Neer Dose Karnataka
Take a fresh look at your lifestyle.

ಮೈದಾನದಲ್ಲಿ ಮಿಂಚುವ ಡೆಲ್ಲಿ ಆಟಗಾರರ ಪತಿಯರು ಹಾಗೂ ಗರ್ಲ್ ಫ್ರೆಂಡ್ ಗಳು ಹೇಗಿದ್ದಾರೆ ಗೊತ್ತೇ?? ಒಬ್ಬೊಬ್ಬರು ಟಾಪ್ ನಟಿಯರಂತೆ ಕಾಣುತ್ತಾರೆ.

ನಮಸ್ಕಾರ ಸ್ನೇಹಿತರೇ ಐಪಿಎಲ್ ಪ್ರಾರಂಭವಾದರೆ ಸಾಕು ಎಲ್ಲರೂ ಕೂಡ ಕ್ರಿಕೆಟ್ ಲೋಕದ ಈ ಮಹಾ ಹಬ್ಬವನ್ನು ನೋಡಲು ಕಾತರರಾಗಿ ಕುಳಿತಿರುತ್ತಾರೆ. ಇನ್ನು ಕೇವಲ ಕ್ರಿಕೆಟಿಗರು ಮಾತ್ರವಲ್ಲದೆ ಈ ಸಂದರ್ಭದಲ್ಲಿ ಅವರ ಪತ್ನಿಯರು ಅಥವಾ ಗೆಳತಿಯರು ಕೂಡ ಕಾಣಸಿಗುತ್ತಾರೆ. ಇಂದಿನ ವಿಚಾರದಲ್ಲಿ ನಾವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟಿಗರು ಸುಂದರ ಪತ್ನಿಯರು ಅಥವಾ ಗೆಳತಿಯರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹಾಗಿದ್ದರೆ ಈ ಲಿಸ್ಟಿನಲ್ಲಿ ಯಾವೆಲ್ಲಾ ಕ್ರಿಕೆಟಿಗರ ಪತ್ನಿಯರು ಅಥವಾ ಗೆಳತಿಯರು ಕಾಣಸಿಗುತ್ತಾರೆ ಎಂಬುದನ್ನು ನೋಡೋಣ ಬನ್ನಿ.

ರಿಷಬ್ ಪಂತ್; ರಿಷಬ್ ಪಂತ್ ರವರು ಮದುವೆಯಾಗಿಲ್ಲ ಆದರೆ ಅವರಿಗೆ ಇಶಾ ನೆಗಿ ಎನ್ನುವ ಗರ್ಲ್ ಫ್ರೆಂಡ್ ಇದ್ದಾಳೆ ಎಂಬುದು ಅವರು ಹಾಗೂ ಆಕೆ ಪೋಸ್ಟ್ ಮಾಡಿರುವಂತಹ ಇಂತಹ ಪೋಸ್ಟ್ ಮೂಲಕ ತಿಳಿದು ಬಂದಿದೆ. ಇನ್ನು ರಿಷಬ್ ಪಂತ್ ರವರು ಯಾವುದೇ ಪಂದ್ಯಗಳನ್ನು ಸ್ಟೇಡಿಯಂಗೆ ಆಕೆ ಬಂದು ನೋಡಿಲ್ಲ. ಮೂಲಗಳ ಪ್ರಕಾರ ಇಂಟೀರಿಯರ್ ಡಿಸೈನರ್ ಆಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಾರ್ಟ್ಜೆ; ಸೌತ್ ಆಫ್ರಿಕಾ ಮೂಲದ ವೇಗಿಯಾಗಿರುವ ನಾರ್ಟ್ಜೆ ಹಲವಾರು ವರ್ಷಗಳ ಕಾಲ ಡೇಟ್ ಮಾಡಿದ ನಂತರ ಮಿಖೈಲಾ ಕ್ಲೀವ್ ರವರನ್ನು ಮದುವೆಯಾಗುತ್ತಾರೆ. ನಾರ್ಟ್ಜೆ ರವರ ಪತ್ನಿ ಪ್ರೊಫೆಷನಲ್ಲಿ ಟೀಚರ್ ಆಗಿರುತ್ತಾರೆ.

ಡೇವಿಡ್ ವಾರ್ನರ್; ಆಸ್ಟ್ರೇಲಿಯಾದ ಓಪನರ್ ಆಗಿರುವ ಡೇವಿಡ್ ವಾರ್ನರ್ ಅವರನ್ನು ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಅವರ ಪತ್ನಿಯ ಜೊತೆಗೆ ಹಲವಾರು ಬಾರಿ ನೋಡಿರಬಹುದು. ಡೇವಿಡ್ ವಾರ್ನರ್ ರವರ ಪತ್ನಿ ಹೆಸರು ಕ್ಯಾಂಡಿ ವಾರ್ನರ್. ಕ್ಯಾಂಡಿ ವಾರ್ನರ್ ಮಾಡೆಲ್ ಕೂಡ ಆಗಿದ್ದಾರೆ. ಇನ್ನು ಇವರಿಬ್ಬರು ಮದುವೆಯಾಗಿದ್ದು 2014 ರಲ್ಲಿ ಹಾಗೂ ಮೂರು ಹೆಣ್ಣುಮಕ್ಕಳ ಪೋಷಕರಾಗಿದ್ದಾರೆ ಇವರಿಬ್ಬರು.

ಮುಸ್ತಾಫಿಜುರ್ ರೆಹ್ಮಾನ್; ಮುಸ್ತಾಫಿಜುರ್ ರವರು ನಿಮಗೆಲ್ಲ ತಿಳಿದಿರುವಂತೆ ಬಾಂಗ್ಲಾದೇಶ ಮೂಲದವರಾಗಿದ್ದಾರೆ. ಬಾಂಗ್ಲಾದೇಶದಲ್ಲಿ ವೇಗಿ ತನ್ನ ಸಹೋದರಿ ಸಂಬಂಧಿ ಆಗಿರುವ ಸಮಿಯ ಪರ್ವೀನ್ ರವರನ್ನು ಮದುವೆಯಾಗಿರುತ್ತಾರೆ. ಇವರ ಪತ್ನಿ ಗ್ರಾಜುವೇಟ್ ಕೂಡ ಆಗಿದ್ದಾರೆ.

ರೋವ್ಮನ್ ಪೊವೆಲ್; ವೆಸ್ಟ್ ಇಂಡೀಸಿನ ಆಟಗಾರ ಮದುವೆಯಾಗಿರುವುದು ಪ್ರಿಯ ಅಲೆಕ್ಸಾಂಡರ್ ರವರನ್ನು. ಪೊವೆಲ್ ರವರ ಪತ್ನಿ ಬಹುತೇಕ ನೀಡಿ ಹಾಗೂ ಪಬ್ಲಿಸಿಟಿಯಿಂದ ದೂರವೇ ಇರುತ್ತಾರೆ ಹಾಗೂ ತಮ್ಮ ಪ್ರೈವೇಟ್ ಜೀವನವನ್ನು ಆದಷ್ಟು ಪ್ರೈವೇಟ್ ಆಗಿ ಇಟ್ಟುಕೊಳ್ಳುತ್ತಾರೆ.

ಶಾರ್ದುಲ್ ಠಾಕೂರ್; ಭಾರತ ದೇಶದ ಇತ್ತೀಚಿನ ಎಮರ್ಜಿಂಗ್ ಆಲ್-ರೌಂಡರ್ ಗಳಲ್ಲಿ ಶಾರ್ದುಲ್ ಠಾಕೂರ್ರವರು ಕೂಡ ಒಬ್ಬರಾಗಿದ್ದಾರೆ. ಶಾರ್ದುಲ್ ಠಾಕೂರ್ ಅವರು ಮಿತ್ಥಲಿ ಪಾರುಲ್ಕರ್ ರವರನ್ನು ಇದೇ 2021 ರಲ್ಲಿ ಮುಂಬೈನ ಬಾಂದ್ರಾದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆಗೆ ಭಾರತೀಯ ಕ್ರಿಕೆಟ್ ತಂಡದ ಕಪ್ತಾನ ರೋಹಿತ್ ಶರ್ಮಾ ಅವಳು ಕುಲಕರ್ಣಿ ಅಭಿಷೇಕ್ ನಾಯಕರು ಸೇರಿದಂತೆ ಹಲವಾರು ಕ್ರಿಕೆಟ್ ಸ್ನೇಹಿತರು ಕೂಡ ಹಾಜರಾಗಿದ್ದರು.

ಮಂದೀಪ್ ಸಿಂಗ್; ಮಂದೀಪ್ ಸಿಂಗ್ ರವರು ಮದುವೆಯಾಗಿದ್ದು ಜಗದೀಪ್ ಜಸ್ವಾಲ್ ರವರನ್ನು. ಇವರು ಇಂಗ್ಲೆಂಡ್ ನಲ್ಲಿ ಹುಟ್ಟಿ ಬೆಳೆದಿದ್ದರೂ ಕೂಡ ಭಾರತದಲ್ಲಿ ತಮ್ಮ ಊರಾಗಿರುವ ಜಲಂಧರ್ ಗೆ ಆಗಾಗ ಬಂದುಹೋಗುತ್ತಿದ್ದರು. ಇನ್ನು ಇವರು ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿದ್ದರು. ಕಾಮನ್ ಫ್ರೆಂಡ್ ಮುಖಾಂತರ ಇಬ್ಬರಿಗೂ ಪರಿಚಿತರಾಗಿ ನಂತರ ಪ್ರಪೋಸ್ ಮಾಡುವ ಮೂಲಕ 2016 ರಲ್ಲಿ ಮದುವೆಯಾಗುತ್ತಾರೆ. ಈ ಮದುವೆಗೆ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಹಲವಾರು ಖ್ಯಾತನಾಮ ಕ್ರಿಕೆಟಿಗರು ಆಗಮಿಸಿದ್ದರು. 2021 ರಲ್ಲಿ ಒಂದು ಮಗುವಿನ ತಂದೆ ತಾಯಿ ಕೂಡ ಆಗುತ್ತಾರೆ.

ಅಕ್ಷರ ಪಟೇಲ್; ಅಕ್ಷರ ಪಟೇಲ್ ರವರು ಮೇಹ ಎನ್ನುವ ಹುಡುಗಿಯೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಮೇಹಾ ರವರು ವೃತ್ತಿಯಿಂದ ನ್ಯೂಟ್ರಿಷನ್ ಹಾಗೂ ಡಯಟೀಷಿಯನ್ ಆಗಿದ್ದಾರೆ. ಇದೇ ವರ್ಷದ ಪ್ರಾರಂಭದಲ್ಲಿ ಇಬ್ಬರು ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಇದೇ ವರ್ಷದ ಅಂತ್ಯದೊಳಗೆ ಇಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.

ಮಿಚೆಲ್ ಮಾರ್ಷ್; ಆಸ್ಟ್ರೇಲಿಯ ತಂಡದ ಆಲ್-ರೌಂಡರ್ ಆಗಿರುವ ಮಿಚೆಲ್ ಮಾರ್ಷ್ ರವರು ಗ್ರೇಟ್ ಮ್ಯಾಕ್ ಎನ್ನುವವರನ್ನು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಮಿಚೆಲ್ ಮಾರ್ಷ್ ರವರ ಭಾವಿಪತ್ನಿಯ ಕುಟುಂಬದ ಬ್ಯುಸಿನೆಸ್ ಕೂಡ ಇದೆ. ಇವರೇ ಡೆಲ್ಲಿ ತಂಡದ ಸ್ಟಾರ್ ಆಟಗಾರ ಸುಂದರ ಪತ್ನಿಯರು ಅಥವಾ ಗೆಳತಿಯರು. ಲೇಖನಿಯ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.