ಯಾವುದೇ ಬಾಲಿವುಡ್ ನಟಿಯರಿಗಿಂತಲೂ ಕಡಿಮೆ ಇಲ್ಲದ, ಭಾರತೀಯ ಕ್ರಿಕೆಟ್ ಆಟಗಾರ್ತಿಯರು ಯಾರ್ಯಾರು ಗೊತ್ತೇ??
ಸಿನಿಮಾ ನಟಿಯರಿಗೆ ಯಾವಾಗಲೂ ಬೇಡಿಕೆ ಹೆಚ್ಚು, ಸಿನಿಮಾ ನಟಿಯರು ಎಂದರೆ ನೋಡಲು ಬಹಳ ಸುಂದರವಾಗಿರುತ್ತಾರೆ, ಗ್ಲಾಮರಸ್ ಆಗಿರುತ್ತಾರೆ, ಸುಂದರವಾಗಿರುತ್ತಾರೆ ಎಂದು ಅವರಿಗೆ ಅಭಿಮಾನಿಗಳ ಸಂಖ್ಯೆ ದೊಡ್ಡದಾಗಿಯೇ ಇರುತ್ತದೆ. ಆದರೆ ಈಗ ಕಾಲ ಬದಲಾಗಿದ್ದು, ಸಿನಿಮಾ ನಟಿಯರು ಮಾತ್ರವಲ್ಲದೆ ಮಹಿಳಾ ಕ್ರಿಕೆಟಿಗರು ಸಹ ನೋಡಲು ಯಾವುದೇ ಬಾಲಿವುಡ್ ನಟಿಯರಿಗೆ ಕಡಿಮೆ ಇಲ್ಲ ಎನ್ನುವ ಹಾಗೆ ಸುಂದರವಾಗಿದ್ದು, ಆ ಮಹಿಳಾ ಕ್ರಿಕೆಟಿಗರು ಯಾರು ಎಂದು ತಿಳಿಸುತ್ತೇಕೆ ನೋಡಿ..
ಸ್ಮೃತಿ ಮಂದಣ್ಣ :- ಮಹಿಳಾ ಕ್ರಿಕೆಟ್ ಬಳಗದಲ್ಲಿ ಅದ್ಭುತವಾಗಿ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಸ್ಮೃತಿ ಮೂಲತಃ ಕರ್ನಾಟಕದವರು ಎನ್ನುವುದು ಸಂತೋಷದ ವಿಚಾರ. ಇವರು ಕ್ರಿಕೆಟ್ ವಿಚಾರದಿಂದ ಮಾತ್ರವಲ್ಲದೆ, ತಮ್ಮ ಲುಕ್ಸ್ ವಿಚಾರದಿಂದಲೂ ಬಹಳ ಸುದ್ದಿಯಲ್ಲಿರುತ್ತಾರೆ, ಆಗಾಗ ಫೋಟೋಶೂಟ್ ಗಳು ಮತ್ತು ಹೊಸ ಲುಕ್ ಗಳಿಂದ ಅಭಿಮಾನಿಗಳ ಗಮನ ಸೆಳೆಯುತ್ತಾರೆ ಸ್ಮೃತಿ ಮಂದಣ್ಣ.
ಹರ್ಲಿನ್ ಡಿಯೊಲ್ :- ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿಯರಲ್ಲಿ ಇವರು ಸಹ ಒಬ್ಬರು. ಇವರು ಬ್ಯಾಟ್ ಮಾಡುವ ಶೈಲಿಯ ಬಗ್ಗೆ ಅಭಿಮಾನಿಗಳಿಗೆ ಬಹಳ ಗೌರವ ಇದೆ. ಯಾವುದೇ ಹೀರೋಯಿನ್ ಗು ಕಡಿಮೆ ಇಲ್ಲ ಎನ್ನುವ ಹಾಗಿರುವ ಹರ್ಲಿನ್, ತಮ್ಮ ಲುಕ್ಸ್ ಇಂದ ಆಗಾಗ ಸುದ್ದಿಯಲ್ಲಿರುತ್ತಾರೆ.
ರಾಧಾ ಯಾದವ್ :- ಇವರು ಉತ್ತರ ಪ್ರದೇಶದ, ಜೌನ್ ಪುರ ಜಿಲ್ಲೆಯ ಅಜೋಷಿ ಗ್ರಾಮದಲ್ಲಿ ಜನಿಸಿದ ಹುಡುಗಿ, ಕ್ರಿಕೆಟ್ ಆಡಲು ಪ್ರಾರಂಭಿಸಿ, ಭಾರತ ತಂಡಕ್ಕೆ ಒಳ್ಳೆಯ ಪ್ಲೇಯರ್ ಆಗಿದ್ದಾರೆ. ಇವರಿಗೆ ದೊಡ್ಡ ಅಭಿಮಾನಿ ಬಳಗ ಸಹ ಇದೆ. ನೋಡಲು ಬಹಳ ಸುಂದರವಾಗಿದ್ದಾರೆ ರಾಧಾ ಯಾದವ್.
ಹರ್ಮನ್ ಪ್ರೀತ್ ಕೌರ್ :- ಇವರು ಭಾರತ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದು, ಹರ್ಮನ್ ಅವರು ಕ್ರೀಸ್ ನಲ್ಲಿದ್ದರೆ ಭಾರತ ತಂಡ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆ ಇರುತ್ತದೆ. ಇವರು ಯಾವುದೇ ಮಾಡೆಲ್ ಗೆ ಕಡಿಮೆ ಇಲ್ಲ ಎನ್ನುವ ಹಾಗೆ ಸುಂದರವಾಗಿ ಕಾಣಿಸುತ್ತಾರೆ. ಇವರು ಬಹಳ ಸ್ಟೈಲಿಶ್ ಆಗಿದ್ದಾರೆ.
ತಾನಿಯಾ ಭಾಟಿಯಾ :- ಇವರು ಭಾರತ ಮಹಿಳಾ ಕ್ರಿಕೆಟ್ ತಂಡದ ಬಲಶಾಲಿ ಬ್ಯಾಟರ್ ಗಳಲ್ಲಿ ಒಬ್ಬರು, ತಾನಿಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು, ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ, ಅವುಗಳು ಅಭಿಮಾನಿಗಳಿಗೆ ಬಹಳ ಇಷ್ಟವಾಗುತ್ತದೆ.
Comments are closed.