ಬಿಗ್ ಬಾಸ್ ನಲ್ಲಿ ಈ ಬಾರಿ ಧಾರವಾಹಿ ನಟಿಯ ಕೋಟಾದಲ್ಲಿ ಕಾಣಿಸಿಕೊಳ್ಳುವವರು ಯಾರು ಗೊತ್ತೇ?? ಎರಡನೇ ಸ್ಪರ್ದಿ ಯಾರು ಗೊತ್ತೇ??
ಬಿಗ್ ಬಾಸ್ ಕಾರ್ಯಕ್ರಮ ಎಂದರೆ ಎಲ್ಲರಿಗೂ ವಿಶೇಷ ಕುತೂಹಲ ಇದ್ದೇ ಇರುತ್ತದೆ. ಪ್ರತಿ ಸೀಸನ್ ಮುಗಿದಮೇಲು ಹೊಸ ಸೀಸನ್ ಶುರುವಾಗೋದು ಯಾವಾಗ, ಹೇಗಿರುತ್ತದೆ, ಮನೆಯೊಳಗೆ ಬರುವ ಸ್ಪರ್ಧಿಗಳು, ಬಿಗ್ ಬಾಸ್ ಕೊಡುವ ಟಾಸ್ಕ್ ಹೇಗಿರುತ್ತದೆ ಎನ್ನುವ ಕುತೂಹಲ ಶುರುವಾಗುತ್ತದೆ. ಕಳೆದ ವರ್ಷ ಕೋವಿಡ್ ಇಂದ, ಬಿಗ್ ಬಾಸ್ ಕಾರ್ಯಕ್ರಮ 2 ಬಾರಿ ಪ್ರಸಾರವಾಗಿತ್ತು. ಅದಾದ ಬಳಿಕ, ಬಿಗ್ ಬಾಸ್ ಸೀಸನ್ 9 ಯಾವಾಗ ಶುರುವಾಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಗಸ್ಟ್ 6ರಂದು ಬಿಗ್ ಬಾಸ್ ಶೋ ಶುರುವಾಗಲಿದೆ.
ಆದರೆ ಈ ಬಾರಿ ಬಿಗ್ ಬಾಸ್ ಕನ್ನಡದಲ್ಲಿ ಹೊಸ ಪ್ರಯತ್ನ ಶುರುವಾಗುತ್ತಿದ್ದು, ಬಿಗ್ ಬಾಸ್ ಓಟಿಟಿ ಶೋ ಶುರುವಾಗಲಿದೆ. 6 ವಾರಗಳ ಕಾಲ ಈ ಶೋ ನಡೆಯುತ್ತದೆ, ಆರು ವಾರಗಳ ಕಾಲ ಈ ಶೋ ನಡೆಯಲಿದ್ದು, ಆಗಸ್ಟ್ 6ರಂದು ಅದ್ಧೂರಿಯಾಗಿ ಲಾಂಚ್ ಆಗಲಿದೆ. ಇನ್ನು ಬಿಗ್ ಬಾಸ್ ಓಟಿಟಿಗೆ ಯಾರೆಲ್ಲಾ ಸ್ಪರ್ಧಿಗಳು ಬರುತ್ತಾರೆ ಎನ್ನುವ ಗೆಸ್ಸಿಂಗ್ ಸಹ ಶುರುವಾಗಿದೆ. ಈ ಓಟಿಟಿ ಸೀಸನ್ ಗೆ, ಸೋಷಿಯಲ್ ಮೀಡಿಯಾ ಮತ್ತು ಯೂಟ್ಯೂಬ್ ನಲ್ಲಿ ಫೇಮಸ್ ಆಗಿರುವ ಸ್ಪರ್ಧಿಗಳು ಬರುತ್ತಾರೆ ಎನ್ನಲಾಗಿದ್ದು, ಇದೀಗ ಬಿಗ್ ಬಾಸ್ ಓಟಿಟಿ ಶೋಗೆ ಎಂಟ್ರಿ ಕೊಡಲಿರುವ ಎರಡನೇ ಸ್ಪರ್ಧಿಯ ಹೆಸರು ಲೀಕ್ ಆಗಿದೆ. ಆ ಸ್ಪರ್ಧಿ ಮತ್ಯಾರು ಅಲ್ಲ, ಖ್ಯಾತ ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣ.
ಕನ್ನಡ ಕಿರುತೆರೆಗೆ ಸೀತಾ ವಲ್ಲಭ ಧಾರವಾಹಿ ಮೂಲಕ ಎಂಟ್ರಿ ಕೊಟ್ಟ ಈ ನಟಿ, ಮೊದಲ ಧಾರವಾಹಿಯಿಂದಲೇ ಅಪಾರವಾದ ಅಭಿಮಾನಿ ಬಳಗ ಗಳಿಸಿದ್ದರು. ಕನ್ನಡದಲ್ಲಿ ಸರಸು ಎನ್ನುವ ಧಾರವಾಹಿಯಲ್ಲಿ ಸಹ ನಟಿಸಿದ್ದರು. ಕನ್ನಡ ಮಾತ್ರವಲ್ಲದೆ, ತೆಲುಗು ಧಾರವಾಹಿಯಲ್ಲಿ ಸಹ ನಟಿಸಿದ್ದ ಸುಪ್ರೀತಾ ಸತ್ಯನಾರಾಯಣ ಅವರು, ಸಾವಿತ್ರಿ ಗಾರಿ ಅಬ್ಬಾಯಿ ಎನ್ನುವ ತೆಲುಗು ಧಾರವಾಹಿ ಮೂಲಕ ತೆಲುಗು ಕಿರುತೆರೆ ವೀಕ್ಷಕರಿಗೂ ಪರಿಚಯವಿದ್ದಾರೆ. ಮೂಲತಃ ಮೈಸೂರಿನವರಾದ ಸುಪ್ರೀತಾ ಅವರಿಗೆ ನಟನೆಯಲ್ಲಿ ಬಹಳ ಆಸಕ್ತಿ. ಒಳ್ಳೆಯ ಪಾತ್ರಗಳಲ್ಲಿ ನಟಿಸಬೇಕು ಎನ್ನುವ ಕನಸನ್ನು ಹೊಂದಿದ್ದಾರೆ. ಇದೀಗ ಈ ನಟಿ ಬಿಗ್ ಬಾಸ್ ಓಟಿಟಿಗೆ ಬರಲು ರೆಡಿ ಆಗಿದ್ದಾರೆ.
Comments are closed.