ಇಂದು ಚಂದನ್ ಬಿಡಿ, ಅಂದು ಕವಿತಾ ಗೌಡ ರವರು ತೆಲುಗು ಧಾರಾವಾಹಿಯನ್ನು ಬಿಟ್ಟು ಬಂದಿದ್ದು ಯಾಕೆ ಗೊತ್ತೇ?? ತೆರೆ ಹಿಂದೆ ಏನಾಗಿತ್ತು ಗೊತ್ತೇ??
ಕನ್ನಡ ಕಿರುತೆರೆಯಲ್ಲಿ ಬಹಳ ಪಾಪ್ಯುಲರ್ ಆಗಿರುವ ಜೋಡಿಗಳಲ್ಲಿ ಒಂದು ಚಂದನ್ ಗೌಡ ಮತ್ತು ಕವಿತಾ ಗೌಡ. ಇವರಿಬ್ಬರು ಸಹ ಕನ್ನಡದ ಲಕ್ಷ್ಮೀ ಬಾರಮ್ಮ ಧಾರವಾಹಿಯಿಂದ ಫೇಮಸ್ ಆದರು. ಲಕ್ಷ್ಮೀಬಾರಮ್ಮ ಇವರಿಬ್ಬರಿಗೆ ಜನಪ್ರಿಯತೆ ತಂದು ಕೊಟ್ಟಿದ್ದರ ಜೊತೆಗೆ, ವೈಯಕ್ತಿಕವಾಗು ಹತ್ತಿರ ಆಗುವ ಹಾಗೆ ಮಾಡಿತು. ಬಳಿಕ ಇವರಿಬ್ಬರು ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯ ಧಾರವಾಹಿಯಲ್ಲಿ ಸಹ ನಟಿಸಿದರು. ಆದರೆ ಇತ್ತೀಚೆಗೆ ಚಂದನ್ ಅವರ ಮೇಲೆ ತೆಲುಗು ಧಾರವಾಹಿ ತಂಡದಿಂದ ಹಲ್ಲೆ ಆಗಿದೆ. ಚಂದನ್ ಅವರು ಧಾರವಾಹಿ ಇಂದ ಹೊರಬಂದಿದ್ದಾರೆ. ಆಗಸ್ಟ್ 1ರಂದು ಪತ್ರಿಕಾಗೋಷ್ಠಿ ನಡೆಸಿ, ಹಲವು ವಿಚಾರಗಳನ್ನು ಹಂಚಿಕೊಂಡರು ಚಂದನ್.
ಚಂದನ್ ಅವರು ಹೇಳಿದ ಪ್ರಕಾರ, ತೆಲುಗು ಕಿರುತೆರೆಯಲ್ಲಿ ಕನ್ನಡಿಗರನ್ನು ಸಹಿಸಿಕೊಳ್ಳುತ್ತಿಲ್ಲ, ಜೊತೆಗೆ ತಮ್ಮ ಮೇಲೆ ಹಲ್ಲೆ ಆಗಿದ್ದು, ಉದ್ದೇಶಪೂರ್ವಕವಾಗಿ ನಡೆದ ಘಟನೆ ಎಂದು ಚಂದನ್ ಹೇಳಿದರು. ಇನ್ನು ಚಂದನ್ ಅವರ ಪತ್ನಿ ಕವಿತಾ ಗೌಡ ಅವರು ಸಹ ತೆಲುಗು ಧಾರವಾಹಿಯಲ್ಲಿ ನಟಿಸುತ್ತಿದ್ದರು, ಆದರೆ ಅವರು ನಟಿಸಿದ್ದು ಒಂದೇ ಒಂದು ತೆಲುಗು ಧಾರವಾಹಿಯಲ್ಲಿ, ಅದಾದ ಬಳಿಕ ಕವಿತಾ ಇನ್ಯಾವ ತೆಲುಗು ಧಾರವಾಹಿಯಲ್ಲಿ ಕೂಡ ನಟಿಸಿಲ್ಲ, ಅದಕ್ಕೆ ಕಾರಣ ಏನು ಎಂದು ಸ್ವತಃ ಕವಿತಾ ಗೌಡ ಅವರು ರಿವೀಲ್ ಮಾಡಿದ್ದಾರೆ. ಕವಿತಾ ಅವರು ಹೇಳಿದ ಹಾಗೆ ಅಸಲಿ ಕಾರಣ ಏನು ಎಂದು ತಿಳಿಸುತ್ತೇವೆ ನೋಡಿ..

ಮೊದಲಿಗೆ ಪತಿ ಚಂದನ್ ಮೇಲೆ ಆಗಿರುವ ಹಲ್ಲೆಯ ಬಗ್ಗೆ ಮಾತನಾಡಿರುವ ಕವಿತಾ ಗೌಡ, “ಈ ರೀತಿ ಆಗಿರುವ ವಿಚಾರವನ್ನು ಮೊದಲಿಗೆ ಚಂದನ್ ನನ್ನ ಜೊತೆ ಹೇಳಿರಲಿಲ್ಲ. ಬೇರೆಯವರ ಮೂಲಕ ಗೊತ್ತಾಯಿತು. ಈ ವಿಷಯದ ಬಗ್ಗೆ ನಾನು ಸುಮ್ಮನೆ ಇರುವುದಿಲ್ಲ. ಎಲ್ಲಾ ವಿಷಯವು ಮಾತಿನಲ್ಲೇ ಇರಬೇಕು, ಹಲ್ಲೆ ಮಾಡಿದ್ದು ಹೇಗೆ? ಆ ಮೂರು ಜನರು ಕ್ಷಮೆ ಕೇಳಲೇಬೇಕು, ಅಲ್ಲಿದ್ದ ನಮ್ಮವರು ನಮಗೆ ಸಪೋರ್ಟ್ ಮಾಡಲಿಲ್ಲ ಎಂದು ಬೇಸರ ಇದೆ..” ಎಂದಿದ್ದಾರೆ ಕವಿತಾ. ಅಷ್ಟೇ ಅಲ್ಲದೆ, ತಾವು ತೆಲುಗು ಕಿರುತೆರೆಯಿಂದ ಹೊರಬಂದಿದ್ದು ಯಾಕೆ ಎಂದು ಸಹ ತಿಳಿಸಿದ್ದಾರೆ, “ತೆಲುಗು ಕಿರುತೆರೆಯಲ್ಲಿ ಕೆಲಸ ಮಾಡಲು ನನಗೆ ಕಂಫರ್ಟಬಲ್ ಎಂದು ಅನ್ನಿಸಲಿಲ್ಲ. ಹಾಗಾಗಿ ನಾನು ಅಲ್ಲಿ ಕೆಲಸ ಮುಂದುವರೆಸಲಿಲ್ಲ..” ಎಂದು ಕವಿತಾ ಹೇಳಿದ್ದಾರೆ.