Neer Dose Karnataka
Take a fresh look at your lifestyle.

ಈ ಬಾರಿ ಕಿತ್ತಾಡಿಕೊಂಡದ್ದು ಆರ್ಯವರ್ಧನ್ ಹಾಗೂ ಸೋನು ಗೌಡ: ಮೊಟ್ಟೆಗಾಗಿ ಯಾವ ಲೆವೆಲ್ ಗೆ ಇಳಿದಿದ್ದಾರೆ ಗೊತ್ತೇ??

30

ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಆಗುವುದು ಕಾಮನ್. ಒಂದಲ್ಲ ಒಂದು ವಿಚಾರಕ್ಕೆ ಜಗಳ ಕದನ ನಡೆಯುತ್ತಲೇ ಇರುತ್ತದೆ. ಸಣ್ಣ ಸಣ್ಣ ವಿಚಾರಗಳಿಗೂ ಈ ಮನೆಯಲ್ಲಿ ಜಗಳ ಆಗುತ್ತಲೇ ಇರುತ್ತದೆ. ಇದೀಗ ಬಿಗ್ ಮನೆಯಲ್ಲಿ ಮೂರನೇ ದಿನವೆ ಸೋನು ಶ್ರೀನಿವಾಸ್ ಗೌಡ ಮತ್ತು ಆರ್ಯವರ್ಧನ್ ಗುರೂಜಿ ನಡುವೆ ಜಗಳ ನಡೆದಿದೆ. ಈ ಜಗಳ ನಡೆದಿರುವುದು ಮೊಟ್ಟೆಯ ವಿಚಾರಕ್ಕೆ. ಸೋನು ಶ್ರೀನಿವಾಸ್ ಗೌಡ ಮೇಲೆ ಎಲ್ಲರ ಕಣ್ಣು ಇದೆ. ಈಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗುತ್ತಿದ್ದರು.

ಹಾಗಾಗಿ ಎಲ್ಲರ ಕಣ್ಣು ಸೋನು ಮೇಲಿದೆ. ಇನ್ನು ಆರ್ಯವರ್ಧನ್ ಗುರೂಜಿ ಸಹ ಸಾಕಷ್ಟು ಕಾರಣಗಳಿಂದ ಟ್ರೋಲ್ ಆಗುತ್ತಿದ್ದರು. ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು ಗುರೂಜಿ. ಇದೀಗ ಇವರ ಜೊತೆಗೆ ಮೊಟ್ಟೆ ವಿಚಾರಕ್ಕೆ ಸೋನು ಜಗಳಕ್ಕೆ ಇಳಿದಿದ್ದಾರೆ. “ನೀವು ನನ್ನ ಜೊತೆ ಚೆನ್ನಾಗಿದ್ದು, ಬೇರೆಯವರು ಹೇಳಿದ್ದಕ್ಕೆ ತಲೆ ಕುಣಿಸುತ್ತೀರಾ, ನಾನು ಹೇಳಿದ್ದಕ್ಕೂ ತಲೆ ಕುಣಿಸಿ. ಗುರುಜಿ ಯಾರ ಮಾತನ್ನು ಕೇಳೋದಕ್ಕೆ ಬಂದಿಲ್ಲ ಎಂದು ಹೇಳುತ್ತೀರಾ, ಅದನ್ನೇ ಹೇಳಬಹುದಿತ್ತು. ಹೆಣ್ಣುಮಗಳು ಮೊಟ್ಟೆ ಮಾಡಿಕೊಂಡು ತಿನ್ನೋದ್ರಲ್ಲಿ ಏನಿದೆ ಅಂತ ನೀವು ಹೇಳಬಹುದಿತ್ತು. ಒಂದೇ ದಿನಕ್ಕೆ 30ಕ್ಕಿಂತ ಹೆಚ್ಚು ಮೊಟ್ಟೆ ಆಗಿತ್ತು..” ಎಂದು ಗುರೂಜಿ ಮೇಲೆ ಕೋಪಗೊಂಡಿದ್ದಾರೆ ಸೋನು.

ಇನ್ನು ಅಲ್ಲೇ ಇದ್ದ ಚೈತ್ರಾ ಹಳ್ಳಿಕೇರಿ ಅವರು ಸೋನು ಗೌಡರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆ ಸಮಯದಲ್ಲಿ ಸೋನುಗೆ ಜಯಶ್ರೀ ಆರಾಧ್ಯ ಅವರ ಸಾಥ್ ಸಿಕ್ಕಿ ಜಗಳ ಇನ್ನು ಮುಂದುವರೆಯಿತು. ಮೊಟ್ಟೆ ಟ್ರೇ ಅನ್ನು ಚೈತ್ರಾ ಅವರು ತೋರಿಸಿದರು, ಅದನ್ನು ನೋಡಿದ ಸೋನು, “ಟ್ರೇ ಇದೆಯಲ್ಲ, ಒಂದು ಮೊಟ್ಟೆ ಕೊಟ್ಟಿದ್ರೆ ಏನಾಗ್ತಿತ್ತು. ಇಲ್ಲಿ ಒಬ್ಬೊಬ್ಬರಿಗೂ ಬೇಧ ಭಾವ ಮಾಡ್ತೀರಾ, ನಾವು ಬಂದಾಗಿನಿಂದ ನೋಡ್ತಾನೆ ಇದ್ದೀವಿ. ಯಾರಿಗೆ ಗೊತ್ತಾಗ್ತಿಲ್ಲ ಅಂದ್ರು, ಬಿಗ್ ಬಾಸ್ ಗೆ ಗೊತ್ತಾಗುತ್ತೆ..” ಎಂದಿದ್ದಾರೆ ಸೋನು. ಈ ಮಾತು ಕೇಳಿ ಗುರೂಜಿ ಸಹ ಸೈಲೆಂಟ್ ಆಗಿದ್ದಾರೆ. ಈ ರೀತಿ ಜಗಳ ತೆಗೆದಿದ್ದಾರೆ ಸೋನು.

Leave A Reply

Your email address will not be published.