Neer Dose Karnataka
Take a fresh look at your lifestyle.

ಬಿಗ್ ಬಾಸ್ ನಲ್ಲಿ ಹರಿಯಿತು ಕಣ್ಣೀರು: ಮೊದಲ ದಿನವೇ ಕಣ್ಣೀರು ಹಾಕಿದ ಬಹುತೇಕ ಸ್ಪರ್ದಿಗಳು: ಏನೆಲ್ಲಾ ನಡೆದಿದೆ ಗೊತ್ತೇ??

ಬಿಗ್ ಬಾಸ್ ಓಟಿಟಿ ಸೀಸನ್ ನಿನ್ನೆಯಷ್ಟೇ ಶುರುವಾಗಿದೆ. ಅಪರಿಚಿತ 16 ಸ್ಪರ್ಧಿಗಳು ಬಿಗ್ ಮನೆಯೊಳಗೆ ಎಂಟ್ರಿ ಕೊಟ್ಟು, ಈಗ ಮೊದಲ ವಾರದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಎಲ್ಲಾ ಸ್ಪರ್ಧಿಗಳು ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲಾ ಎಮೋಷನ್ ಗಳನ್ನು ಹೊರಹಾಕುತ್ತಾರೆ. ಒಂದಲ್ಲಾ ಒಂದು ಸಂದರ್ಭದಲ್ಲಿ ಕಣ್ಣೀರು ಹಾಕುತ್ತಾರೆ. ಆದರೆ ಈ ಬಾರಿ ಮೊದಲ ದಿನವೇ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ.

ಬಿಗ್ ಬಾಸ್ ಮೊದಲ ದಿನ ಒಂದು ಟಾಸ್ಕ್ ನೀಡಿದ್ದರು. ಆ ಟಾಸ್ಕ್ ನ ಹೆಸರು ನಾನು ಯಾರು? ಇದರಲ್ಲಿ ಸ್ಪರ್ಧಿಗಳಿಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ನೀಡಲಾಗಿದ್ದು, ಅದರ ಬಗ್ಗೆ ಅವರುಗಳು ಮಾತನಾಡಬೇಕಿತ್ತು, ಆ ಟಾಸ್ಕ್ ನಲ್ಲಿ ಸ್ಪರ್ಧಿಗಳು ತಮ್ಮ ಜೀವನದ ಅತ್ಯಂತ ಕಷ್ಟದ, ತಮ್ಮನ್ನು ಬಾಧಿಸಿದ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ, ಎಲ್ಲರ ಜೀವನದಲ್ಲೂ ಒಂದಲ್ಲಾ ಒಂದು ರೀತಿಯ ಕಷ್ಟಗಳು ನೋವುಗಳು ಇದೆ, ಸಾನಿಯಾ ಅಯ್ಯರ್ ಅವರಿಗೆ ಮಲತಂದೆ ಇಂದ ಆದ ನೋವು, ಸೋಮಣ್ಣ ಅವರ ದಾಂಪತ್ಯ ಜೀವನದ ಬಿರುಕು, ಚೈತ್ರಾ ಹಳ್ಳಿಕೇರಿ ಅವರಿಗೆ ಗಂಡನ ಮನೆಯವರಿಂದಲೇ ಆದ ನೋವು, ಅವಮಾನ..

ಸ್ಪೂರ್ತಿ ಅವರಿಗೆ ತಾಯಿಯ ನಿಧನದಿಂದಲೇ ಆಕೆಗೆ ಅಂಟಿಕೊಂಡ ಕಳಂಕ.. ಹೀಗೆ ಎಲ್ಲಾ ಸ್ಪರ್ಧಿಗಳಲ್ಲೂ ಬೇರೆ ಬೇರೆ ನೋವುಗಳಿವೆ. ಅದೆಲ್ಲವನ್ನು ಸ್ಪರ್ಧಿಗಳು ಮನಬಿಚ್ಚಿ ಹೇಳಿಕೊಂಡಿದ್ದಾರೆ. ಈ ಟಾಸ್ಕ್ ನಲ್ಲಿ ಎಲ್ಲರ ನೋವು ಕೇಳಿ, ಸಹ ಸ್ಪರ್ಧಿಗಳು ಕೂಡ ಕಣ್ಣೀರು ಹಾಕಿದ್ದಾರೆ, ಒಬ್ಬರನ್ನೊಬ್ಬರು ಸಮಾಧಾನ ಮಾಡಿದ್ದಾರೆ. ಈ ಎಮೋಷನ್ ಎಲಿಮೆಂಟ್ ಅನ್ನು ಬಿಗ್ ಬಾಸ್ ಮೊದಲ ದಿನವೇ ಬಳಸಿದ್ದಾರೆ. ಸ್ಪರ್ಧಿಗಳು ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ. ಇದರ ಪ್ರೋಮೊ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಪೂರ್ತಿ ಎಪಿಸೋಡ್ ಅನ್ನು ವೀಕ್ಷಕರು ವೂಟ್ ಆಪ್ ಮೂಲಕ ನೋಡಬಹುದು.

Comments are closed.