Neer Dose Karnataka
Take a fresh look at your lifestyle.

ಸಾಮಾನ್ಯವಾಗ ಬುದ್ದಿವಂತರಾಗಿರುವವರು ಯಾಕೆ ಒಂಟಿಯಾಗಿರುತ್ತಾರೆ ಗೊತ್ತೇ?? ಎಲ್ಲರಿಂದ ಇವರು ದೂರವಿರುವುದು ಯಾಕೆ ಗೊತ್ತೇ??

ನೀವು ಗಮನಿಸಿದ್ದರೆ, ಬುದ್ಧಿವಂತ ವ್ಯಕ್ತಿಗಳು ಯಾವಾಗಲೂ ಒಂಟಿಯಾಗಿರಲು ಬಯಸುತ್ತಾರೆ. ಸ್ವಲ್ಪ ವಿಚಿತ್ರವಾಗಿಯೂ ನಡೆದುಕೊಳ್ಳುತ್ತಾರೆ. ಜನರ ಜೊತೆಗೆ ಹೆಚ್ಚು ಮಾತನಾಡುವುದರಿಂದ ಸಮಯ ಹರಣ ಆಗುತ್ತದೆ, ಅದರ ಬದಲಾಗಿ ಕೆಲಸ ಮಾಡಬಹುದು. ಇವರು ಹೆಚ್ಚಿನ ಸಮಯವನ್ನು ಏಕಾಂಗಿಯಾಗಿ ಕಳೆದು, ಜ್ಞಾನ ಹೆಚ್ಚಿಸಿಕೊಳ್ಳಲು ತಲ್ಲೀನರಾಗಿರುತ್ತಾರೆ. ಬುದ್ಧಿವಂತರು ಹೆಚ್ಚಾಗಿ ಒಬ್ಬಂಟಿಯಾಗಿ ಸಮಯ ಕಳೆಯಲು ಕಾರಣ ಏನು ಎಂದು ತಿಳಿಸುತ್ತೇವೆ ನೋಡಿ..

*ಬುದ್ಧಿವಂತರು ಹೆಚ್ಚಾಗಿ ಪ್ರೊಡಕ್ಟಿವಿಟಿ ಬಗ್ಗೆ ಯೋಚನೆ ಮಾಡುತ್ತಾರೆ. ಜನರ ಜೊತೆಗೆ ಮಾತಾನಾಡಿ ಸಮಯ ಕಳೆಯುವುದಕ್ಕಿಂತ, ಅದೇ ಸಮಯದಲ್ಲಿ ಕೆಲಸ ಮಾಡಿದರೆ, ಹಣ ಸಂಪಾದನೆ ಮಾಡಬಹುದು, ಜೊತೆಗೆ ಜ್ಞಾನವನ್ನು ಸಹ ಹೆಚ್ಚಿಸಬಹುದು ಎಂದು ಯೋಚನೆ ಮಾಡುತ್ತಾರೆ. ಅವರ ಹಾಗೆ ಕೆಲಸ ಮಾಡುವ ಜನರ ಜೊತೆಗೆ ಕೆಲಸ ಮಾಡಲು ಇಷ್ಟಪಡುತ್ತಾರೆ.
*ಬುದ್ಧಿವಂತ ಜನರು ಸಾಮಾನ್ಯ ಜನರಿಗಿಂತ ವಿಭಿನ್ನವಾದ ದೃಷ್ಟಿಕೋನ ಹೊಂದಿರುತ್ತಾರೆ. ಒಂಟಿಯಾಗಿ ಸಮಯ್ ಕಳೆಯುತ್ತಾರೆ. ಬುದ್ಧಿವಂತರಿಗೆ ಕೆಲಸಗಳ ಬಗ್ಗೆ ಹೆಚ್ಚು ಕುತೂಹಲ ಇರುತ್ತದೆ. ಹಾಗಾಗಿ ಅವರು ವಿಭಿನ್ನವಾದ ದೃಷ್ಟಿಕೋನ ಹೊಂದಿರುತ್ತಾರೆ. ಹಾಗೂ ಅದೇ ರೀತಿ ಯೋಚನೆ ಮಾಡುತ್ತಾರೆ. ಹಾಗೆಯೇ ಬ್ರಹ್ಮಾಂಡದ ಜೊತೆಗೆ ಸಂಪರ್ಕ ಹೊಂದಿರುತ್ತಾರೆ.
*ಬುದ್ಧಿವಂತರು ಯಾವುದಾದರೂ ಒಂದು ವಿಷಯದ ಬಗ್ಗೆ ಯೋಜನೆ ರೂಪಿಸಿದೆ ಸುಖಾಸುಮ್ಮನೆ ಮಾಡುವುದಿಲ್ಲ, ಆ ವಿಷಯದ ಬಗ್ಗೆ ಬಹಳ ಯೋಚನೆ, ತರ್ಕಿಸಿ ಮುನ್ನುಗ್ಗುತ್ತಾರೆ. ಅವರ ಲೆಕ್ಕಾಚಾರ ಪಕ್ಕಾ ಆಗಿರುತ್ತದೆ. ಹಾಗಾಗಿ ಏಕಾಂಗಿಯಾಗಿ ಯೋಜನೆ ಮಾಡುವುದರಿಂದ ಯಶಸ್ಸು ಗಳಿಸುತ್ತಾರೆ.

*ಬುದ್ಧಿವಂತ ಜನರು ಬೇರೆಯವರಿಗಿಂತ ವಿಭಿನ್ನವಾಗಿ ಇರಲು ಬಯಸುತ್ತಾರೆ. ಜನರು ಅವರನ್ನು ವಿಚಿತ್ರ ವ್ಯಕ್ತಿ, ಒಬ್ಬಂಟಿ ಎಂದು ಕರೆದರು ಸಹ ಅವರು ಅದರ ಬಗ್ಗೆ ಯೋಚನೆ ಮಾಡುವುದಿಲ್ಲ. ಒಬ್ಬಂಟಿಯಾಗಿ ಇರುವುದನ್ನೇ ಅವರು ಇಷ್ಟಪಡುತ್ತಾರೆ.
*ಬುದ್ಧಿವಂತರಲ್ಲಿ ಸೃಜನಶೀಲತೆ ಹೆಚ್ಚಾಗಿರುತ್ತದೆ. ಏಕಾಂಗಿಯಾಗಿ ಇರುವುದರಿಂದಲೇ ಅವರು ಸೃಜನಶೀಲರಾಗಿರಲು ಸಾಧ್ಯ ಎಂದು ಹೇಳುತ್ತಾರೆ. ಒಂದು ವಿಚಾರದ ಬಗ್ಗೆ ಎಲ್ಲಾ ರೀತಿಯಲ್ಲೂ ಅವರು ಚಿಂತನೆ ಮಾಡುತ್ತಾರೆ.
*ಬುದ್ಧಿವಂತರು ಒಬ್ಬಂಟಿಯಾಗಿ ಇರುತ್ತಾರೆ ಎಂದ ಮಾತ್ರಕ್ಕೆ ಅವರು ಇತರರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಜೊತೆಯಲ್ಲಿ ಇರುವವರ ಬಗ್ಗೆ ಹೆಚ್ಚಿನ ಕಾಳಜಿಯನ್ನು ಸಹ ವಹಿಸುತ್ತಾರೆ.

*ಬುದ್ಧಿವಂತರು ಕೆಲಸದ ಬಗ್ಗೆ ಮತ್ತು ಜ್ಞಾನದ ಬಗ್ಗೆ ಯೋಚನೆ ಮಾಡುತ್ತಾರೆಯೇ ಹೊರತು, ಸಮಾಜ ತಮ್ಮ ಬಗ್ಗೆ ಏನೆಂದುಕೊಳ್ಳುತ್ತದೆ ಎಂದು ಯೋಚನೆ ಮಾಡುವುದಿಲ್ಲ. ಸಮಾಜದಲ್ಲಿ ತಮಗೆ ಗೌರವ ಸಿಗಬೇಕು ಎಂದು ಅವರು ಬಯಸುವುದಿಲ್ಲ. ನೆಗಟಿವ್ ಆಗಿ ಮಾತನಾಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
*ಪುಸ್ತಕ ಓದುವುದರಿಂದ ಬುದ್ಧಿಶಕ್ತಿ ಹೆಚ್ಚುತ್ತದೆ. ಸಾಮಾನ್ಯ ಜ್ಞಾನ ಸಹ ಹೆಚ್ಚಾಗುತ್ತದೆ. ಬುದ್ಧಿವಂತರು ಹೆಚ್ಚಾಗಿ ಹೆಚ್ಚು ಓದಿ ಹೆಚ್ಚು ಜ್ಞಾನ ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಆಲೋಚನೆ ಮಾಡುತ್ತಾರೆ. ಸಂಸ್ಕೃತ, ಇತಿಹಾಸ, ಹಾಗೂ ಪ್ರಪಂಚದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಬಯಸುತ್ತಾರೆ.

Comments are closed.