Neer Dose Karnataka
Take a fresh look at your lifestyle.

ಸೋನು ಗೌಡ ಮನೆಯಲ್ಲಿ ಸೇಫ್ ಆಗಲು ಅದೊಂದೇ ಕಾರಣವಾಗುತ್ತಾ? ಜನ ಹೊರಗಡೆ ಕಳುಹಿಸಿದರೂ ಕೂಡ ಅದೊಂದು ಕಾರಣಕ್ಕೆ ಉಳಿಯುತ್ತಾರೆಯೇ??

52

ಬಿಗ್ ಬಾಸ್ ಶೋ ಶುರುವಾದರೆ ಮನೆಯ ಒಳಗಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಕೊಡುವ ಟಾಸ್ಕ್ ಗಳ ಹಬ್ಬವಾದರೆ, ಹೋರಾಗಿರುವವರಿಗೆ ಮನರಂಜನೆ ಅದ್ಧೂರಿಯಾಗಿರುತ್ತದೆ. ಪ್ರತಿ ಎಪಿಸೋಡ್ ನಲ್ಲೂ ಒಂದಲ್ಲ ಒಂದು ವಿಚಾರ ಚರ್ಚೆಗೆ ಒಳಗಾಗುವುದು ಮತ್ತು ಟ್ರೋಲ್ ಆಗುತ್ತಲೇ ಇರುತ್ತದೆ. ಇನ್ನು ಹೆಚ್ಚಾಗಿ ಚರ್ಚೆಯಾಗುವ ವಿಚಾರಗಳಲ್ಲಿ ಒಂದು ನಾಮಿನೇಷನ್ ಮತ್ತು ಎಲಿಮಿನೇಷನ್ ಪ್ರಕ್ರಿಯೆಗಳು. ಬಿಗ್ ಬಾಸ್ ಮನೆಯ ವಾಸದ ಮೊದಲ ವಾರದಲ್ಲಿ 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನೋಡಿದರೆ, ಸೋನು ಗೌಡ ಈ ವಾರ ಮನೆಯಿಂದ ಹೊರಹೋಗುತ್ತಾರೆ ಎನ್ನುವ ಅಭಿಪ್ರಾಯ ಶುರುವಾಗಿದೆ. ಸೋನು ಗೌಡ ಮೇಲೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತವಾಗಿದೆ, ಆದರೆ ಸೋನು ಗೌಡ ಮನೆಯಲ್ಲಿರಲು ಬೇಕಾದ ಎಲ್ಲವನ್ನು ಮಾಡುತ್ತಿದ್ದಾರೆ, ನಾವೆಲ್ಲರೂ ನೋಡಿರುವ ಹಾಗೆ ಈಗಾಗಲೇ ಮೊದಲ ವಾರದಲ್ಲೇ ಸೋನು ಗೌಡ ಮನೆಯ ಕೆಲವು ಸ್ಪರ್ಧಿಗಳ ಜೊತೆಗೆ ಜಗಳ ಆಡಿದ್ದಾರೆ. ಸ್ಪೂರ್ತಿ ಗೌಡ ಅವರ ಜೊತೆಗೆ ಸಣ್ಣದೊಂದು ವಿಚಾರಕ್ಕೆ ದೊಡ್ಡದಾಗಿ ಜಗಳ ಆಡಿದರು.

ಇನ್ನು ಗುರೂಜಿ ಅವರ ಜೊತೆಗೆ ಮೊಟ್ಟೆ ವಿಚಾರಕ್ಕೆ ಜಗಳ ಆಡಿದರು. ಟಾಸ್ಕ್ ನಡೆಯುವ ಸಮಯದಲ್ಲಿ ಕೂಡ ಜೋರಾಗಿ ಕೂಗಾಡಿ ತಾನು ಯಾರ ಮಾತನ್ನು ಕೇಳುವುದಿಲ್ಲ ಟಾಸ್ಕ್ ಮಾಡುತ್ತೇನೆ ಎನ್ನುವ ಹಾಗೆ ಮಾತನಾಡಿದರು. ಈ ಜಗಳದ ಕಾರಣಗಳಿಂದಲೇ ಸೋನು ಮನೆಯಿಂದ ಹೊರಹೋಗಬಹುದು, ಅಥವಾ ಜನರಿಗೂ ಈ ರೀತಿಯ ಕಂಟೆಂಟ್ ಇಷ್ಟ ಆಗುವ ಕಾರಣ, ಜಗಳದ ಕಾರಣದಿಂದಲೇ ಎಲಿಮಿನೇಟ್ ಆಗದೆ ಮನೆಯಲ್ಲೇ ಉಳಿದುಕೊಳ್ಳಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಮನೆಯಿಂದ ಹೊರಬರುವ ಮೊದಲ ಸ್ಪರ್ಧಿ ಯಾರು ಎನ್ನುವುದನ್ನು ತಿಳಿಯಲು ನಾಳೆಯ ವರೆಗೂ ಕಾಯಬೇಕಿದೆ.

Leave A Reply

Your email address will not be published.