Neer Dose Karnataka
Take a fresh look at your lifestyle.

ಕೊನೆಗೂ ತನ್ನ ಆ ರೀತಿಯ ವಿಡಿಯೋ ಕುರಿತು ಸ್ಪಷ್ಟನೆ ನೀಡಿದ ಸೋನು ಗೌಡ: ಹೇಳಿದ್ದೇನು ಗೊತ್ತೇ?? ಅಸಲಿ ಕಥೆ ಕೇಳಿ ಬೇಸರ ವ್ಯಕ್ತ ಪಡಿಸಿದ ಪ್ರೇಕ್ಷಕರು.

ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ವರ್ಷಗಳ ಹಿಂದೆ ಟಿಕ್ ಟಾಕ್ ಇದ್ದ ಸಂದರ್ಭದಲ್ಲಿ ಸೋನು ಶ್ರೀನಿವಾಸ ಗೌಡರವರು ಪ್ರವರ್ಧಮಾನಕ್ಕೆ ಬಂದು ದೊಡ್ಡ ಮಟ್ಟದಲ್ಲಿ ಟಿಕ್ ಟಾಕ್ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಾರೆ. ಟಿಕ್ ಟಾಕ್ ನಿಷೇಧ ಆದನಂತರ ಇನ್ಸ್ಟಾಗ್ರಾಮ್ ರೀಲ್ಸ್ ಸೇರಿದಂತೆ ಹಲವಾರು ಶಾರ್ಟ್ ವಿಡಿಯೋ ಪ್ಲಾಟ್ಫಾರ್ಮ್ ಗಳಲ್ಲಿ ತಮ್ಮ ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ದೈನಂದಿನವಾಗಿ ಅಪ್ಲೋಡ್ ಮಾಡುವ ಮೂಲಕ ನೆಟ್ಟಿಗರ ನೆಚ್ಚಿನ ಸೆಲೆಬ್ರಿಟಿ ಕೂಡ ಆಗುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆದ ಮೇಲೆ ಕೇವಲ ಮೆಚ್ಚುಗೆಗಳನ್ನು ಮಾತ್ರವಲ್ಲದೆ ಕೆಲವರ ತೆಗಳಿಕೆಗಳನ್ನು ಕೂಡ ಒಪ್ಪಿಕೊಳ್ಳಬೇಕಾಗುತ್ತದೆ ಹಾಗಿದ್ದರೆ ಮಾತ್ರ ಸೆಲೆಬ್ರಿಟಿ ಆಗಿ ಇರಲು ಸಾಧ್ಯ. ಸೋನು ಶ್ರೀನಿವಾಸ ಗೌಡ ಅವರ ಸೋಶಿಯಲ್ ಮೀಡಿಯಾ ಲೈಫ್ ನಲ್ಲಿ ಕೂಡ ಇದೇ ರೀತಿ ನಡೆದಿತ್ತು ಎಂದರೆ ತಪ್ಪಾಗಲಾರದು. ಇನ್ನು ಈಗ ಸದ್ಯಕ್ಕೆ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ರಲ್ಲಿ ಎರಡನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ.

ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನದಿಂದಲೇ ಸೋನು ಶ್ರೀನಿವಾಸ ಗೌಡ ಅವರು ಹಲವಾರು ಕಾರಣಗಳಿಗಾಗಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳಿಗೆ ಒಳಗಾಗುತ್ತಿದ್ದಾರೆ. ಮೊದಲಿಗೆ ಸ್ಮೋಕಿಂಗ್ ವಿಚಾರದಲ್ಲಿ ಸ್ಮೋಕಿಂಗ್ ಮಾಡುವುದರಲ್ಲಿ ತಪ್ಪೇನಿದೆ ನಾನು ಕೂಡ ಸ್ಮೋಕಿಂಗ್ ಮಾಡುತ್ತೇನೆ ಎಂಬುದಾಗಿ ರೂಪೇಶ್ ಶೆಟ್ಟಿ ಅವರಿಗೆ ಹೇಳಿರುವ ಕಾರಣದಿಂದಾಗಿ ಸಾಕಷ್ಟು ಟೀಕೆಗಳಿಗೆ ಸೋನು ಗೌಡ ಒಳಗಾಗುತ್ತಿದ್ದಾರೆ. ಇನ್ನು ಒಂದು ಸಂದರ್ಭದಲ್ಲಿ ಕೇವಲ ಇಂತಹ ಹಾಸ್ಯಾಸ್ಪದ ವಿಚಾರಗಳಿಗಾಗಿ ಮಾತ್ರವಲ್ಲದೆ ಅವರ ವೈಯಕ್ತಿಕ ಜೀವನದ ಗಂಭೀರ ವಿಚಾರಕ್ಕಾಗಿ ಕೂಡ ಸೋನು ಗೌಡ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು.

ಇದೇ ವಿಚಾರದ ಕಾರಣದಿಂದಾಗಿ ಸೋನು ಗೌಡ ಅವರನ್ನು ಯಾಕೆ ಬಿಗ್ ಬಾಸ್ ನಂತಹ ಪ್ರತಿಷ್ಠಿತ ರಿಯಾಲಿಟಿ ಶೋ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಿದ್ದೀರಿ ಎಂಬುದಾಗಿ ಕಾರ್ಯಕ್ರಮದ ಪ್ರಾಯೋಜಕರು ಹಾಗೂ ಕಾರ್ಯಕ್ರಮದ ಮ್ಯಾನೇಜ್ಮೆಂಟ್ ಸಂಸ್ಥೆಗೆ ನೆಟ್ಟಿಗರು ಹಿಗ್ಗಾಮುಗ್ಗ ಜಾಡಿಸಿದ್ದರು. ಆದರೆ ಈಗ ಸೋನು ಶ್ರೀನಿವಾಸ ಗೌಡ ರವರು ಬಿಗ್ ಬಾಸ್ ಮನೆಯ ಒಳಗೆ ಇದೆ ವಿಚಾರದ ಕುರಿತಂತೆ ಪರೋಕ್ಷವಾಗಿಯೇ ಮಾತನಾಡಿ ಈ ವಿಚಾರದ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಬಹುದಾಗಿದೆ.

ಹಾಗಿದ್ದರೆ ಸೋನು ಗೌಡ ರವರು ತಮ್ಮ ವೈಯಕ್ತಿಕ ಜೀವನದ ಗಂಭೀರ ವಿಚಾರದ ಕುರಿತಂತೆ ಏನು ಹೇಳಿದ್ದಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಸೋನು ಗೌಡ ರವರು ನಮ್ಮ ಮನೆಯಲ್ಲಿ ಲವ್ ಮ್ಯಾರೇಜ್ ಮಾಡಿಕೊಳ್ಳುವುದಕ್ಕೆ ಕೂಡ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ ಇದೇ ಕಾರಣಕ್ಕಾಗಿ ಒಬ್ಬ ಹುಡುಗನನ್ನು ನಾನು ಇಷ್ಟಪಟ್ಟಿದ್ದೆ. ಆತ ಒಂದು ದಿನ ನನಗೆ ವಿಡಿಯೋ ಕಾಲ್ ಮಾಡಲು ಹೇಳಿದ, ಆ ರೀತಿಯ ಕಳುಹಿಸು ಎಂದ ನಾನು ನಂಬಿಕೆಯಿಂದ ಕಳುಹಿಸಿದ್ದೆ. ಆದರೆ ನಂತರ ಒಂದು ದಿನ ನನಗೆ ಕರೆ ಮಾಡಿ ನಿನ್ನ ವಿಡಿಯೋ ನನ್ನ ಬಳಿ ಇದೆ.

ಯಾರನ್ನು ಮದುವೆ ಆಗುತ್ತೀಯೋ ನಾನು ಕೂಡ ನೋಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದ್ದ. ಇದೇ ವಿಚಾರವನ್ನು ಬಿಗ್ ಬಾಸ್ ನಲ್ಲಿ ನಿನ್ನೆಯ ದಿನ ಹೇಳುತ್ತಾ ಕಣ್ಣೀರು ಹಾಕಿದ್ದು ಎಲ್ಲರ ಮನವನ್ನು ಕರಗಿಸಿತ್ತು. ಇತ್ತೀಚೆಗಷ್ಟೇ ಅಂದರೆ ಕೆಲವು ಸಮಯಗಳ ಹಿಂದಷ್ಟೇ ಸೋನು ಗೌಡ ಅವರ ವೈಯಕ್ತಿಕ ಜೀವನದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಮನಸ್ಸಿನಲ್ಲಿ ಸೋನು ಗೌಡ ಅವರ ಕುರಿತಂತೆ ಬೇಡದ ಅಭಿಪ್ರಾಯಗಳು ಮೂಡುವಂತೆ ಮಾಡಿದ್ದವು.

ಇಲ್ಲಿ ಸೋನು ಗೌಡ ಅವರು ತಾವು ಪ್ರೀತಿಸಿದ್ದ ಹುಡುಗನ ಮೋಸಕ್ಕೆ ಕಾಲು ಜಾರಿ ಬಿದ್ದು ಈ ರೀತಿ ಅವಾಂತರವನ್ನು ಮಾಡಿಕೊಂಡಿದ್ದಾರೆ ಎಂಬುದಾಗಿ ಈ ಸಂಚಿಕೆಯಿಂದ ತಿಳಿದು ಬಂದಿದೆ. ಈ ಸುದ್ದಿ ಸತ್ಯವಾಗಿದ್ದೆ ಆದರೆ ಇಷ್ಟು ದಿನ ಇವರ ಕುರಿತಂತೆ ಪ್ರತಿಯೊಬ್ಬ ನೆಟ್ಟಿಗರು ಕೂಡ ಅಪಾರ್ಥವನ್ನು ಭಾವಿಸಿಕೊಂಡಿದ್ದರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೋನು ಗೌಡ ಅವರು ಬಿಚ್ಚಿಟ್ಟಿರುವ ಈ ಸತ್ಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.