ಹಾಲು ಜೇನಿನಂತೆ ಇರುವ ಹರ್ಷ ಹಾಗೂ ಭುವಿ ನಡುವೆ ಹುಳಿ ಹಿಂಡಲು ನಡೆಯುತ್ತಿದೆ ಮಹಾ ಸ್ಕೆಚ್: ನಿಜಕ್ಕೂ ಬೇರ್ಪಡೆ ಆಗುತ್ತಾರಾ ಹರ್ಷ-ಭುವಿ? ಕನ್ನಡತಿಯಲ್ಲಿ ಏನಾಗಿದೆ ಗೊತ್ತೇ??
ಮನೆಯಲ್ಲರುವ ವೀಕ್ಷಕರಿಗೆ ಅಥವಾ ಕೆಲಸ ಮುಗಿಸಿ ಸಂಜೆ ಮನೆಗೆ ಬರುವ ಜನರಿಗೆ ಮನರಂಜನೆ ಕೊಡುವುದು ಕನ್ನಡ ಕಿರುತೆರೆಯ ಧಾರವಾಹಿಗಳು, ಸೋಮವಾರದಿಂದ ಶುಕ್ರವಾರದವರೆಗೂ ಸಂಜೆ 5:30 ಗೆ ಶುರುವಾದರೆ 11 ಗಂಟೆ ವರೆಗೂ ಎಲ್ಲಾ ವಾಹಿನಿಗಳಲ್ಲೂ ಧಾರವಾಹಿಗಳದ್ದೇ ಮೇಲುಗೈ. ಆದರೆ ಕೆಲವು ಧಾರವಾಹಿಗಳು ಮಾತ್ರ ಜನರಿಗೆ ಬಹಳ ಇಷ್ಟವಾಗುತ್ತದೆ. ಅವುಗಳಲ್ಲಿ ಒಂದು ಕಲರ್ಸ್ ಕನ್ನಡ ವಾಹಿನಿಯ ಕನ್ನಡತಿ ಧಾರವಾಹಿ. ಜನರಿಗೆ ಇಷ್ಟವಾಗುವಂತಹ ಕಥೆ ಹಾಗೂ ಅದ್ಭುತವಾದ ಕನ್ನಡ ಸಂಭಾಷಣೆಯಿಂದ ಈ ಧಾರವಾಹಿ ಎಲ್ಲರಿಗೂ ಬಹಳ ಇಷ್ಟವಾಗಿದೆ ಎಂದರೆ ತಪ್ಪಾಗುವುದಿಲ್ಲ.
ಅದರಲ್ಲೂ ಹರ್ಷ ಭುವಿ ಎಂದರೆ ಎಲ್ಲರಿಗು ಬಹಳ ಪ್ರೀತಿ. ಹರ್ಷ ಭುವಿ ಜೊತೆಗಿರುವ ಸನ್ನಿವೇಶಗಳನ್ನು ನೋಡಲು ಜನರು ಬಹಳ ಇಷ್ಟಪಡುತ್ತಾರೆ. ಹರ್ಷ ಭುವಿ ಬೇಗ ಒಂದಾಗಲಿ ಅವರಿಬ್ಬರ ಮದುವೆ ಬೇಗ ನಡೆಯಲಿ ಎಂದು ಅಭಿಮಾನಿಗಳು ಬಯಸಿದ್ದರು, ಅದೇ ರೀತಿ ಇತ್ತೀಚೆಗೆ ಧಾರವಾಹಿಯಲ್ಲಿ ಹರ್ಷ ಮತ್ತು ಭುವಿಯ ಮದುವೆ ನಡೆಯಿತು. ಅಮ್ಮಮ್ಮ ಭುವಿ ತನ್ನ ಸೊಸೆ ಎಂದು ಬಹಳ ಸಂತೋಷದಿಂದ ಮದುವೆ ನಡೆಸಿ, ಮನೆಯ ಜವಾಬ್ದಾರಿ ಕೊಟ್ಟಿದ್ದಾರೆ, ಈಗಾಗಲೇ ಇಡೀ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿದ್ದಾರೆ. ಹರ್ಷ ಭುವಿ ಇಬ್ಬರು ಸಂತೋಷವಾಗಿರುತ್ತಾರೆ, ಎನ್ನುವಷ್ಟರಲ್ಲಿ ಇಬ್ಬರನ್ನು ದೂರ ಮಾಡಲು ಕುತಂತ್ರ ನಡೆಯುತ್ತಿದೆ.
ಸಾನಿಯಾ ಮತ್ತು ವರುಧಿನಿಗೆ ಹರ್ಷ ಭುವಿ ಮದುವೆ ಆಗಿರುವುದು ಇಷ್ಟವಿಲ್ಲ. ಸಾನಿಯಾಗೆ ರತ್ನಮಾಲಾ ಅವರ ಆಸ್ತಿ ಮೇಲೆ ಕಣ್ಣು, ಈಗ ಕಂಪನಿ ಎಂಡಿ ಆಗಿರುವ ಸಾನಿಯಾ ಗೆ ತನ್ನ ಸ್ಥಾನ ಎಲ್ಲಿ ಕೈತಪ್ಪಿ ಹೋಗುತ್ತೋ ಎನ್ನುವ ಭಯ ಶುರುವಾಗಿ, ಅದರಿಂದ ಹೊರಬರಲು ಹರ್ಷ ಭುವಿಯನ್ನು ಬೇರೆ ಮಾಡಬೇಕು ಎಂದು ಹೊಸ ಹೊಸ ಕುತಂತ್ರಗಳನ್ನು ಪ್ಲಾನ್ ಮಾಡುತ್ತಿದ್ದಾಳೆ. ಆಫೀಸ್ ವಿಚಾರದಲ್ಲಿ ಹರ್ಷ ಭುವಿ ನಡುವೆ ತೊಂದರೆ ಉಂಟುಮಾಡುವ ಪ್ರಯತ್ನ ಮಾಡುತ್ತಿದ್ದಾಳೆ.
ಅದೇ ರೀತಿ ಈ ಪ್ಲಾನ್ ಗಳ ಆರಂಭದಲ್ಲಿ ಹರ್ಷ ಮತ್ತು ಭುವಿ ಸಂಬಂಧದಲ್ಲಿ ಬಿರುಕು ಮೂಡುವ ಹಾಗೆ ಆಗಿದ್ದೇನೋ ನಿಜ. ಆದರೆ ಇದೆಲ್ಲವೂ ಸಾನಿಯಾ ಕುತಂತ್ರ ಎಂದು ಅರಿತ ಹರ್ಷ, ತಮ್ಮ ಮಧ್ಯೆ ಬರಲು ಪ್ರಯತ್ನಪಟ್ಟರೆ, ಚೆನ್ನಾಗಿರುವುದಿಲ್ಲ ಎಂದು ಸಾನಿಯಾಗೆ ವಾರ್ನ್ ಮಾಡಿದ್ದಾನೆ. ಇದರಿಂದ ಕೋಪಗೊಂಡ ಸಾನಿಯಾ, ಮನೆಯವರ ಮೇಲೆ ಕೋಪ ತೋರಿಸಿಕೊಳ್ಳಲು ಸಿದ್ಧವಾಗಿದ್ದಾಳೆ. ಇತ್ತ ಭುವಿಯ ಬೆಸ್ಟ್ ಫ್ರೆಂಡ್ ವರುಧಿನಿ, ಹರ್ಷನನ್ನು ಪ್ರೀತಿಸುತ್ತಿದ್ದಳು, ಅವನನ್ನೇ ಮದುವೆ ಆಗಲು ಬಯಸಿದ್ದಳು.
ಆದರೆ ಹರ್ಷ ಭುವಿಯನ್ನು ಪ್ರೀತಿಸಿ ಮದುವೆಯಾದ ಕಾರಣ, ವರುಧಿನಿಗೆ ಅದನ್ನು ಸಹಿಸಲು ಆಗುತ್ತಿಲ್ಲ, ಮದುವೆಯಾಗಿದ್ದರು ಇಬ್ಬರನ್ನು ಬೇರೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದಾಳೆ. ಒಂದು ಸಾರಿ ಹರ್ಷ ಭುವಿ ಊಟಕ್ಕೆ ಹೋಗುವಾಗ, ತಾನು ಬಾಲ್ಕನಿಯಲ್ಲಿ ಸಿಕ್ಕಿಹಾಕಿ ಕೊಂಡಿರುವುದಾಗಿ ಸುಳ್ಳು ಹೇಳಿ ಭುವಿಯನ್ನು ಮನೆಗೆ ಕರೆಸಿಕೊಂಡಿದ್ದಳು ವರು, ಆದರೆ ಅದೆಲ್ಲವು ಸುಳ್ಳಾಗಿತ್ತು, ಕೊನೆಗೆ ಇದು ವರುಧಿನಿ ಕುತಂತ್ರ ಎಂದು ಹರ್ಷನಿಗೆ ಅರ್ಥವಾಯಿತು.
ಈ ವಿಷಯದಲ್ಲಿ ಹರ್ಷ ವರುಗೆ ವಾರ್ನಿಂಗ್ ಕೊಟ್ಟಿದ್ದಾನೆ, ತನ್ನ ಭುವಿ ನಡುವೆ ಬಂದರೆ ಏನು ಮಾಡುತ್ತೇನೋ ಗೊತ್ತಿಲ್ಲ ಎಂದು ಹೇಳಿದ್ದಾನೆ ಹರ್ಷ. ಇವರೆಲ್ಲ ಇಷ್ಟೆಲ್ಲಾ ಮಾಡುತ್ತಿದ್ದರು ಕೂಡ, ಹರ್ಷ ಭುವಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಚೆನ್ನಾಗಿರಲು ಕಾರಣ, ಇಬ್ಬರಿಗೂ ಒಬ್ಬರ ಮೇಲೆ ಮತ್ತೊಬ್ಬರಿಗೆ ಇರುವ ನಂಬಿಕೆ ಮತ್ತು ಪ್ರೀತಿ. ಮುಂದಿನ ಸಂಚಿಕೆಗಳಲ್ಲಿ ಇದೆಲ್ಲವೂ ಹೇಗೆ ನಡೆಯುತ್ತದೆ ಎಂದು ತಿಳಿಯಲು ಅಭಿಮಾನಿಗಳು ಕಾತುರರಾಗಿದ್ದಾರೆ.
Comments are closed.