡೆಯುತ್ತಾ ಎನ್ನುವ ಅನುಮಾನ ನಮ್ಮಲ್ಲೇ ಮೂಡುವುದು ಸಹಜ. ಅಂಥದ್ದೇ ಒಂದು ಘಟನೆ ಅಮೆರಿಕಾದಲ್ಲಿ ನಡೆದಿದ್ದು, ಪ್ರೀತಿ ಮಾಡಿದ ಹುಡುಗ ಮೋಸ ಮಾಡುತ್ತಿದ್ದಾನೆ ಎಂದು ಗೊತ್ತಾದ ಬಳಿಕ ಹುಡುಗಿ ಮಾಡಿದ ಕೆಲಸ ಕೇಳಿದರೆ ನೀವು ಆಶ್ಚರ್ಯ ಪಡೋದು ಗ್ಯಾರಂಟಿ..
ಈ ಹುಡುಗಿಯ ಹೆಸರು ಆಗಸ್ಟಾ ಹಬಲ್, ಈಕೆ ಅಮೆರಿಕಾದ ನಿವಾಸಿ. ಆಗಸ್ಟಾ ತನಗೆ 21 ವರ್ಷವಿದ್ದಾಗ, 30 ವರ್ಷದ ಗಂಡಸಿನ ಜೊತೆ ಪ್ರೀತಿಯಲ್ಲಿ ಬಿದ್ದಳು. ಆತನನ್ನು ತೀವ್ರವಾಗಿ ಪ್ರೀತಿಸುತ್ತಿದ್ದಳು, ಆರಂಭದಲ್ಲಿ ಇವರಿಬ್ಬರ ಪ್ರೀತಿ ಚೆನ್ನಾಗಿಯೇ ಇತ್ತು, ಆತ ಹುಡುಗಿಗೆ ಹೂ ಮಟ್ಟಿ ಗಿಫ್ಟ್ಸ್ ಗಳನ್ನು ತಂದುಕೊಡುತ್ತಿದ್ದ, ಹಾಗೆಯೇ ಮದುವೆ ಪ್ರೊಪೋಸಲ್ ಸಹ ಮಾಡಿದ್ದ, ಆಗಸ್ಟಾ ಸಹ ಆತನನ್ನೇ ಮದುವೆಯಾಗಲು ಬಯಸಿದಳು. ಆದರೆ ಆತ, ಆಗಸ್ಟಾಗೆ ಮೋಸ ಮಾಡುತ್ತಿದ್ದಾನೆ ಎನ್ನುವ ವಿಚಾರ ಬೇಗ ಆಗಸ್ಟಾಗೆ ಗೊತ್ತಾಯಿತು. ಆಗಸ್ಟಾಳ ಸ್ನೇಹಿತೆಯ ಜೊತೆಗೆ ಆತ ಸಂಬಂಧ ಇಟ್ಟುಕೊಂಡಿದ್ದ.
ಈ ವಿಚಾರ ಆಕೆಗೆ ಗೊತ್ತಾಗಿ ಆತನಿಗೆ ಮತ್ತೊಂದು ಅವಕಾಶ ನೀಡಿದಳು, ಆದರೆ ಆತ ಸರಿ ಹೋಗಲಿಲ್ಲ. ಮತ್ತೊಂದು ಸಾರಿ ಅದೇ ತಪ್ಪನ್ನು ಮಾಡಿದನು. ಆಗ ಆಗಸ್ಟಾ ಆತನ ಜೊತೆ ಸಂಬಂಧ ಕಳೆದುಕೊಂಡಳು, ಆದರೆ ಆಕೆ ಹುಡುಗ ಮಾಡಿದ ಮೋಸಕ್ಕೆ ಸೇಡಿನ ಹಾಗೆ, ಆ ಹುಡುಗನ ತಂದೆಯ ಜೊತೆಗೆ ಮದುವೆಯಾದಳು. ತನ್ನ ಜೀವನದ ಈ ಎಲ್ಲಾ ವಿಚಾರವನ್ನು ಆಗಸ್ಟಾ ತನ್ನ ಮದುವೆಯ ವಾರ್ಷಿಕೋತ್ಸವದ ದಿನ ಹಂಚಿಕೊಂಡಿದ್ದಾಳೆ.
Comments are closed.