ಮಲಯಾಳಂ ಸ್ಟಾರ್ ನಟನ ಜೊತೆ ಕಾಣಿಸಿಕೊಂಡ ಗಟ್ಟಿಮೇಲೆ ರೌಡಿ ಬೇಬಿ ಅಮೂಲ್ಯ. ಭೇಟಿಯಾಗಿದ್ದು ಯಾಕೆ ಗೊತ್ತೇ??
ಗಟ್ಟಿಮೇಳ ಧಾರವಾಹಿ ನಟಿ ನಿಶಾ ರವಿಕೃಷ್ಣ ಅಮೂಲ್ಯ ಪಾತ್ರದಿಂದ ಜನರ ಮನಸ್ಸನ್ನು ಗೆದ್ದಿದ್ದಾರೆ. ಗಟ್ಟಿಮೇಳ ಧಾರವಾಹಿಯಲ್ಲಿ ರೌಡಿ ಬೇಬಿ ಎಂದೇ ಫೇಮಸ್ ಆಗಿದ್ದಾರೆ ನಿಶಾ. ಇತ್ತೀಚೆಗೆ ನಿಶಾ ಅವರು ತೆಲುಗು ಕಿರುತೆರೆಗೂ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನಲ್ಲಿ ಸಹ ನಿಶಾ ಅವರ ಧಾರವಾಹಿ ಒಳ್ಳೆಯ ಹೆಸರು ಪಡೆದುಕೊಂಡಿದ್ದು, ಅಲ್ಲಿ ಸಹ ನಿಶಾ ಅವರಿಗೆ ಅಭಿಮಾನಿ ಬಳಗ ಇದೆ..
ತೆಲುಗು ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಿಶಾ ಇದೀಗ ಮಲಯಾಳಂ ಚಿತ್ರರಂಗದ ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರನ್ನು ಭೇಟಿಯಾಗಿದ್ದಾರೆ. ದುಲ್ಕರ್ ಸಲ್ಮಾನ್ ಅವರಿಗೆ ಕೇರಳದಲ್ಲಿ ಮಾತ್ರವಲ್ಲದೆ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಎಲ್ಲಾ ಕಡೆ ದೊಡ್ಡ ಅಭಿಮಾನಿ ಬಳಗ ಇದೆ. ನಿಶಾ ಅವರು ಸಹ ದುಲ್ಕರ್ ಸಲ್ಮಾನ್ ಅವರ ಅಭಿಮಾನಿ ಆಗಿದ್ದು, ಮೆಚ್ಚಿನ ನಟನನ್ನು ಭೇಟಿ ಮಾಡಿ ಎಕ್ಸೈಟ್ ಆಗಿದ್ದಾರೆ ನಟಿ ನಿಶಾ. ಇನ್ನು ಈ ಸಂತೋಷದ ವಿಚಾರವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ದುಲ್ಕರ್ ಸಲ್ಮಾನ್ ಅವರು ಇತ್ತೀಚೆಗೆ ಸೀತಾ ರಾಮಂ ಎನ್ನುವ ಮೂರು ಭಾಷೆಯಲ್ಲಿ ಬಿಡುಗಡೆ ಆಗಲಿದೆ, ಈ ಸಿನಿಮಾದಲ್ಲಿ ಮೃಣಾಲಿನಿ ಠಾಕೂರ್, ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ. ಸೀತಾ ರಾಮಂ ಸಿನಿಮಾ ಪ್ರೊಮೋಷನ್ ಗಾಗಿ ಭಾಗವಹಿಸುತ್ತಿದ್ದು, ತೆಲುಗಿನ ಕಾರ್ಯಕ್ರಮ ಒಂದಕ್ಕೆ ಬಂದಿದ್ದು, ಅದೇ ಕಾರ್ಯಕ್ರಮದಲ್ಲಿ ನಿಶಾ ಸಹ ಇದ್ದರು, ಆ ಕಾರ್ಯಕ್ರಮದಲ್ಲಿ ದುಲ್ಕರ್ ಸಲ್ಮಾನ್ ಅವರನ್ನು ಭೇಟಿ ಮಾಡಿ ಫೋಟೋ ತೆಗೆಸಿಕೊಂಡಿರುವ ನಿಶಾ, ಅವುಗಳನ್ನು ಶೇರ್ ಮಾಡಿ, ದುಲ್ಕರ್ ಸಲ್ಮಾನ್ ಅವರ 36ನೇ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ನಿಶಾ ಅಭಿಮಾನಿಗಳು ಸಹ ಈ ಫೋಟೋಸ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ..
Comments are closed.