Neer Dose Karnataka
Take a fresh look at your lifestyle.

ಲವ್ ಅಫೇರ್ ಗಳಿಂದ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡ ಟಾಪ್ ನಟಿಯರು ಯಾರ್ಯಾರು ಗೊತ್ತೇ?? ಲಿಸ್ಟ್ ನಲ್ಲಿ ಯಾರ್ಯಾರು ಇದ್ದಾರೆ ಗೊತ್ತೇ??

8,405

ಪ್ರೀತಿ ಎನ್ನುವ ಎರಡು ಅಕ್ಷರಗಳ ಪದ, ಒಬ್ಬ ಮನುಷ್ಯನನ್ನು ಏನು ಬೇಕಾದರೂ ಮಾಡಬಹುದು. ಪ್ರೀತಿ ಮಾಡಿ, ಅದರ ಇನ್ಸ್ಪಿರೇಷನ್ ಇಂದ ಜೀವನದಲ್ಲಿ ಸಾಧನೆ ಮಾಡಿದವರು ಇದ್ದಾರೆ, ಆದರೆ ಅದೇ ಪ್ರೀತಿ ಕೈಕೊಟ್ಟು ಜೀವನ ಹಾಳುಮಾಡಿಕೊಂಡವರು ಸಹ ಇದ್ದಾರೆ. ಹಣವಂತರು, ಬಡವರು ಎನ್ನುವ ಯಾವ ಅಂಶವನ್ನು ಸಹ ನೋಡದೆ ಪ್ರೀತಿ ಎನ್ನುವುದು ಎಲ್ಲರನ್ನು ಆವರಿಸುತ್ತದೆ. ಈ ಪ್ರೀತಿಯ ಬಲೆಗೆ ಬಿದ್ದು, ಕೆಲವು ಸಿನಿಮಾ ನಟಿಯರು ತಮ್ಮ ಜೀವನವನ್ನೇ ಕಳೆದುಕೊಂಡಿದ್ದಾರೆ. ಆ ನಟಿಯರು ಯಾರು, ಅವರ ಜೀವನದಲ್ಲಿ ಆಗಿದ್ದಾದರು ಏನು? ತಿಳಿಸುತ್ತೇವೆ ನೋಡಿ..

ಮೋನಲ್ :- ಇವರು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಸಿಮ್ರನ್ ಅವರ ತಂಗಿ. ಇವರು ಕೂಡ ಅಕ್ಕನ ಹಾಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿದ್ದರು. ಒಬ್ಬ ಕೋರಿಯಿಗ್ರಾಫರ್ ಅನ್ನು ಪ್ರೀತಿಸುತ್ತಿದ್ದ ಮೋನಲ್, ಆತ ಮಾಡಿದ ಮೋಸದಿಂದ ಖಿನ್ನತೆಗೆ ಒಳಗಾಗಿ ಪ್ರಾಣವನ್ನೇ ಕಳೆದುಕೊಂಡರು.
ಜಿಯಾ ಖಾನ್ :- ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎಂದು ಅಮೆರಿಕಾ ಇಂದ ಭಾರತಕ್ಕೆ ಬಂದ ನಟಿ ಇವರು, ಜಿಯಾ ಖಾನ್ ಬಾಲಿವುಡ್ ನಲ್ಲಿ ಸಕ್ರಿಯರಾಗಿದ್ದರು. ಹಿರಿಯನಟ ಪಂಚೋಲಿ ಅವರ ಮಗ ಸೂರಜ್ ಪಂಚೋಲಿ ಅವರನ್ನು ಪ್ರೀತಿಸುತ್ತಿದ್ದ ಜಿಯಾ ಖಾನ್, ಆತನಿಂದ ಆದ ಮೋಸಕ್ಕೆ ಪ್ರಾಣವನ್ನೇ ಕಳೆದುಕೊಂಡರು.

ಪ್ರತ್ಯುಶ ಬ್ಯಾನರ್ಜಿ :- ಹಿಂದಿಯಲ್ಲಿ ಬಹಳ ಖ್ಯಾತಿ ಹೊಂದಿದ್ದ ಬಾಲಿಕ ವಧು ಧಾರವಾಹಿ ಖ್ಯಾತಿಯ ನಟಿ ಪ್ರತ್ಯುಷಾ, ತಮ್ಮ ಜೊತೆಗೆ ನಟಿಸುತ್ತಿದ್ದ ರಾಹುಲ್ ರಾಜ್ ಅವರನ್ನು ಪ್ರೀತಿ ಮಾಡುತ್ತಿದ್ದರು. ಆದರೆ ಆ ಪ್ರೀತಿ ಇವರಿಗೆ ಸಂತೋಷ ನೀಡದ ಕಾರಣ, ಹೆಚ್ಚು ತೊಂದರೆಗಳು ಆಗಿ, ಪ್ರಾಣವನ್ನೇ ಕಳೆದುಕೊಂಡರು.
ಫಟಾಫಟ್ ಜಯಲಕ್ಷ್ಮಿ :- ಇವರು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ, ಸ್ಟಾರ್ ಹೀರೋಯಿನ್ ಆಗಿದ್ದ ನಟಿ. ಅದಾಗಲೇ ಮದುವೆ ಆಗಿದ್ದರು, ಮತ್ತೊಬ್ಬ ನಟನ ಪ್ರೀತಿಯಲ್ಲಿ ಬಿದ್ದು ಕೊನೆಗೆ ತಮ್ಮ ಪ್ರಾಣವನ್ನೇ ಕಳೆದುಕೊಂಡರು ಫಟಾಫಟ್ ಜಯಲಕ್ಷ್ಮಿ. ಶೋಭಾ :- ತಮಿಳು ಚಿತ್ರರಂಗದಲ್ಲಿ ಬಹಳ ಫೇಮಸ್ ಆಗಿದ್ದವರು ನಟಿ ಶೋಭಾ. ಬಹಳ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ನಿರ್ದೇಶಕ ಬಾಲು ಮಹೇಂದ್ರ ಅವರೊಡನೆ 17ನೇ ವಯಸ್ಸಿಗೆ ಮದುವೆಯಾದರು. ಗಂಡನಿಗೆ ಅಕ್ರಮ ಸಂಬಂಧ ಎಂದು ಅರಿತು, ಮಾನಸಿಕವಾಗಿ ಕುಗ್ಗಿಹೋದ ಇವರು ಪ್ರಾಣ ಕಳೆದುಕೊಂಡರು.

Leave A Reply

Your email address will not be published.