Neer Dose Karnataka
Take a fresh look at your lifestyle.

ಸೀತಾ ಪಾತ್ರದ ಮೂಲಕ ಎಲ್ಲರ ಹೃದಯ ಕದ್ದಿರುವ ಮೃಣಾಲ್ ರವರ ಪಾತ್ರ ಮಾಡಲು ಮೊದಲು ಆಯ್ಕೆ ನೀಡಿದ್ದು ಯಾರಿಗೆ ಗೊತ್ತೇ?? ಬೇಡ ಎಂದ ಟಾಪ್ ನಟಿ ಯಾರು ಗೊತ್ತೇ??

536

ಖ್ಯಾತ ನಟ ದುಲ್ಕರ್ ಸಲ್ಮಾನ್ ನಟನೆಯ ಸೀತಾರಾಮಮಂ ಸಿನಿಮಾ ಒಳ್ಳೆಯ ಹೆಸರು ಗಳಿಸಿದೆ. ಹನು ರಾಘವಪುಡಿ ನಿರ್ದೇಶನದ ಈ ಸಿನಿಮಾ ಆಗಸ್ಟ್ 5 ರಂದು ಬಿಡುಗಡೆಯಾಗಲಿದ್ದು, ಸೂಪರ್ ಹಿಟ್ ಎನ್ನಿಸಿಕೊಂಡಿದೆ. ಅದ್ಧೂರಿ ತಾರಾಗಣವಿರುವ ಈ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ಸಿನಿಮಾದ ಹೈಲೈಟ್ ಎಂದೇ ಹೇಳಬಹುದು. ಅದ್ಬುತ ಪ್ರೇಮಕಥೆಯನ್ನು ಪ್ರೇಕ್ಷಕರ ಮನಸೂರೆಗೊಳ್ಳುವ ರೀತಿಯಲ್ಲಿ ಪ್ರದರ್ಶಿಸಲಾಗಿದೆ. ಮೃಣಾಲ್ ಮುಖ್ಯವಾಗಿ ಸೀತೆಯ ಪಾತ್ರದಿಂದ ಸಿನಿಪ್ರಿಯರನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದಾರೆ.

ಈ ಚಿತ್ರದ ಮೂಲಕ ಮೃಣಾಲ್‌ಗೆ ಟಾಲಿವುಡ್‌ನಲ್ಲಿ ಹಲವು ಆಫರ್‌ ಗಳು ಬರುವುದು ಖಚಿತ ಎನ್ನುತ್ತಾರೆ ತಜ್ಞರು. ಸೀತಾರಾಮಂ ಸಿನಿಮಾದ ಹೈಲೈಟ್ ಆದ ಸೀತೆಯ ಪಾತ್ರಕ್ಕೆ ಮೃಣಾಲ್ ಅವರನ್ನು ಆರಂಭದಲ್ಲಿ ಪರಿಗಣಿಸಿರಲಿಲ್ಲ. ಸೀತೆಯ ಪಾತ್ರಕ್ಕೆ ಮೊದಲು ಪೂಜಾ ಹೆಗಡೆ ಅವರನ್ನು ಹಾಕಿಕೊಳ್ಳುವ ಯೋಚನೆ ಮಾಡಲಾಗಿತ್ತು. ಆದರೆ ಕರೋನಾ ಸಮಯದಲ್ಲಿ ಡೇಟ್ಸ್ ಕೊರತೆಯಿಂದ ಪೂಜಾ ಹೆಗ್ಡೆ ಈ ಪ್ರಾಜೆಕ್ಟ್‌ ಗೆ ನೋ ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಪಾತ್ರ ಇಷ್ಟವಾದ್ರೂ ಪೂಜಾ ಈ ಚಿತ್ರಕ್ಕೆ ನೋ ಅಂದಿದ್ದಾರಂತೆ. ಪೂಜಾ ಮಾಡಬೇಕಾದ ಈ ಚಿತ್ರದ ಅವಕಾಶವನ್ನು ಮೃಣಾಲ್ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.

ಪೂಜಾ ಹೆಗ್ಡೆ ಈ ಚಿತ್ರದಲ್ಲಿ ನಟಿಸಿದ್ದರೆ ಪಾತ್ರಕ್ಕೆ ಹೆಚ್ಚಿನ ತೂಕ ಬರುತ್ತಿರಲಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೀಗಿರುವಾಗ ಸೀತಾರಾಮಂ ಸಿನಿಮಾ ಹೌಸ್ ಫುಲ್ ಶೋಗಳೊಂದಿಗೆ ರಶ್ ಆಗಿದೆ. ಬಿಡುಗಡೆಯಾದ ಎಲ್ಲೆಡೆ ಪಾಸಿಟಿವ್ ಟಾಕ್ ಗಿಟ್ಟಿಸಿಕೊಳ್ಳುತ್ತಿರುವ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡೋದು ಖಚಿತ ಎಂದು ಇಂಡಸ್ಟ್ರಿ ವಲಯಗಳು ಭವಿಷ್ಯ ನುಡಿಯುತ್ತಿವೆ. ನಿರ್ದೇಶಕ ಹನು ರಾಘವಪುಡಿ ಲವ್ ಸ್ಟೋರಿಗಳನ್ನು ಚೆನ್ನಾಗಿ ನಿಭಾಯಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಅದು ಈ ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ರೋಜಾ, ಕಂಚೆ, ಶೇರ್ಷಾ ಸಿನಿಮಾಗಳನ್ನು ನೆನಪಿಸಿದರೂ ಸಿನಿಮಾ ಹೇಗೋ ಕಥೆಯೊಂದಿಗೆ ಪ್ರೇಕ್ಷಕರನ್ನು ಕನೆಕ್ಟ್ ಮಾಡುತ್ತದೆ.

Leave A Reply

Your email address will not be published.