Neer Dose Karnataka
Take a fresh look at your lifestyle.

ಮುಂದಿನ ನಾಲ್ಕು ತಿಂಗಳು, ಈ ರಾಶಿಗಳು ಮುಟ್ಟಿದೆಲ್ಲಾ ಬಂಗಾರವಾಗುತ್ತದೆ, ಯಾವ್ಯಾವ ರಾಶಿಗಳಿಗೆ ಗೊತ್ತೇ??

87

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆಯು ಜನರ ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷಿಗಳು ಹೇಳುವಂತೆ ಗ್ರಹದ ಸ್ಥಾನವು ಅನುಕೂಲಕರವಾಗಿದ್ದಾಗ, ಮಾಡಿದ ಯಾವುದೇ ಕೆಲಸವು ಯಶಸ್ವಿಯಾಗುತ್ತದೆ, ಆದರೆ ಗ್ರಹದ ಸ್ಥಾನವು ನಕಾರಾತ್ಮಕವಾಗಿದ್ದಾಗ, ಎಲ್ಲಾ ತೊಂದರೆಗಳು ಅನಿವಾರ್ಯ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹದ ಚಲನೆ ಬಹಳ ಮುಖ್ಯ. ಗುರುಗ್ರಹವು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಸುಮಾರು 13 ತಿಂಗಳ ನಂತರ ಗುರು ಒಂದು ರಾಶಿಯಿಂದ ಇನ್ನೊಂದು ರಾಶಿ ಚಲಿಸಲಿದೆ. ಜುಲೈ 29 ರಂದು ಗುರು ಗ್ರಹವು ಮೀನ ರಾಶಿಯಲ್ಲಿ ಪ್ರವೇಶ ಮಾಡಲಿದ್ದಾನೆ. ಇದೇ ಸ್ಥಾನದಲ್ಲಿ 4 ತಿಂಗಳ ವರೆಗೆ ಇರಲಿದ್ದಾನೆ. ಈ ಪ್ರಭಾವದಿಂದ ಅಪರೂಪದ ಗುರು ಪುಷ್ಯಯೋಗ ಉಂಟಾಗಲಿದೆ. ಆ ಯೋಗದಿಂದ ಯಾವ ರಾಶಿಗಳಿಗೆ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಗುರುಪುಷ್ಯ ಯೋಗದಿಂದ ಲಾಭ ಪಡೆಯುವವರಲ್ಲಿ ಕರ್ಕಾಟಕ ರಾಶಿಯವರು ಇದ್ದಾರೆ. ಜುಲೈ 29ರಿಂದ ಅದ್ಬುತ, ಸಮಸ್ಯೆಗಳಿಂದ ಮುಕ್ತಿ, ಹೂಡಿಕೆಗೆ ಅನುಕೂಲಕರ ವಾತಾವರಣ, ವ್ಯಾಪಾರದಲ್ಲಿ ಲಾಭ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ ಎನ್ನುತ್ತಾರೆ ಪಂಡಿತರು.

ಮೀನ ರಾಶಿ :- ಜುಲೈ 29 ರ ನಂತರ ಗುರುಪುಷ್ಯ ಯೋಗದಿಂದ ಉತ್ತಮ ಫಲಿತಾಂಶಗಳನ್ನು ಕಾಣುವ ಇನ್ನೊಂದು ರಾಶಿ ಮೀನ. ಈ ನಾಲ್ಕು ತಿಂಗಳಲ್ಲಿ ಮೀನ ರಾಶಿಯವರು ತಮ್ಮ ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಆದಾಯವನ್ನು ಹೆಚ್ಚಿಸುತ್ತಾರೆ, ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ ಮತ್ತು ಕೆಲಸದಲ್ಲಿ ಯಶಸ್ಸು ಸಾಧ್ಯ ಎಂದು ಪಂಡಿತರು ಹೇಳುತ್ತಾರೆ.

Leave A Reply

Your email address will not be published.