ಮಿಸ್ ಆಗಿ ಲೀಕ್ ಆಯಿತು ಬಿಗ್ ಬಾಸ್ ಮೊದಲ ಸ್ಪರ್ದಿಯ ಹೆಸರು: ಈ ಬಾರಿಯ ಅಧಿಕೃತವಾಗಿ ಹೋಗುತ್ತಿರುವ ಮೊದಲ ಸ್ಪರ್ಧಿ ಯಾರು ಗೊತ್ತೇ??
ಬಿಗ್ ಬಾಸ್ ಕಾರ್ಯಕ್ರಮ ಎಂದರೆ ಎಲ್ಲರಿಗೂ ವಿಶೇಷ ಕುತೂಹಲ ಇದ್ದೇ ಇರುತ್ತದೆ. ಪ್ರತಿ ಸೀಸನ್ ಮುಗಿದಮೇಲು ಹೊಸ ಸೀಸನ್ ಶುರುವಾಗೋದು ಯಾವಾಗ, ಹೇಗಿರುತ್ತದೆ, ಮನೆಯೊಳಗೆ ಬರುವ ಸ್ಪರ್ಧಿಗಳು, ಬಿಗ್ ಬಾಸ್ ಕೊಡುವ ಟಾಸ್ಕ್ ಹೇಗಿರುತ್ತದೆ ಎನ್ನುವ ಕುತೂಹಲ ಶುರುವಾಗುತ್ತದೆ. ಕಳೆದ ವರ್ಷ ಕೋವಿಡ್ ಇಂದ, ಬಿಗ್ ಬಾಸ್ ಕಾರ್ಯಕ್ರಮ 2 ಬಾರಿ ಪ್ರಸಾರವಾಗಿತ್ತು. ಅದಾದ ಬಳಿಕ, ಬಿಗ್ ಬಾಸ್ ಸೀಸನ್ 9 ಯಾವಾಗ ಶುರುವಾಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಗಸ್ಟ್ 6ರಂದು ಬಿಗ್ ಬಾಸ್ ಶೋ ಶುರುವಾಗಲಿದೆ.
ಆದರೆ ಈ ಬಾರಿ ಬಿಗ್ ಬಾಸ್ ಕನ್ನಡದಲ್ಲಿ ಹೊಸ ಪ್ರಯತ್ನ ಶುರುವಾಗುತ್ತಿದ್ದು, ಬಿಗ್ ಬಾಸ್ ಓಟಿಟಿ ಶೋ ಶುರುವಾಗಲಿದೆ. 6 ವಾರಗಳ ಕಾಲ ಈ ಶೋ ನಡೆಯುತ್ತದೆ, ಇದು ವೂಟ್ ಆಪ್ ನಲ್ಲಿ ವೀಕ್ಷಕರ ಬೆರಳ ತುದಿಯಲ್ಲಿ ಶೋ ನಡೆಯಲಿದೆ, ದಿನದ 24 ಗಂಟೆಗಳ ಕಾಲ ವೂಟ್ ನಲ್ಲಿ ಲೈವ್ ನೋಡಬಹುದು. ಇನ್ನು ಬಿಗ್ ಬಾಸ್ ಓಟಿಟಿ ಶೋ ಅನ್ನು ಸಹ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ, ಆಗಸ್ಟ್ 6ರಂದು ಅದ್ಧೂರಿಯಾಗಿ ಲಾಂಚ್ ಆಗಲಿದೆ. ಇನ್ನು ಬಿಗ್ ಬಾಸ್ ಓಟಿಟಿಗೆ ಯಾರೆಲ್ಲಾ ಸ್ಪರ್ಧಿಗಳು ಬರುತ್ತಾರೆ ಎನ್ನುವ ಗೆಸ್ಸಿಂಗ್ ಸಹ ಶುರುವಾಗಿದೆ.
ಇನ್ನು ಈ ಓಟಿಟಿ ಸೀಸನ್ ಗೆ, ಸೋಷಿಯಲ್ ಮೀಡಿಯಾ ಮತ್ತು ಯೂಟ್ಯೂಬ್ ನಲ್ಲಿ ಫೇಮಸ್ ಆಗಿರುವ ಸ್ಪರ್ಧಿಗಳು ಬರಲಿದ್ದು, ಇದರಲ್ಲಿ ಗೆದ್ದವರು ಟಿವಿ ಯಲ್ಲಿ ಪ್ರಸಾರವಾಗುವ ಸೀಸನ್ ಗೆ ಸೆಲೆಕ್ಟ್ ಆಗುತ್ತಾರೆ ಎನ್ನಲಾಗುತ್ತಿದೆ. ಇನ್ನು ಓಟಿಟಿ ಸೀಸನ್ ಗೆ ಬರುವ ಸ್ಪರ್ಧಿಗಳ ಲಿಸ್ಟ್ ನಲ್ಲಿ ಒಬ್ಬರ ಹೆಸರು ಲೀಕ್ ಆಗಿದ್ದು, ಅವರು ಮತ್ಯಾರು ಅಲ್ಲ, ಮಂಗಳಮುಖಿಯರ ಬಾಳಿಗೆ ಬೆಳಕಾಗಿರುವ ಮಂಜಮ್ಮ ಜೋಗತಿ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ. ಇದು ನಿಜವೇ ಎಂದು ತಿಳಿಯಲು ಇನ್ನು ಕೆಲವು ದಿನಗಳು ಕಾಯಬೇಕಿದೆ.
Comments are closed.