Neer Dose Karnataka
Take a fresh look at your lifestyle.

ಮೊದಲ ದಿನವೇ ನಾಮಿನೇಟ್ ಪ್ರಕ್ರಿಯೆ: 9 ಜನಕ್ಕೆ ಅಗ್ನಿ ಪರೀಕ್ಷೆ: ಆದರೆ ಸುಲಭವಾಗಿ ಹೊರಹೋಗುವುದು ಯಾರು ಗೊತ್ತೇ?? ನೀವಂದು ಕೊಂಡವರು ಅಲ್ಲ.

70

ಬಿಗ್ ಬಾಸ್ ಶೋ ಶುರುವಾದರೆ ಮನೆಯ ಒಳಗಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಕೊಡುವ ಟಾಸ್ಕ್ ಗಳ ಹಬ್ಬವಾದರೆ, ಹೋರಾಗಿರುವವರಿಗೆ ಮನರಂಜನೆ ಅದ್ಧೂರಿಯಾಗಿರುತ್ತದೆ. ಪ್ರತಿ ಎಪಿಸೋಡ್ ನಲ್ಲೂ ಒಂದಲ್ಲ ಒಂದು ವಿಚಾರ ಚರ್ಚೆಗೆ ಒಳಗಾಗುವುದು ಮತ್ತು ಟ್ರೋಲ್ ಆಗುತ್ತಲೇ ಇರುತ್ತದೆ. ಇನ್ನು ಹೆಚ್ಚಾಗಿ ಚರ್ಚೆಯಾಗುವ ವಿಚಾರಗಳಲ್ಲಿ ಒಂದು ನಾಮಿನೇಷನ್ ಮತ್ತು ಎಲಿಮಿನೇಷನ್ ಪ್ರಕ್ರಿಯೆಗಳು. ಬಿಗ್ ಬಾಸ್ ಮನೆಯ ವಾಸದ ಮೊದಲ ವಾರದಲ್ಲಿ 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

ಮೊದಲ ದಿನ ಒಬ್ಬರು ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರು. ಎಲ್ಲರ ಜೊತೆಗೆ ಮನೆಯ ಸ್ಪರ್ಧಿಗಳು ಮಾತನಾಡುವ ಪ್ರಯತ್ನ ಮಾಡುತ್ತಿದ್ದರು. ಅಷ್ಟರಲ್ಲೇ ನಾಮಿನೇಶನ್ ವಿಚಾರ ಬಂದು, ಮನೆಯವರ ಪ್ರತ್ಯೇಕ ವೋಟ್ ನ ಪ್ರಕಾರ, 9 ಜನ ನಾಮಿನೇಟ್ ಆಗಿದ್ದಾರೆ. ಸೋನು ಗೌಡ, ಆರ್ಯವರ್ಧನ್ ಗುರೂಜಿ, ಸ್ಫೂರ್ತಿ ಗೌಡ, ಜಶ್ವಂತ್, ನಂದಿನಿ, ಜಯಶ್ರೀ ಆರಾಧ್ಯ, ಕಿರಣ್ ಯೋಗೇಶ್ವರ್ ಮತ್ತು ಅಕ್ಷತಾ ಕುಕ್ಕಿ ನಾಮಿನೇಟ್ ಆಗಿದ್ದಾರೆ. ಈಗಾಗಲೇ ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿಗಳು ಯಾರ್ಯಾರು ಎನ್ನುವ ಚರ್ಚೆ ಶುರುವಾಗಿದೆ.

ಜನರ ವೋಟಿಂಗ್ ಮೇಲೆಯೇ ಎಲಿಮಿನೇಶನ್ ಪ್ರಕ್ರಿಯೆ ನಿಂತಿದೆ. ನಾವೆಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ನೋಡುತ್ತಿರುವ ಪ್ರಕಾರ, ಸೋನು ಗೌಡ ಬಿಗ್ ಬಾಸ್ ಗೆ ಆಯ್ಕೆಯಾಗಿರುವುದು ಜನರಿಗೆ ಇಷ್ಟವಾಗಿಲ್ಲ, ಇವರನ್ನು ಯಾಕೆ ಆಯ್ಕೆಮಾಡಿದ್ದಾರೆ ಎಂದು ಜನರು ಚಾನೆಲ್ ಮೇಲೆ ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸೋನು ಗೌಡ ಅವರಿಗೆ ಜನರ ವೋಟ್ ಗಳು ಸಿಗುವುದು ಕಷ್ಟವೇ ಎನ್ನಲಾಗುತ್ತಿದ್ದು, ಅವರ ಬಗ್ಗೆ ಭಾರಿ ನೆಗಟಿವ್ ಅಭಿಪ್ರಾಯ ಇರುವುದರಿಂದ, ಜನರು ಸೋನು ಗೌಡ ಅವರೇ ಹೊರಹೋಗುವ ಹಾಗೆ ಮಾಡುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Leave A Reply

Your email address will not be published.