Neer Dose Karnataka
Take a fresh look at your lifestyle.

ಆ ನಟನ ಜೊತೆ ಪ್ರೀತಿಯಲ್ಲಿ ಇದ್ದ ಖ್ಯಾತ ನಟಿ ವರಲಕ್ಷ್ಮಿ ಶರತ್ ಕುಮಾರ್ ಆದರೆ ಕೊನೆಗೆ ಏನಾಯ್ತು ಗೊತ್ತೇ?? ಅದಕ್ಕೆ ಇನ್ನು ಮದುವೆಯಾಗಿಲ್ಲವೇ??

ಚಿತ್ರರಂಗ ಎಂದಮೇಲೆ ಅಲ್ಲಿ ಪ್ರೀತಿ ಪ್ರೇಮದ ಪ್ರಕರಣಗಳ ಬಗ್ಗೆ ಮಾತುಗಳನ್ನು ಕೇಳುತ್ತಲೇ ಇರುತ್ತೇವೆ. ನಟ ನಟಿಯರ ನಡುವೆ ಪ್ರೀತಿ ಪ್ರೇಮ ಮೂಡುವುದು, ಆ ವಿಚಾರ ಸುದ್ದಿ ಆಗುವುದು, ನಂತರ ಬ್ರೇಕಪ್ ಆಗುವುದು. ಇದೆಲ್ಲವೂ ಸಹ ಬಹಳ ಕಾಮನ್ ಆಗಿದೆ. ಪ್ರೀತಿಸುವವರಲ್ಲಿ ಕೆಲವು ಜೋಡಿಗಳು ಮಾತ್ರ, ಮದುವೆಯ ಹಂತಕ್ಕೆ ಹೋಗುತ್ತಾರೆ. ಬಹುತೇಕ ಜೋಡಿಗಳು ಮದುವೆಗಿಂತ ಮೊದಲೇ ಬ್ರೇಕಪ್ ಮಾಡಿಕೊಳ್ಳುತ್ತಾರೆ. ಇಂತಹ ಒಂದು ಲವ್ ಸ್ಟೋರಿ ಬಗ್ಗೆ ತಿಳಿಸುತ್ತೇವೆ.

ಆ ಲವ್ ಸ್ಟೋರಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಶರತ್ ಕುಮಾರ್ ಅವರ ಮಗಳು ವರಲಕ್ಷ್ಮಿ ಶರತ್ ಕುಮಾರ್ ಅವರದ್ದಾಗಿದೆ. ವರಲಕ್ಷ್ಮಿ ಶರತ್ ಕುಮಾರ್ ಅವರು ಭಾಷೆಯ ಬೇಧ ಇಲ್ಲದೆ ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಸಹ ನಟಿಸಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್ ಅವರು ತಮಿಳು ಚಿತ್ರರಂಗದ ಖ್ಯಾತನಟ ವಿಶಾಲ್ ಅವರನ್ನು ಪ್ರೀತಿಸುತ್ತಿದ್ದರು. ಇವರಿಬ್ಬರು ಹಲವು ವೇದಿಕೆಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಇಬ್ಬರ ನಡುವೆ ಪ್ರೀತಿ ಇದೆ ಎನ್ನುವ ವಿಚಾರ ಜೋರಾಗಿಯೇ ಸದ್ದು ಮಾಡಿತ್ತು. ಆದರೆ ಅದೊಂದು ಕಾರಣದಿಂದ ಇವರಿಬ್ಬರ ಸಂಬಂಧ ಮುರಿದು ಬಿತ್ತು ಎನ್ನಲಾಗಿದೆ.

ತಮಿಳಿನಲ್ಲಿ ನಡಿಗರ್ ಸಂಗಮ್ ಎನ್ನುವ ವೇದಿಕೆ ಇದೆ. ಅದರ ಎಲೆಕ್ಷನ್ ಗೆ ನಟ ಶರತ್ ಕುಮಾರ್ ಹಾಗೂ ವಿಶಾಲ್ ಇಬ್ಬರು ಸಹ ಸ್ಪರ್ಧಿಸಿದ್ದರು. ಇಬ್ಬರು ವಿರುದ್ಧವಾಗಿ ನಿಲ್ಲಬೇಕಾಯಿತು. ಎಷ್ಟೇ ಪ್ರಯತ್ನ ನಡೆದರು, ಕೊನೆಗೆ ಗೆದ್ದದ್ದು ನಟ ವಿಶಾಲ್. ಇದರಿಂದಾಗಿ ಇವರಿಬ್ಬರ ಕುಟುಂಬದ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು ಎನ್ನುವ ಮಾತಿದೆ. ಈ ಘಟನೆ ಬಳಿಕ ವಿಶಾಲ್ ಅವರನ್ನು ವರಲಕ್ಷ್ಮಿ ಅವರ ಬಗ್ಗೆ ಕೇಳಿದಾಗ, ವರಲಕ್ಷ್ಮಿ ಒಳ್ಳೆಯ ಸ್ನೇಹಿತೆ ಮಾತ್ರ ಇನ್ನೇನು ಇಲ್ಲ ಎಂದು ಹೇಳಿದ್ದರು. ವರಲಕ್ಷ್ಮಿ ಅವರನ್ನು ಕೇಳಿದಾಗ ಕೂಡ, ಅದೇ ಮಾತನ್ನು ಹೇಳಿದ್ದರು ಎನ್ನಲಾಗಿದೆ.

Comments are closed.