Neer Dose Karnataka
Take a fresh look at your lifestyle.

ಮೊದಲ ವಾರವೇ ಮನೆಯಿಂದ ಔಟ್ ಆದ ವಿವಾದಿತ ಸೆಲೆಬ್ರೆಟಿ: ಜನ ಬೇಡ ಎಂದು ಹೊರದಬ್ಬುತ್ತಿರುವುದು ಯಾರನ್ನು ಗೊತ್ತೇ?? ಕೊನೆಗೂ ಹೋಗುತ್ತಿದ್ದಿಯ ಹೋಗು ಎಂದ ಜನ.

ಬಿಗ್ ಬಾಸ್ ಕನ್ನಡ ಓಟಿಟಿ ಶೋ ಈಗ ಹೊಸ ಹೊಸ ಕುತೂಹಲ ವಿಚಾರಗಳಿಂದ ಸುದ್ದಿಯಾಗುತ್ತಲೇ ಇದೆ. ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ರೋಚಕತೆಯಿಂದ ಸಾಗಿದೆ. ಲವ್ ಸ್ಟೋರಿಗಳು ಶುರುವಾಗಿದೆ. ಜಗಳಗಳು ನಡೆದಿದೆ. ಮೊದಲ ಟಾಸ್ಕ್ ಅನ್ನು ಸ್ಪರ್ಧಿಗಳು ಚೆನ್ನಾಗಿ ಪೂರ್ತಿಗೊಳಿಸಿದ್ದಾರೆ. ಇದೀಗ ವೀಕೆಂಡ್ ಬಂದಿದ್ದು ಎಲಿಮಿನೇಷನ್ ಚಿಂತೆ ಶುರುವಾಗಿದೆ. ಮೊದಲ ವಾರ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು ಎನ್ನುವ ಚರ್ಚೆ ಶುರುವಾಗಿದ್ದು, ಹೊರಹೋಗುವ ಸ್ಪರ್ಧಿ ಇವರೇ ಎನ್ನುತ್ತಿದ್ದಾರೆ ನೆಟ್ಟಿಗರು.

ಮೊದಲ ವಾರ ಆರ್ಯವರ್ಧನ್ ಗುರೂಜಿ ಮತ್ತು ಸೋನು ಶ್ರೀನಿವಾಸ್ ಗೌಡ ಡೈರೆಕ್ಟ್ ಆಗಿ ನಾಮಿನೇಟ್ ಆಗಿದ್ದಾರೆ. ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಗೆ ಹೋದಾಗಿನಿಂದಲೂ ಆಕೆಯ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ನೆಟ್ಟಿಗರು. ಈ ಹಿಂದೆ ಕೂಡ ಸೋನು ಸಿಕ್ಕಾಪಟ್ಟೆ ಟ್ರೋಲ್ ಸಹ ಆಗಿದ್ದಾರೆ. ಇದೀಗ ಮೊದಲ ವಾರ ಜನರು ಹೊರಗೆ ಕಳಿಸುವುದು ಸೋನು ಅವರನ್ನೇ ಎನ್ನುವ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಸೋನು ಬಿಗ್ ಬಾಸ್ ಮನೆಯಲ್ಲಿ ಇರಬಾರದು ಎಂದು ಮೊದಲ ದಿನದಿಂದಲೇ ವಿರೋಧ ವ್ಯಕ್ತವಾಗುತ್ತಿದೆ.

ಅದೇ ರೀತಿ ಜನರು ಈ ಬಾಯಿ ಮನೆಯಿಂದ ಹೊರಗೆ ಕಳಿಸಿರುವುದು ಸಹ ಸೋನು ಅವರನ್ನೇ ಎನ್ನುವ ಚರ್ಚೆ ಹಜ್ಯ್ ಮಾತುಗಳು ಕೇಳಿ ಬರುತ್ತಿದೆ. ಆದರೆ ಇದು ನಿಜವೋ ಸುಳ್ಳೋ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇಂದು ಕಿಚ್ಚನ ಪಂಚಾಯಿತಿ ನಡೆಯಲಿದ್ದು, ಇಂದು ಸಂಜೆ ಮನೆಯಿಂದ ಹೊರಬಂದ ಸದಸ್ಯರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಅಲ್ಲಿಯವರೆಗೂ ವೀಕ್ಷಕರು ಕಾಯಬೇಕು. ಜನರು ಹೇಳುತ್ತಿರುವ ಹಾಗೆ ಸೋನು ಗೌಡ ಅವರಿಗೆ ವೋಟ್ ಮಾಡದೆ ಅವರನ್ನು ಮನೆಯಿಂದ ಹೊರಗೆ ಕಳಿಸುತ್ತಾರಾ ಎಂದು ಕಾದು ನೋಡಬೇಕಿದೆ.

Comments are closed.