Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಸೋನು ಗೆ ಶಾಕ್ ಕೊಟ್ಟ ಕಿಚ್ಚ: ತಬ್ಬಿಬ್ಬಾದ ಸೋನು: ಸುದೀಪ್ ಹೇಳಿದ್ದೇನು ಗೊತ್ತೇ??

ಬಿಗ್ ಬಾಸ್ ಓಟಿಟಿ ಶೋ ನಿನ್ನೆ ಆರಂಭವಾಗಿದೆ. 16 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಸಿನಿಮಾ ಕಲಾವಿದರು, ಕಿರುತೆರೆ ಕಲಾವಿದರು ಹಾಗೂ ಸೋಷಿಯಲ್ ಮೀಡಿಯಾ ಇಂದ ಫೇಮಸ್ ಆಗಿರುವವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾ ಇಂದ ಫೇಮಸ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವವರು ಸೋನು ಶ್ರೀನಿವಾಸ್ ಗೌಡ. ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಅವರನ್ನು ಕಿಚ್ಚ ಸುದೀಪ್ ಅವರು ಬರಮಾಡಿಕೊಂಡರು.

ವೇದಿಕೆ ಮೇಲೆ ಸೋನು ಗೌಡ ಬಂದ ಬಳಿಕ, ಕಿಚ್ಚ ಸುದೀಪ್ ಅವರು ಸೋನು ಗೌಡಗೆ ಪ್ರಶ್ನೆ ಕೇಳಲು ಶುರು ಮಾಡಿದರು. ಬಿಗ್ ಬಾಸ್ ವೇದಿಕೆ ಮೇಲೆ ನಿಂತಿರುವುದು ಏನನ್ನಿಸುತ್ತಿದೆ ಎಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರಿಸಿದ ಸೋನು ಗೌಡ, ರೋಮಾಂಚನ ಆಗ್ತಿದೆ, ನಿಮ್ಮನ್ನ ಮೊದಲ ಸಲ ನೋಡ್ತಿದ್ದೀನಿ, ಅದನ್ನ ಎಸ್ಪ್ರೆಸ್ ಮಾಡೋದಕ್ಕೆ ಆಗ್ತಿಲ್ಲ..ಎಂದಿದ್ದಾರೆ. ಬಳಿಕ ಮುಂದುವರೆಸಿದ ಸುದೀಪ್ ಅವರು ಸೋನು ಗೌಡ ರನ್ನು ರೇಗಿಸುತ್ತಾ, ನೀವು ಏನೋ ಹೇಳಿದ್ದೀರಂತೆ, ಇದನ್ನು ಸಹ ಹೇಳಬೇಕು ಎಂದು ತಮಾಷೆ ಮಾಡಿದ್ದಾರೆ. ಮತ್ತೆ ಸುದೀಪ್ ಅವರು ಮಾತು ಮುಂದುವರೆಸಿ, ಬಿಗ್ ಬಾಸ್ ಮನೆಗೆ ಯಾವ ರೀತಿ ಪ್ರಿಪೇರ್ ಆಗಿ ಬಂದಿದ್ದೀರಿ ಎಂದು ಕೇಳಿದ್ದಾರೆ.

ಅದಕ್ಕೆ ಉತ್ತರ ಕೊಟ್ಟ ಸೋನು ಗೌಡ, ನಾನು ಏನು ಪ್ರಿಪೇರ್ ಆಗಿಲ್ಲ ಸರ್, ಆನ್ ಸ್ಪಾಟ್ ಹೇಗನ್ನಿಸುತ್ತದೆ ಅದನ್ನ ಹೇಳ್ತೀನಿ ಎಂದಿದ್ದು, ಅದಕ್ಕೆ ಸುದೀಪ್ ಅವರು ಗೊತ್ತು ಬಿಡಿ, ಎಂದು ತಮಾಷೆ ಮಾಡಿದ್ದಾರೆ. ಈ ಮಾತಿನ ವಿಡಿಯೋ ಈಗ ಭಾರಿ ವೈರಲ್ ಆಗಿದೆ. ಸುದೀಪ್ ಅವರಃ ಸೋನು ಗೌಡ ಕಾಲೆಳೆದಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಸೋಷಿಯಲ್ ಮೀಡಿಯಾದಲ್ಲಿ ಸೋನು ಶ್ರೀನಿವಾಸ್ ಗೌಡ ಅವರ ವಿಡಿಯೋ ಒಂದು ವೈರಲ್ ಆಗಿತ್ತು, ಅದೆಲ್ಲವೂ ಕಿಚ್ಚ ಸುದೀಪ್ ಅವರಿಗೆ ಗೊತ್ತಿದ್ದೂ, ಸೋನು ಗೌಡ ಅವರ ಕಾಲೆಳೆದಿದ್ದಾರೆ ಎನ್ನುವ ಕಮೆಂಟ್ಸ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ

Comments are closed.