Neer Dose Karnataka
Take a fresh look at your lifestyle.

ಭರ್ಜರಿ ಸಿಹಿ ಸುದ್ದಿ ಪಡೆದುಕೊಂಡ ನಿವೇದಿತಾ ಗೌಡ: ಅದೃಷ್ಟದ ಜೊತೆ ನಿಜವಾದ ಟ್ಯಾಲೆಂಟ್ ಇದ್ರೆ ಏನು ಮಾಡಬಹುದು ಗೊತ್ತೇ?? ನಿವೇದಿತಾನೆ ಸಾಕ್ಷಿ ಎಂದ ನೆಟ್ಟಿಗರು.

ಬಿಗ್ ಬಾಸ್ ಕನ್ನಡ ಸೀಸನ್ 5 ನಲ್ಲಿ ಕಾಮನ್ ಮ್ಯಾನ್ ಆಗಿ ಬಿಗ್ ಮನೆಗೆ ಎಂಟ್ರಿ ಕೊಟ್ಟವರು ನಿವೇದಿತಾ ಗೌಡ. ಬಿಗ್ ಬಾಸ್ ಮನೆಗೆ ಬರುವ ಸಮಯದಲ್ಲೇ ಇವರು ಟಿಕ್ ಟಾಕ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿದ್ದರು. ಬಿಗ್ ಬಾಸ್ ಮನೆಗೆ ಕಾಲಿಟ್ಟ ನಂತರ ಮುಗ್ಧತೆಯಿಂದ ಮತ್ತು ತಮ್ಮದೇ ಆದ ರೀತಿಯಲ್ಲಿ ಮನರಂಜನೆ ನೀಡಿ ಫೈನಲ್ಸ್ ವರೆಗೂ ತಲುಪಿದ್ದರು ನಿವೇದಿತಾ ಗೌಡ. ಬಿಗ್ ಬಾಸ್ ಕಾರ್ಯಕ್ರಮ ಮುಗಿದ ನಂತರ ಕೂಡ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿಯೇ ಇದ್ದಾರೆ. ಕೆಲವು ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು ನಿವೇದಿತಾ.

ಸೋಷಿಯಲ್ ಮೀಡಿಯಾದಲ್ಲಿ ಇವರು ಪೋಸ್ಟ್ ಮಾಡುವ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುವುದರ ಜೊತೆಗೆ ಕೆಲವೊಮ್ಮೆ ಟ್ರೋಲ್ ಕೂಡ ಆಗುತ್ತವೆ. ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ನಡುವೆ ಪ್ರೀತಿ ಹುಟ್ಟಿ, ಇಬ್ಬರು ಮದುವೆಯಾಗಿ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಮದುವೆಯಾದ ನಂತರ ಚಂದನ್ ಶೆಟ್ಟಿ ಮತ್ತು ನಿವೇದಿತಾ ಕೆಲವು ಜಾಹೀರಾತುಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ರಾಜ ರಾಣಿ ಶೋ ಫೈನಲಿಸ್ಟ್ ಸಹ ಆಗಿದ್ದರು. ಅದಾದ ಬಳಿಕ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಕಾಣಿಸಿಕೊಳ್ಳುವ ಮೂಲಕ ತಾವು ಉತ್ತಮವಾದ ನಟಿ ಎನ್ನುವುದನ್ನು ಸಾಬೀತು ಮಾಡುತ್ತಿದ್ದಾರೆ ನಿವೇದಿತಾ.

ಇಷ್ಟೇ ಅಲ್ಲದೆ ಇತ್ತೀಚೆಗೆ ಮಿಸೆಸ್ ಇಂಡಿಯಾ 2022 ನಲ್ಲಿ ಭಾಗವಹಿಸಿ, ಪೀಪಲ್ ಚಾಯ್ಸ್ ಮಿಸೆಸ್ ಇಂಡಿಯಾ 2022 ಅವಾರ್ಡ್ ಅನ್ನು ಸಹ ಪಡೆದರು, ಇದರಿಂದ ಜನರು ಅವರನ್ನು ಎಷ್ಟು ಇಷ್ಟಪಡುತ್ತಿದ್ದಾರೆ ಎನ್ನುವುದು ಸಹ ತಿಳಿದುಬಂದಿದೆ. ನಿವೇದಿತಾ ಗೌಡ ಅವರು ಇಷ್ಟೆಲ್ಲ ಜನಪ್ರಿಯತೆ ಗಳಿಸಿದ್ದು, ಅವರಿಗೆ ಕನ್ನಡ ಮತ್ತು ತೆಲುಗು ಕಿರುತೆರೆ ಮತ್ತು ಬೆಳ್ಳಿತೆರೆಯಿಂದ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ ಅವುಗಳನ್ನು ಚೂಸ್ ಮಾಡುವುದರಲ್ಲಿ ಬಹಳ ಚೂಸಿ ಆಗಿರುವ ನಿವೇದಿತಾ, ಇದೀಗ ಹೊಸ ತೆಲುಗು ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರಂತೆ. ಈ ವಿಚಾರವನ್ನು ಸ್ವತಃ ನಿವೇದಿತಾ ಗೌಡ ಅವರೇ ಹೇಳಿಕೊಂಡಿದ್ದಾರೆ. ಹೊಸ ಪ್ರಾಜೆಕ್ಟ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ನೀಡುವುದಾಗಿ ತಿಳಿಸಿದ್ದಾರೆ. ಟ್ಯಾಲೆಂಟ್ ಜೊತೆಗೆ ಅದೃಷ್ಟ ಇದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಇವರು ಒಂದು ಉದಾಹರಣೆ ಆಗಿದ್ದಾರೆ.

Comments are closed.