Neer Dose Karnataka
Take a fresh look at your lifestyle.

ಸೋನು ಗೌಡ ರವರ ವಿಡಿಯೋ ವಿಚಾರಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಸಾನ್ಯ ಅಯ್ಯರ್ ತಾಯಿ . ಹೇಳಿದ್ದೇನು ಗೊತ್ತೇ??

116

ಸೋನು ಶ್ರೀನಿವಾಸ್ ಗೌಡ ಟ್ರೋಲಿಗರ ಕೈಗೆ ಸಿಕ್ಕಿ, ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ, ಕೆಲ ದಿನಗಳ ಹಿಂದೆ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು, ಆ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗಿತ್ತು. ಹೀಗೆ ಟ್ರೋಲ್ ಆದವರನ್ನು ಬಿಗ್ ಬಾಸ್ ಮನೆಗೆ ಆಯ್ಕೆಮಾಡಿಕೊಂಡಿದ್ದಾರೆ ಎನ್ನುವ ಅಸಮಾಧಾನ ಸಹ ಜನರಲ್ಲಿ ವ್ಯಕ್ತವಾಗುತ್ತಿದೆ. ಇದರ ನಡುವೆ ಇದೀಗ ಮತ್ತೊಬ್ಬ ಸ್ಪರ್ಧಿ ಸಾನ್ಯಾ ಅಯ್ಯರ್ ಅವರ ತಾಯಿ ರೂಪಾ ಅಯ್ಯರ್, ಸೋನು ಗೌಡ ಅವರ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ರೂಪಾ ಅಯ್ಯರ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದು, ಸಾನ್ಯಾ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ, ಹಾಗೆಯೇ ಸೋನು ಶ್ರೀನಿವಾಸ್ ಗೌಡ ಬಗ್ಗೆ ಪ್ರಶ್ನೆ ಕೇಳಿದಾಗ, ಆಕೆಯ ಬಗ್ಗೆ ಸಹ ಮಾತನಾಡಿದ್ದು, “ವಿಡಿಯೋ ಲೀಕ್ ಆಗಿದ್ದರಲ್ಲಿ ಸೋನು ತಪ್ಪು ಏನು ಇಲ್ಲ. ಅವಳು ಮಾಡಿದ ತಪ್ಪು ಒಂದೇ ಅದನ್ನ ಕಳಿಸಿದ್ದು. ಅವಳ ಪರಿಸ್ಥಿತಿ ಹೇಗಿತ್ತೋ, ಏನು ಯೋಚನೆಯಲ್ಲಿ ಕಳಿಸಿದ್ದಾಳೋ ಗೊತ್ತಿಲ್ಲ. ನಾನು ಅವಳನ್ನ ಭೇಟಿ ಮಾಡಿದೆ, ಅವಳು ಮಾತಾಡೋದು ಎಲ್ಲಾ ನೋಡಿದ್ರೆ ಇನೊಸೆಂಟ್ ಅನ್ನಿಸುತ್ತಾಳೆ. ಇನೊಸೆಂಟ್ ಆಗಿರೋದರಿಂದಾನೆ ವಿಡಿಯೋ ಕಳಿಸಿದ್ದಾಳೆ. ಜಾಣೆ ಆಗಿದ್ರೆ ಹಾಗೆ ಮಾಡ್ತಾ ಇರ್ಲಿಲ್ಲ.

ನಾನು ಕೂಡ ಸಾನ್ಯಾಗೆ ಈ ಥರದ್ದರ ಬಗ್ಗೆ ಆಗಾಗ ಹೇಳ್ತಾನೆ ಇರ್ತೀನಿ. ಯಾವುದೇ ಕಂಟೆಂಟ್, ಫೋನ್ ಟು ಫೋನ್ ಯಾರಿಗೂ ಕಳಿಸಬಾರದು ಅಂತ ಹೇಳ್ತಾನೆ ಇರ್ತೀನಿ. ಕಳಿಸಲ್ಲ ಅಂತ ಗೊತ್ತು, ಆದರೂ ಹೇಳ್ತಾ ಇರ್ತೀನಿ. ಮಕ್ಕಳ ಕಿವಿಗೆ ಅದು ಬೀಳ್ತಾ ಇರಬೇಕು. ಅದ್ರಿಂದ ಹೇಳ್ತಾನೆ ಇರ್ತೀನಿ. ಸೋನು ಆ ಕ್ಷಣದಲ್ಲಿ ಅವಳು ಯಾಕೆ ಹಾಗೆ ಮಾಡಿದ್ದಾಳೆ ಗೊತ್ತಿಲ್ಲ, ಅದೊಂದು ಕ್ಷಣವನ್ನ ಗೆದ್ದು ಬಂದ್ರೆ, ಯಾವುದೇ ತಪ್ಪು ಆಗಲ್ಲ. ಸೋನು ವಿಷಯದಲ್ಲಿ ಆ ರೀತಿ ಆಗಿದೆ. ಆ ಥರ ಮಾಡೋ ಅಂಥವರಿಗೆ ಚಪ್ಪಲಿ ತಗೊಂಡು ಹೊಡೀಬೇಕು..”ಎಂದು ಹೇಳಿದ್ದಾರೆ ದೀಪಾ ಅಯ್ಯರ್.

Leave A Reply

Your email address will not be published.