Neer Dose Karnataka
Take a fresh look at your lifestyle.

ಕೀರ್ತಿ ಸುರೇಶ್ ರವರ ಹಳೆಯ ಪ್ರೇಮ ಪ್ರಕರಣ ಬಯಲು?? ಖ್ಯಾತ ಹಾಸ್ಯ ಕಲಾವಿದ ಜೊತೆ ಪ್ರೀತಿಯಲ್ಲಿ ಇದ್ದರೇ ಕೀರ್ತಿ: ಯಾರು ಗೊತ್ತೇ??

2,297

ಮಹಾನಟಿ ಕೀರ್ತಿ ಸುರೇಶ್ ತಮ್ಮ ನಟನೆಯಿಂದ ಬಹಳ ಫೇಮಸ್ ಆದರು. ಸ್ಟಾರ್ ಕಿಡ್ ಆಗಿ ಎಂಟ್ರಿ ಕೊಟ್ಟರೂ ತನಗೊಂದು ವಿಶೇಷವಾದ ಐಡೆಂಟಿಟಿ ಗಳಿಸಿದ್ದಾರೆ. ಅವರ ನಟನೆಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ದಕ್ಷಿಣದ ಎಲ್ಲಾ ಭಾಷೆಗಳಲ್ಲೂ ಆಕೆಗೆ ಅಭಿಮಾನಿಗಳಿದ್ದಾರೆ. ಮೊದಮೊದಲು ಸಣ್ಣಪುಟ್ಟ ಚಿತ್ರಗಳ ಮೂಲಕ ಎಂಟ್ರಿ ಕೊಟ್ಟ ಕೀರ್ತಿ ಸುರೇಶ್, ನಂತರ ಸೂಪರ್ ಸ್ಟಾರ್ ಆಗಿ ಬೆಳೆದರು. ಈ ನಡುವೆ ಹೆಚ್ಚು ಲೇಡಿ ಓರಿಯೆಂಟೆಡ್ ಚಿತ್ರಗಳನ್ನು ಮಾಡಲು ಆಕೆಗೆ ಆಗಲಿಲ್ಲ. ದೂರುಗಳ ಸರಮಾಲೆಯಿಂದಾಗಿ ಕೀರ್ತಿ ಸುರೇಶ್ ಸಹ ಕೊಂಚ ಸಂದಿಗ್ಧಕ್ಕೆ ಸಿಲುಕಿದ್ದಾರೆ.

ಗ್ಲಾಮರ್ ಕೊರತೆಯೂ ಆಕೆಗೆ ಮೈನಸ್, ಆದರೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆಗೆ ಸರ್ಕಾರು ವಾರಿ ಪಾಟ ಸಿನಿಮಾ ಮಾಡಿ, ಗ್ಲಾಮರಸ್ ಆಗಿ ಕಾಣಿಸಿಕೊಂಡು ಹಿಟ್ ಟ್ರ್ಯಾಕ್ ಹಿಡಿದರು. ಈ ನಡುವೆ, ಕೀರ್ತಿ ಸುರೇಶ್ ಅವರಿ ತಮ್ಮ ವೃತ್ತಿಜೀವನದ ಆರಂಭದಲ್ಲಿ, ಹಾಸ್ಯನಟನನ್ನು ಪ್ರೀತಿಸುತ್ತಿದ್ದರು ಎನ್ನುವ ವಿಷಯ ಆಗಿನ ಸಮಯದಲ್ಲಿ ದೊಡ್ಡ ಚರ್ಚೆಯಾಗಿತ್ತು. ತಮಿಳು ಹಾಸ್ಯನಟ ಸತೀಶ್ ಅವರಃ ಆರಂಭದಲ್ಲಿ ಕೀರ್ತಿ ಸುರೇಶ್ ಅವರ ವೃತ್ತಿಜೀವನಕ್ಕೆ ಬೆಂಬಲ ನೀಡಿದ್ದರು. ಅದರ ಜೊತೆಗೆ ಸತೀಶ್ ಅವರೊಡನೆ ಕೀರ್ತಿ ಸುರೇಶ್ ತುಂಬಾ ಆತ್ಮೀಯಳಾಗಿದ್ದರು.

ಮೇಲಾಗಿ ಇಬ್ಬರೂ ಒಟ್ಟಿಗೆ ಹೊರಗೆ ಹೋಗುತ್ತಿದ್ದರು, ಹಲವು ಬಾರಿ ಮಾಧ್ಯಮದವರ ಎದುರಲ್ಲು ಸಿಕ್ಕಿಬಿದ್ದಿದ್ದರು. ಆದರೆ, ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎಂಬುದು ಇಂದಿಗೂ ತಿಳಿದು ಬಂದಿಲ್ಲ. ಕೀರ್ತಿ ಸುರೇಶ್ ಹಾಗೂ ಸತೀಶ್ ಅವರ ಪ್ರೇಮ ಪ್ರಕರಣವು ಆ ಸಮಯದಲ್ಲಿ ಅನೇಕ ವದಂತಿಗಳಿಗೆ ಕಾರಣವಾಗಿತ್ತು. ತಮಿಳಿನ ಸಂಗೀತ ನಿರ್ದೇಶಕ ಅನಿರುದ್ಧ್ ಅವರೊಂದಿಗೆ ಕೀರ್ತಿ ಸುರೇಶ್ ರೊಮ್ಯಾನ್ಸ್ ಮಾಡಿದ್ದಾರೆ ಎಂಬ ಗಾಸಿಪ್ ಗಳು ಸಹ ಕೇಳಿ ಬಂದಿದ್ದವು. ಆದರೆ ಇದ್ಯಾವುದಕ್ಕೂ ಕೀರ್ತಿ ಸುರೇಶ್ ಪ್ರತಿಕ್ರಿಯೆ ನೀಡಿಲ್ಲ

Leave A Reply

Your email address will not be published.