Neer Dose Karnataka
Take a fresh look at your lifestyle.

ಬುಮ್ರಾ, ಹರ್ಷಲ್ ನಂತರ ಭಾರತಕ್ಕೆ ಮತ್ತೊಂದು ಶಾಕ್: ವಿಶ್ವಕಪ್ ಗು ಮುನ್ನವೇ ಬಲಾಢ್ಯ ಆಟಗಾರ ಔಟ್. ಯಾರಿಗೆ ಏನಾಗಿದೆ ಗೊತ್ತೇ??

57

ಕ್ರಿಕೆಟ್ ಪ್ರಿಯರು ಸಧ್ಯಕ್ಕೆ ಭಾರಿ ನಿರೀಕ್ಷೆ ಇಟ್ಟುಕೊಂಡಿರುವುದು ಏಷ್ಯಾಕಪ್ ಪಂದ್ಯಗಳು ಮತ್ತು ಟಿ20 ವಿಶ್ವಕಪ್ ಪಂದ್ಯಗಳ ಬಗ್ಗೆ. ಈ ತಿಂಗಳ ಕೊನೆಯಲ್ಲಿ ಏಷ್ಯಾಕಪ್ ಪಂದ್ಯಗಳು ಶುರುವಾಗಲಿದೆ. ಹಾಗೆಯೇ, ಆಕ್ಟೊಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ. ಆಗಸ್ಟ್ 28ರಿಂದ ಭಾರತ ವರ್ಸಸ್ ಪಾಕಿಸ್ತಾನ್ ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ. ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗುವ ಮೊದಲೇ, ಭಾರತ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ತಂಡದಿಂದ ಹೊರ ಹೋಗಿದ್ದಾರೆ.

ಭಾರತ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ವಾಷಿಂಗ್ಟನ್ ಸುಂದರ್, ಐಪಿಎಲ್ ನಲ್ಲಿ ಸಹ ಉತ್ತಮವಾದ ಪ್ರದರ್ಶನ ನೀಡುತ್ತಿದ್ದ ಪ್ಲೇಯರ್, ಟಿ20 ವಿಶ್ವಕಪ್ ಪಂದ್ಯಗಳಿಗೆ ಆಯ್ಕೆಯಾಗಿಲ್ಲ. ಪಂದ್ಯಗಳು ಶುರುವಾಗುವ ಮೊದಲೇ ವಾಷಿಂಗ್ಟನ್ ಸುಂದರ್ ಅವರನ್ನು ಟಿ20 ವಿಶ್ವಕಪ್ ಪಂದ್ಯಗಳಿಗೆ ಆಯ್ಕೆ ಮಾಡಲು ಆಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ ಎಂದು ವರಡಿಯಾಗಿದೆ. ವಾಷಿಂಗ್ಟನ್ ಸುಂದರ್ ಅವರು, ದೈಹಿಕವಾಗಿ ಇನ್ನು ಫಿಟ್ ಆಗಬೇಕು ಎನ್ನುವ ಕಾರಣಕ್ಕೆ ಅವರನ್ನು ಟಿ20 ವಿಶ್ವಕಪ್ ಪಂದ್ಯಗಳಿಗೆ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.

ಇಷ್ಟೇ ಅಲ್ಲದೆ, ವಾಷಿಂಗ್ಟನ್ ಸುಂದರ್ ಅವರನ್ನು ಏಷ್ಯಾಕಪ್ ಪಂದ್ಯಗಳಿಗೂ ಸಹ ಆಯ್ಕೆ ಮಾಡಿಲ್ಲ. ಈಗಾಗಲೇ ಏಷ್ಯಾಕಪ್ ಪಂದ್ಯಗಳಿಗೆ ರೋಹಿತ್ ಶರ್ಮಾ ನಾಯಕತ್ವದ 15 ಪ್ಲೇಯರ್ ಗಳ ತಂಡವನ್ನು ಬಿಸಿಸಿಐ ಈಗಾಗಲೇ ಬಿಡುಗಡೆ ಮಾಡಿದ್ದು, ಅದರಲ್ಲಿ ವಾಷಿಂಗ್ಟನ್ ಸುಂದರ್ ಅವರು ಇಲ್ಲ. ಟಿ20 ವಿಶ್ವಕಪ್ ಪಂದ್ಯಗಳಿಗೆ ಇವರ ಬದಲಾಗಿ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡುವ ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ, ಹಾಗೆಯೇ ಏಷ್ಯಾಕಪ್ ಪಂದ್ಯಗಳಿಗೂ ಸಹ ರವಿಚಂದ್ರನ್ ಅಶ್ವಿನ್ ಆಯ್ಕೆಯಾಗಿದ್ದಾರೆ.

Leave A Reply

Your email address will not be published.