Neer Dose Karnataka
Take a fresh look at your lifestyle.

ವಿರಾಟ್ ಕೊಹ್ಲಿ ರವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಷಾಕಿಂಗ್ ಹೇಳಿಕೆ ನೀಡಿದ ನಾಯಕ ರೋಹಿತ್ ಶರ್ಮ. ಹೇಳಿದ್ದೇನು ಗೊತ್ತೇ??

ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಯಶಸ್ಸು ಗಳಿಸಿರುವ ವಿರಾಟ್ ಕೋಹ್ಲಿ ಅವರು ವೈಫಲ್ಯದ ಕಾರಣದಿಂದ ಇಂಗ್ಲೆಂಡ್ ಪಂದ್ಯಗಳ ಬಳಿಕ ಒಂದು ತಿಂಗಳ ವಿಶ್ರಾಂತಿ ಪಡೆದಿದ್ದರು. ವಿಶ್ರಾಂತಿ ಬಳಿಕ ಇದೀಗ ವಿರಾಟ್ ಕೋಹ್ಲಿ ಅವರು ಭಾರತ ಕ್ರಿಕೆಟ್ ತಂಡಕ್ಕೆ ಮರಳಿ ಬಂದಿದ್ದಾರೆ. ಆಗಸ್ಟ್ 27ರಿಂದ ಶುರುವಾಗಲಿರುವ ಏಷ್ಯಾಕಪ್ ಪಂದ್ಯಗಳಿಗೆ ವಿರಾಟ್ ಕೋಹ್ಲಿ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಕಳಪೆ ಫಾರ್ಮ್ ಇಂದ ಹೊರಬಂದು, ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳಲು ವಿರಾಟ್ ಕೋಹ್ಲಿ ಅವರಿಗೆ ಇದೊಂದು ಉತ್ತಮವಾದ ಅವಕಾಶ ಆಗಿದೆ.

ಆಗಸ್ಟ್ 28ರಂದು ನಡೆಯಲಿರುವ ಭಾರತ ವರ್ಸಸ್ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಕೋಹ್ಲಿ ಅವರು ಆಡಲಿದ್ದು, ವಿರಾಟ್ ಕೋಹ್ಲಿ ಅವರು ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎನ್ನುವ ಬಗ್ಗೆ ಈಗ ಚರ್ಚೆ ಶುರುವಾಗಿದೆ. ವಿರಾಟ್ ಕೋಹ್ಲಿ ಅವರು ಆರಂಭಿಕ ಬ್ಯಾಟ್ಸ್ಮನ್ ಆಗಿ ಆಡುತ್ತಾರಾ ಅಥವಾ ಮೂರನೇ ಕ್ರಮಾಂಕದಲ್ಲಿ ಆಡುತ್ತಾರಾ ಎನ್ನುವ ಪ್ರಶ್ನೆ ಶುರುವಾಗಿದ್ದು, ಇದರ ಬಗ್ಗೆ ರೋಹಿತ್ ಶರ್ಮಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ವಿರಾಟ್ ಕೋಹ್ಲಿ ಅವರು ಮರಳಿ ಭಾರತ ತಂಡಕ್ಕೆ ಬಂದಿರುವುದು ಸಂತೋಷ ಇದೆ. ವಿರಾಟ್ ಅವರು ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎನ್ನುವ ಬಗ್ಗೆ ಮ್ಯಾನೇಜ್ಮೆಂಟ್ ನಿರ್ಧಾರ ತೆಗೆದುಕೊಳ್ಳುತ್ತದೆ.

ನನ್ನ ಜೊತೆ ಆರಂಭಿಕ ಆಟಗಾರನಾಗಿ ಕೆ.ಎಲ್.ರಾಹುಲ್ ಇರುತ್ತಾರಾ ಅಥವಾ ವಿರಾಟ್ ಕೋಹ್ಲಿ ಅವರು ಆಡುತ್ತಾರಾ ಎನ್ನುವ ತೀರ್ಮಾನವನ್ನು ಮ್ಯಾನೇಜ್ಮೆಂಟ್ ತೆಗೆದುಕೊಳ್ಳಬೇಕು. ವಿರಾಟ್ ಕೋಹ್ಲಿ ಅವರು ಪಾಕಿಸ್ತಾನದ ಆಟಗಾರರಿಗೆ ಸವಾಲು ನೀಡಲು, ಅವರಿಗೆ ಇಷ್ಟವಾದ ಮೂರನೇ ಕ್ರಮಾಂಕದಲ್ಲಿ ಆಡುವುದೇ ಒಳ್ಳೆಯದು. ಆದರೆ ಮ್ಯಾನೇಜ್ಮೆಂಟ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕು. ಪಂದ್ಯ ಶುರುವಾಗಲು ಇನ್ನು ತುಂಬಾ ಸಮಯ ಇದೆ. ಅಲ್ಲಿಯವರೆಗೂ ಎಲ್ಲವನ್ನೂ ನೋಡಿ, ನಿರ್ಧಾರ ತೆಗೆದುಕೊಳ್ಳುತ್ತಾರೆ..” ಎಂದು ಹೇಳಿದ್ದಾರೆ ರೋಹಿತ್ ಶರ್ಮಾ.

Comments are closed.