Neer Dose Karnataka
Take a fresh look at your lifestyle.

ಎಲ್ಲಾ ಲೆಕ್ಕಾಚಾರಗಳು ಉಲ್ಟಾ: ದ್ರಾವಿಡ್, ರೋಹಿತ್, ಆಯ್ಕೆ ಸಮಿತಿ ಮಹಾ ಎಡವಟ್ಟು. ಏಷ್ಯಾ ಕಪ್ ತಂಡದಲ್ಲಿ ಐದು ಎಡವಟ್ಟುಗಳು ಯಾವ್ಯಾವು ಗೊತ್ತೇ?

ಆಗಸ್ಟ್ 28ರಿಂದ ಏಷ್ಯಾಕಪ್ ಪಂದ್ಯಗಳು ಶುರುವಾಗುತ್ತಿದೆ. ಈ ಪಂದ್ಯಗಳಿಗೆ ಈಗಾಗಲೇ ಬಿಸಿಸಿಐ 15 ಪ್ಲೇಯರ್ ಗಳ ತಂಡದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕಿಂಗ್ ಕೋಹ್ಲಿ ಮತ್ತು ಕೆ.ಎಲ್ ರಾಹುಲ್ ಅವರು ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಇನ್ನು ಕೆಲವು ಬಲಿಷ್ಠ ಪ್ಲೇಯರ್ ಗಳು ಭಾರತ ತಂಡದಿಂದ ಹೊರಗುಳಿದಿದ್ದಾರೆ. ಜಸ್ಪ್ರೀತ್ ಬುಮ್ರ ಇಂಜೂರಿ ಇಂದ ಹೊರಗುಳಿದಿದ್ದಾರೆ, ಶಮಿ ಸಹ ಆಯ್ಕೆಯಾಗಿಲ್ಲ, ಕುಲದೀಪ್, ಅಕ್ಷರ್ ಪಟೇಲ್ ಸಹ ಆಯ್ಕೆಯಾಗಿಲ್ಲ. ಬದಲಾಗಿ ರವಿಚಂದ್ರನ್ ಅಶ್ವಿನ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದು ನಿಜಕ್ಕೂ ಎಲ್ಲರಿಗೂ ಶಾಕ್ ನೀಡಿದೆ. ಏಷ್ಯಾಕಪ್ ನಲ್ಲಿ ಆಡುವ ಬಹುತೇಕ ಆಟಗಾರರನ್ನು ವಿಶ್ವಕಪ್ ಪಂದ್ಯಗಳಿಗೂ ಆಯ್ಕೆ ಮಾಡಬೇಕಿದ್ದು, ಏಷ್ಯಾಕಪ್ ಪಂದ್ಯಗಳಲ್ಲಿ ಬಿಸಿಸಿಐ ಮಾಡಿರುವ 5 ತಪ್ಪುಗಳನ್ನು ಈಗ ತಿಳಿಸುತ್ತೇವೆ ನೋಡಿ..

ಮೂರನೇ ಓಪನರ್ ಸ್ಕ್ವಾಡ್ ನಲ್ಲಿಲ್ಲ :- ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಇದ್ದಾರೆ, ಒಂದು ವೇಳೆ ಇವರಿಬ್ಬರಿಗೆ ಆರೋಗ್ಯ ಸಮಸ್ಯೆ ಇಂದ, ಪ್ಲೇಯಿಂಗ್ 11 ಇಂದ ಹೊರಗುಳಿಯುವ ಹಾಗೆ ಆದರೆ, ಓಪನರ್ ಆಗಿ ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ ಹಾಗೂ ಪಂತ್ ಆರಂಭೀಕ ಬ್ಯಾಟ್ಸ್ಮನ್ ಆದರೆ, ಮೂರನೇ ಸ್ಥಾನಕ್ಕೆ ಸರಿಯಾದ ಬ್ಯಾಟ್ಸ್ಮನ್ ಇರುವುದಿಲ್ಲ. ಸ್ಪಿನ್ನರ್ ಗಳನ್ನು ತೆಗೆದುಕೊಳ್ಳುವ ಬದಲು, ಇಶಾನ್ ಕಿಶನ್ ಅವರನ್ನು ಆಯ್ಕೆಮಾಡಿಕೊಂಡಿದ್ದರೆ, ಈ ಸಮಸ್ಯೆ ಇರುತ್ತಿರಲಿಲ್ಲ.
ಹೆಚ್ಚುವರಿ ಸ್ಪಿನ್ನರ್ :- ಈ ಬಾರಿ 4 ಹೆಚ್ಚುವರಿ ಸ್ಪಿನ್ನರ್ ಗಳನ್ನು ಭಾರತ ತಂಡ ತೆಗೆದುಕೊಂಡಿದೆ. ಈ ಸಮಯದಲ್ಲಿ ಹೆಚ್ಚು ಸ್ಪಿನ್ನರ್ ಗಳನ್ನು ಆಯ್ಕೆಮಾಡುವ ಬದಲು, ಆಲ್ ರೌಂಡರ್ ದೀಪಕ್ ಚಹರ್ ಅವರನ್ನು ಆಯ್ಕೆಮಾಡಬಹುದಿತ್ತು. ನಾಲ್ಕು ಸ್ಪಿನ್ನರ್ ಗಳನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಸಹ ಈಗ ಶುರುವಾಗಿದೆ.

ಅಕ್ಷರ್ ಪಟೇಲ್ ಬದಲಾಗಿ ಅಶ್ವಿನ್ :- ಪ್ರಸ್ತುತ ಮ್ಯಾಚ್ ಗಳಲ್ಲಿನ ಪರ್ಫಾರ್ಮೆನ್ಸ್ ಗಳನ್ನು ನೋಡಿದರೆ, ಅಕ್ಷರ್ ಪಟೇಲ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲು ಸಹ ಉತ್ತಮವಾದ ಪ್ರದರ್ಶನ ನೀಡುತ್ತಿದ್ದಾರೆ. ಅವರನ್ನು ಬಿಟ್ಟು ಅಶ್ವಿನ್ ಅವರನ್ನು ಆಯ್ಕೆ ಮಾಡಿರುವುದು, ಅಕ್ಷರ್ ಗಿಂತ ಅಶ್ವಿನ್ ಉತ್ತಮರೇ ಎನ್ನುವ ಪ್ರಶ್ನೆ ತರಿಸಿದೆ.
ದಿನೇಶ್ ಕಾರ್ತಿಕ್ ಕ್ರಮಾಂಕ :- 2019ರಲ್ಲಿ ದಿನೇಶ್ ಕಾರ್ತಿಕ್ ಅವರು ಹೆಚ್ಚುವರಿ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಆದರೆ ಈ ಬಾರಿ ಅವರನ್ನು ಫಿನಿಷರ್ ಆಗಿ ಆಯ್ಕೆಮಾಡಿಕೊಳ್ಳಲಾಗಿದೆ. ಆದರೆ ಈಗಿರುವ ಬ್ಯಾಟಿಂಗ್ ಲೈನಪ್ ನೋಡಿದರೆ ದಿನೇಶ್ ಕಾರ್ತಿಕ್ ಅವರನ್ನು ಯಾವ ಕ್ರಮಾಂಕದಲ್ಲಿ ಅಡಿಸುತ್ತಾರೆ ಎನ್ನುವ ಪ್ರಶ್ನೆ ಸಹ ಶುರುವಾಗಿದೆ.

ಅಗ್ರ ಪಾರ್ಟ್ ಟೈಮ್ ಬೌಲರ್ ಇಲ್ಲ :- ಅಗ್ರ ಕ್ರಮಾಂಕದಲ್ಲಿ ಒಬ್ಬ ಪಾರ್ಟ್ ಟೈಮ್ ಬೌಲರ್ ಸಹ ಇಲ್ಲ. ಇದು ಭಾರತ ತಂಡಕ್ಕೆ ಹಿನ್ನಡೆ ಆಗಬಹುದು. ದೀಪಕ್ ಹೋದ ಅವರು ಪ್ಲೇಯಿಂಗ್ 11 ಗೆ ಬರುವುದು ಅನುಮಾನ ಆಗಿದೆ. ಈ ಸಮಯದಲ್ಲಿ ಐವರು ಸ್ಪಶಲಿಸ್ಟ್ ಬೌಲರ್ ಗಳು ಹಾಗೂ ಒಬ್ಬ ಪಾರ್ಟ್ ಟೈಮ್ ಬೌಲರ್ ತಂಡದಲ್ಲಿ ಇರುವುದು ಒಳ್ಳೆಯದು ಎನ್ನುವ ಚರ್ಚೆ ಶುರುವಾಗಿದೆ. ಈ ರೀತಿ ತಂಡ ಇರುವಾಗ ಪಂದ್ಯ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Comments are closed.