ಆ ಟಾಪ್ ನಟ ನನ್ನ ಜೊತೆ ರೋಮ್ಯಾನ್ಸ್ ಮಾಡುವ ವರೆಗೂ ಮಾಡಿ, ಕೊನೆಯಲ್ಲಿ ಅಕ್ಕ ಎಂದು ಬಿಟ್ಟ: ತೆಲುಗಿನ ನಟಿ ಸದಾ ಷಾಕಿಂಗ್ ಹೇಳಿಕೆ. ಆ ಟಾಪ್ ನಟ ಯಾರು ಗೊತ್ತೇ??
ಕೆಲವು ವರ್ಷಗಳ ಹಿಂದೆ ನಟಿ ಸದಾ ಅಂದ್ರೆ ಎಲ್ಲರಿಗೂ ಹುಚ್ಚು, ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿ ಯುವಜನತೆಯಲ್ಲಿ ಹಾಗೂ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಸದಾ ಅವರು ಜಯಂ ಸಿನಿಮಾ ಮೂಲಕ ಹುಡುಗರ ಕನಸಿನ ರಾಣಿಯಾದರು. ಆಗ ಸದಾ ಅವರ ಹೆಸರು ಯುವಕರ ಬಳಗದಲ್ಲಿ ಅಚ್ಚುಮೆಚ್ಚಿನ ಹೆಸರಾಗಿತ್ತು. ಯಾವ ಹುಡುಗರಾದರು ಒಂದು ಹುಡುಗಿಯನ್ನು ಪ್ರೀತಿಸಿದರೆ, ಆಕೆಯನ್ನು ಸದಾ ಎಂದು ಕರೆಯಲಾಗುತ್ತಿತ್ತು.
ಈಕೆಯ ಸೌಂದರ್ಯಕ್ಕೆ ಮಾರುಹೋಗಿ ಹುಡುಗರು, ಹೀರೋಗಳು ಕೂಡ ಪ್ರೀತಿಯಲ್ಲಿ ಬೀಳುತ್ತಿದ್ದರು. ಜಯಂ, ಔನನ್ನ ಕಾಡನಣ್ಣ, ಅಪರಿಚಿತುಡು ಮುಂತಾದ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಸದಾ. ಆದರೆ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಅಪರಿಚಿತುಡು ಚಿತ್ರದಲ್ಲಿ ನಟಿಸುವಾಗ ಕೆಲವು ತಮಾಷೆಯ ದೃಶ್ಯಗಳು ನಡೆದವು ಎಂದು ನಟಿ ಸದಾ ಹೇಳಿದ್ದಾರೆ. ನಿರ್ದೇಶಕ ಶಂಕರ್ ಅವರ ಸಿನಿಮಾದಲ್ಲಿ ನಟಿಸುವ ಚಾನ್ಸ್ ಎಂದರೆ ಎರಡು ಮಾತಿಲ್ಲ. ಸದಾ ಅವರಿಗೆ ಆ ಅವಕಾಶ ಸಿಕ್ಕಿತು. ವಿಕ್ರಮ್ ನಾಯಕನಾಗಿ ನಟಿಸಿದ್ದ ಅಪರಿಚಿತುಡು ಸಿನಿಮಾ ಅಂದು ಸಂಚಲನ ಮೂಡಿಸಿತ್ತು.
ದಕ್ಷಿಣ ಭಾರತದಲ್ಲಿ ಎಲ್ಲ ದಾಖಲೆಗಳು ಮುರಿಯಲ್ಪಟ್ಟವು. ಈ ಸಿನಿಮಾದ ಶೂಟಿಂಗ್ ನಲ್ಲಿ ಸದಾ ಮತ್ತು ವಿಕ್ರಮ್ ಕೆಮಿಸ್ಟ್ರಿ ಚೆನ್ನಾಗಿತ್ತು. ಇಬ್ಬರ ನಡುವಿನ ರೊಮ್ಯಾನ್ಸ್ ತೆರೆಯ ಮೇಲೆ ಕಾಣಿಸುತ್ತಿತ್ತು. ಆದರೆ ವಿಕ್ರಮ್ ಸೆಟ್ ನಲ್ಲಿ ಅವರೊಂದಿಗೆ ರೋಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದ ನಂತರ ಸದಾ ಅವರನ್ನು ಸಹೋದರಿ ಎಂದು ಕರೆಯುತ್ತಿದ್ದರಂತೆ. ಆ ರೀತಿ ಆದಾಗ ಅಲ್ಲಿದ್ದವರೆಲ್ಲರಿಂದ ಹುಚ್ಚು ನಗು ಕೇಳಿ ಬಂದಿತ್ತು ಎಂದು ಸದಾ ಹೇಳಿದ್ದಾರೆ. ಚಿತ್ರೀಕರಣ ಶುರುವಾದಾಗ ತಮಗೆ ಕರೆ ಮಾಡಿ ನಟ ವಿಕ್ರಮ್ ತಮಾಷೆ ಮಾಡುತ್ತಿದ್ದರು, ಇಡೀ ಸಿನಿಮಾ ಇದೇ ರೀತಿ ಮುಗಿಯಿತು ಎಂದು ಹೇಳಿದ್ದಾರೆ ನಟಿ ಸದಾ.
Comments are closed.